ನಮ್ಮ MLA ಭೇಟಿಯಾಗಬೇಕು: ಅಮೆರಿಕಾಗೆ ಉಚಿತ ವೀಸಾ ಕೊಡಿಸಿ; ದರ್ಶನ್ ಪುಟ್ಟಣ್ಣಯ್ಯ ವಿರುದ್ಧ ಆಕ್ರೋಶಗೊಂಡ ರೈತರಿಂದ DCಗೆ ಮನವಿ

ಶಾಸಕರಾಗಿ ಆಯ್ಕೆಯಾದಗಿನಿಂದ ಪದೇ ಪದೇ ದರ್ಶನ್ ಪುಟ್ಟಣಯ್ಯ ಅವರು ವಿದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಶಾಸಕರಾದಾಗಿನಿಂದ ಈವರೆಗೆ 18 ಬಾರಿ ಅಮೆರಿಕಕ್ಕೆ ಭೇಟಿ ನೀಡಿದ್ದಾರೆ.
ದರ್ಶನ್ ಪುಟ್ಟಣ್ಣಯ್ಯ
ದರ್ಶನ್ ಪುಟ್ಟಣ್ಣಯ್ಯ
Updated on: 

ಬೆಂಗಳೂರು: ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಪದೇ ಪದೇ ಅಮೆರಿಕಾಕ್ಕೆ ಪ್ರಯಾಣ ಬೆಳೆಸುತ್ತಿರುವುದರಿಂದ ಅಸಮಾಧಾನಗೊಂಡಿರುವ ಕ್ಷೇತ್ರದ ಮತದಾರರು, ಶಾಸಕರನ್ನು ಭೇಟಿಯಾಗಲು ಉಚಿತ ಅಮೆರಿಕಾ ವೀಸಾ ಕೊಡಿಸುವಂತೆ ಮಂಡ್ಯ ಜಿಲ್ಲಾಧಿಕಾರಿಗೆ ವ್ಯಂಗ್ಯವಾಗಿ ಮನವಿ ಮಾಡಿದ್ದಾರೆ.

ಮೇಲುಕೋಟೆ ಕ್ಷೇತ್ರದ ನಿವಾಸಿಗಳ ಗುಂಪೊಂದು ಮಂಡ್ಯದ ಜಿಲ್ಲಾಧಿಕಾರಿಗಳ ಕಚೇರಿಯ ಹೊರಗೆ ಶಾಂತಿಯುತ ಪ್ರತಿಭಟನೆ ನಡೆಸಿತು. ತಮ್ಮ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಸಂಪರ್ಕಿಸಲು ಸಾಧ್ಯವಾಗುವಂತೆ ಅಮೆರಿಕಕ್ಕೆ ವೀಸಾ ನೀಡಬೇಕೆಂದು ಅವರು ಈ ಮೂಲಕ ಒತ್ತಾಯಿಸಿದರು.

ತೀವ್ರ ಬರಗಾಲವಿದ್ದರೂ ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ಶಾಸಕರು ವಿದೇಶಕ್ಕೆ ಹೋಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು 'ಕರ್ನಾಟಕ ಸರ್ವೋದಯ ಪಕ್ಷ' ಎಂಬ ರೈತಪರ ಪಕ್ಷದ ಏಕೈಕ ಸದಸ್ಯರಾಗಿದ್ದು, 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿತ್ತು.

ಶಾಸಕರಾಗಿ ಆಯ್ಕೆಯಾದಗಿನಿಂದ ಪದೇ ಪದೇ ದರ್ಶನ್ ಪುಟ್ಟಣಯ್ಯ ಅವರು ವಿದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಶಾಸಕರಾದಾಗಿನಿಂದ ಈವರೆಗೆ 18 ಬಾರಿ ಅಮೆರಿಕಕ್ಕೆ ಭೇಟಿ ನೀಡಿದ್ದಾರೆ. ಶಾಸಕರು ಕ್ಷೇತ್ರದಲ್ಲಿರುವ ಬದಲು ಪದೇ ಪದೇ ವಿದೇಶ ಮಾಡುತ್ತಿದ್ದ, ಕ್ಷೇತ್ರದ ಜನರ ಸಮಸ್ಯೆ ಆಲಿಸುತ್ತಿಲ್ಲ ಎಂದು ಕ್ಷೇತ್ರದ ಮತದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದರ್ಶನ್ ಪುಟ್ಟಣ್ಣಯ್ಯ
ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಫೋಟ: ರಾಹುಲ್ ಗಾಂಧಿ ಮಧ್ಯಪ್ರವೇಶಕ್ಕೆ ಶಾಸಕ ಬಿ.ಆರ್ ಪಾಟೀಲ್ ಒತ್ತಾಯ; ಇದೇ ಕಾರಣ!

ನನ್ನ ಕುಟುಂಬ ಅಮೆರಿಕದಲ್ಲಿ ವಾಸಿಸುತ್ತಿರುವುದು ನಿಜ ಎಂದು ದರ್ಶನ್ ಪುಟ್ಟಣ್ಣಯ್ಯ ಹೇಳಿದರು. ಅವರ ತಂದೆ ಕೆ.ಎಸ್. ಪುಟ್ಟಣ್ಣಯ್ಯ ಅವರ ನಿಧನದ ನಂತರ ಅವರು 2021ರಲ್ಲಿ ಭಾರತಕ್ಕೆ ಮರಳಿದರು. 2021ರಲ್ಲಿ ತಮ್ಮ ಕಂಪನಿಯನ್ನು ಮಾರಾಟ ಮಾಡಿದರೂ, 2023ರವರೆಗೆ ಅದೇ ಕಂಪನಿಯಲ್ಲಿ ಕೆಲಸ ಮಾಡಿದರು.

ನಂತರ ಚುನಾವಣೆಯಲ್ಲಿ ಸ್ಪರ್ಧಿಸಲು ಭಾರತಕ್ಕೆ ಬಂದರು. ಆದರೆ, ಅವರ ಪತ್ನಿ ಮತ್ತು ಮಕ್ಕಳು ಅವರೊಂದಿಗೆ ಬರಲಿಲ್ಲ. ನಾನು ಅವರೊಂದಿಗೆ ಮಾತನಾಡಿದಾಗ, ಭಾರತಕ್ಕೆ ಬರುವ ಬಗ್ಗೆ ಅವರಿಗೆ ಆತಂಕವಿತ್ತು. ಅದು ನಮ್ಮ ಜೀವನವನ್ನೇ ಬುಡಮೇಲು ಮಾಡಿದಂತಾಗುತ್ತದೆಎಂದು ಅವರು ಹೇಳಿದರು.

ಆದ್ದರಿಂದ, ನನ್ನ ಕುಟುಂಬದೊಂದಿಗೆ ಇರಲು ಅಗತ್ಯವಿದ್ದಾಗಲೆಲ್ಲಾ ಅಮೆರಿಕಕ್ಕೆ ಭೇಟಿ ನೀಡುವುದನ್ನು ಬಿಟ್ಟು ನನಗೆ ಬೇರೆ ದಾರಿಯಿಲ್ಲ ದರ್ಶನ್ ಪುಟ್ಟಣ್ಣಯ್ಯ ವಿವರಿಸಿದ್ದಾರೆ.

ತಮ್ಮ ವಿದೇಶ ಪ್ರವಾಸಗಳ ಬಗ್ಗೆ ಟೀಕಾಕಾರರು ಲೆಕ್ಕವಿಟ್ಟಿದ್ದಾರೆ ಎಂಬುದನ್ನು ಅವರು ಒಪ್ಪಿಕೊಂಡರು. ಆಯ್ಕೆಯಾದಾಗಿನಿಂದ ಅವರು 18 ರಿಂದ 19 ಬಾರಿ ಅಮೆರಿಕಕ್ಕೆ ಪ್ರಯಾಣಿಸಿದ್ದಾರೆ. "ನಾನೇನು ಹೇಳಲಿ? ನಾನು ದಿನದ 24 ಗಂಟೆಯೂ ವಾಟ್ಸಾಪ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿರುತ್ತೇನೆ. ನಾನು ಭೌತಿಕವಾಗಿ ಅಲ್ಲಿ ಇಲ್ಲದಿರಬಹುದು, ಆದರೆ ನನ್ನ ಕ್ಷೇತ್ರದ ಜನರ ಪರವಾಗಿ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದೇನೆ," ಎಂದು ಅವರು ಹೇಳಿದರು.

ದರ್ಶನ್ ಪುಟ್ಟಣ್ಣಯ್ಯ
ಶಾಸಕರ ಭವನದ ವಾಹನ ದುರ್ಬಳಕೆಗೆ ಬ್ರೇಕ್: ವಿಧಾನಸಭಾ ಕಾರ್ಯಾಲಯದಿಂದ ಕಠಿಣ ರೂಲ್ಸ್; ಬಾಡಿಗೆ ನೇರವಾಗಿ ಶಾಸಕರ ವೇತನದಿಂದಲೇ ವಸೂಲಿ..!

ಮೇಲುಕೋಟೆಯ ಜನರಿಗಾಗಿ ತಾವು ರೂಪಿಸಿರುವ ಎರಡು ಡಿಜಿಟಲ್ ವೇದಿಕೆಗಳ ಬಗ್ಗೆ ಅವರು ಪ್ರಸ್ತಾಪಿಸಿದರು. ಇವುಗಳ ಮೂಲಕ ಅವರು ನಿವಾಸಿಗಳ ಸಮಸ್ಯೆಗಳನ್ನು ಬಗೆಹರಿಸಲು ಸಹಾಯ ಮಾಡುತ್ತಾರೆ. ಎಲ್ಲರಿಗೂ ಲಾಭದಾಯಕವಾಗುವ ಸೂತ್ರಗಳನ್ನು ಬಳಸುವ ಮೂಲಕ, ರೈತರಿಗೆ ಸೂಕ್ತ ಬೆಲೆ ಸಿಗುವಂತೆ ಮಾಡಲು ನಾವು ಸ್ಥಳೀಯ 'ಸರ್ಕ್ಯುಲರ್ ಎಕಾನಮಿ'ಯನ್ನು (ಚಕ್ರೀಯ ಆರ್ಥಿಕತೆ) ಉತ್ತೇಜಿಸುತ್ತಿದ್ದೇವೆ. ಪ್ರತಿ ಹಂಗಾಮಿನಲ್ಲಿ ಏನು ಮತ್ತು ಎಷ್ಟು ಪ್ರಮಾಣದಲ್ಲಿ ಬೆಳೆಯಬೇಕು ಎಂಬುದರ ಕುರಿತು ರೈತರಿಗೆ ಸಲಹೆ ನೀಡುವುದು ಇದಕ್ಕೆ ಒಂದು ಉದಾಹರಣೆ. ರೈತಪರ ಪಕ್ಷವಾಗಿ, ಇದು ನಮ್ಮ ಕರ್ತವ್ಯ," ಎಂದು ಅವರು ಹೇಳಿದರು.

ವಿಧಾನಸಭೆ ಕಲಾಪಗಳಿಗೆ ಹಾಜರಾತಿಯ ಕುರಿತು ಮಾತನಾಡುತ್ತಾ, "ನಾನು ಒಂದೇ ಒಂದು ಅಧಿವೇಶನವನ್ನೂ ತಪ್ಪಿಸುವುದಿಲ್ಲ," ಎಂದು ಅವರು ಹೇಳಿದರು. ಅವರು ಅಮೆರಿಕಕ್ಕೆ ಭೇಟಿ ನೀಡುವುದು ಕೇವಲ ಸದನದ ಕಲಾಪಗಳು ನಡೆಯದ ವಿರಾಮದ ಅವಧಿಯಲ್ಲಿ ಮಾತ್ರ. ಆದರೆ ಏನೇ ಆದರೂ, ನನ್ನ ಮತಕ್ಷೇತ್ರದ ಜನರ ಬಗೆಗಿನ ನನ್ನ ಬದ್ಧತೆ ಹಾಗೆಯೇ ಉಳಿಯುತ್ತದೆ, ಅವರು ನನ್ನ ವಿಸ್ತೃತ ಕುಟುಂಬದವರಿದ್ದಂತೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com