'ಗೋವುಗಳ ಹೆಸರಿನಲ್ಲಿ ಕಾನೂನು ದುರುಪಯೋಗಕ್ಕೆ ಅವಕಾಶ ನೀಡುವುದಿಲ್ಲ': ಡಿ ಕೆ ಶಿವಕುಮಾರ್; Video

ಬೆಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, “ನೋಡೋಣ. ನಮ್ಮ ಪಕ್ಷ ಕೆಲವು ತತ್ವಗಳನ್ನು ಹೊಂದಿದೆ. ನಾವು ಗೋವುಗಳನ್ನು ರಕ್ಷಿಸುತ್ತೇವೆ ಮತ್ತು ಅವುಗಳಿಗೆ ಗೌರವ ನೀಡುತ್ತೇವೆ. ಈ ಹಿಂದೆ (ಬಿಜೆಪಿ ಆಡಳಿತಾವಧಿಯಲ್ಲಿ) ಹಲವು ಕಾನೂನುಗಳನ್ನು ಜಾರಿಗೆ ತರಲಾಗಿದೆ ಎಂದರು.
D K Shivakumar
ಡಿ ಕೆ ಶಿವಕುಮಾರ್
Updated on: 

ಮತಾಂತರ ನಿಷೇಧ ಮತ್ತು ಗೋಹತ್ಯೆ ನಿಷೇಧ ಕಾಯ್ದೆಗಳನ್ನು ರದ್ದುಗೊಳಿಸಲು ಕಾಂಗ್ರೆಸ್ ಸರ್ಕಾರ ಮುಂದಾದರೆ ಅದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಕಾಂಗ್ರೆಸ್ ತನ್ನದೇ ಆದ ತತ್ವಗಳನ್ನು ಹೊಂದಿದ್ದು, ಗೋವುಗಳ ರಕ್ಷಣೆ ಹಾಗೂ ಅವುಗಳಿಗೆ ಗೌರವ ನೀಡುವುದನ್ನು ನಂಬುತ್ತದೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, “ನೋಡೋಣ. ನಮ್ಮ ಪಕ್ಷ ಕೆಲವು ತತ್ವಗಳನ್ನು ಹೊಂದಿದೆ. ನಾವು ಗೋವುಗಳನ್ನು ರಕ್ಷಿಸುತ್ತೇವೆ ಮತ್ತು ಅವುಗಳಿಗೆ ಗೌರವ ನೀಡುತ್ತೇವೆ. ಈ ಹಿಂದೆ (ಬಿಜೆಪಿ ಆಡಳಿತಾವಧಿಯಲ್ಲಿ) ಹಲವು ಕಾನೂನುಗಳನ್ನು ಜಾರಿಗೆ ತರಲಾಗಿದೆ. ಆದರೆ, ಇತರರ ವಿರುದ್ಧ ದ್ವೇಷ ಸೃಷ್ಟಿಸುವ ಉದ್ದೇಶದಿಂದ ಕಾನೂನು ತರುವುದೆಂದರ್ಥವಲ್ಲ. ಎಲ್ಲ ಸಮುದಾಯಗಳ ಜನರ ಜೀವ ಮತ್ತು ಜೀವನೋಪಾಯವನ್ನು ನಾವು ರಕ್ಷಿಸಬೇಕಾಗಿದೆ ಎಂದು ಹೇಳಿದರು.

D K Shivakumar
ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್: Festival advance ₹50 ಸಾವಿರ ಹೆಚ್ಚಳಕ್ಕೆ ಸಿಎಂ ಅಸ್ತು..!

ಗೋ ರಕ್ಷಣೆಯ ವಿಚಾರದಲ್ಲಿ ಬಿಜೆಪಿ ನಿಲುವನ್ನು ಪ್ರಶ್ನಿಸಿದ ಅವರು, ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದಲ್ಲಿ ಇಷ್ಟೊಂದು ದೊಡ್ಡ ರಫ್ತು ಕಂಪನಿಗಳು ಏಕೆ ಇವೆ ಎಂದು ಪ್ರಶ್ನಿಸಿದರು.

ಉತ್ತರ ಪ್ರದೇಶದಲ್ಲಿ ಅಷ್ಟೊಂದು ದೊಡ್ಡ ರಫ್ತು ಕಂಪನಿಗಳು ಏಕೆ ಇವೆ? ಅದು ಅವರದೇ (ಬಿಜೆಪಿ ಆಡಳಿತದ) ರಾಜ್ಯ. ಅಲ್ಲಿ ಅವುಗಳನ್ನು ಮುಚ್ಚಿಸಲಿ ಎಂದು ಹೇಳಿದರು.

ನಾವು ಖಂಡಿತವಾಗಿಯೂ ಗೋವುಗಳನ್ನು ರಕ್ಷಿಸುತ್ತೇವೆ. ಅವುಗಳ ಸಂರಕ್ಷಣೆಗಾಗಿ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತೇವೆ, ಅವುಗಳಿಗೆ ಸಲ್ಲಬೇಕಾದ ಗೌರವವನ್ನು ನೀಡುತ್ತೇವೆ. ಆದರೆ, ಇಂತಹ ಕಾನೂನುಗಳ ಹೆಸರಿನಲ್ಲಿ ಯಾರೂ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಲು ನಾವು ಅವಕಾಶ ನೀಡುವುದಿಲ್ಲ ಎಂದು ಡಿ ಕೆ ಶಿವಕುಮಾರ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X