ವರದಾ -ಬೆಡ್ತಿ ನದಿ ಜೋಡಣೆ ಚರ್ಚಿಸಲು ಸಭೆ ಕರೆಯಿರಿ: ಸಿಎಂಗೆ ಬಸವರಾಜ ಬೊಮ್ಮಾಯಿ ಪತ್ರ

ನಮ್ಮ ಭಾಗದ ಜನರ ಸಂಕಷ್ಟವನ್ನು ನಿವಾರಣೆ ಮಾಡಲು ಸ್ಪಷ್ಟವಾದ ನಿರ್ಣಯಗಳನ್ನು ಮಾಡಬೇಕೆಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿಗೆ ಸಂಸದ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
Basavaraj Bommai
ಬಸವರಾಜ ಬೊಮ್ಮಾಯಿ
Updated on: 

ಬೆಂಗಳೂರು: ವರದಾ ಬೆಡ್ತಿ ನದಿ ಜೋಡಣೆಯ ಡಿಪಿಆರ್ ತ್ವರಿತಗತಿಯಲ್ಲಿ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಡಬೇಕು. ಈ ವಿಷಯದ ಕುರಿತು ಸುದೀರ್ಘವಾಗಿ ಚರ್ಚಿಸಬೇಕೆಂದು ಸಂಸದ ಬಸವರಾಜ ಬೊಮ್ಮಾಯಿ ಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.

ನದಿ ಜೋಡಣೆಯ ಡಿಪಿಆರ್ ತ್ವರಿತಗತಿಯಲ್ಲಿ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಡಬೇಕು ಮತ್ತು ಈ ವಿಷಯದ ಕುರಿತು ಸುದೀರ್ಘವಾಗಿ ಚರ್ಚಿಸಬೇಕು. ಹಾವೇರಿ ಜಿಲ್ಲೆಯ ಎಲ್ಲ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಇತರ ಪ್ರಮುಖ ಹೋರಾಟಗಾರರ ಒಂದು ಸಭೆಯನ್ನು ಬೆಂಗಳೂರಿನಲ್ಲಿ ನಡೆಸಿ.

ನಮ್ಮ ಭಾಗದ ಜನರ ಸಂಕಷ್ಟವನ್ನು ನಿವಾರಣೆ ಮಾಡಲು ಸ್ಪಷ್ಟವಾದ ನಿರ್ಣಯಗಳನ್ನು ಮಾಡಬೇಕೆಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿಗೆ ಸಂಸದ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರ ಬರೆದಿರುವ ಅವರು, ರಾಜ್ಯದಲ್ಲಿ ಈಗ ತೀವ್ರವಾದಂತಹ ಬರಗಾಲದ ಬರೆ ಅನುಭವಿಸುತ್ತಿದ್ದೇವೆ. ಇದರಿಂದ ರಾಜ್ಯದ ಜನ ಸಾಮಾನ್ಯರ ಬದುಕು ಅತ್ಯಂತ ಕಷ್ಟಕರವಾಗಿದೆ. ಬರುವ ದಿನಗಳಲ್ಲಿ ಕುಡಿಯುವ ನೀರು ದನಕರುಗಳಿಗೆ ನೀರು ಮತ್ತು ಮೇವು ಕೂಡ ಸಿಗದಂತಹ ಭೀಕರವಾದ ಪರಿಸ್ಥಿತಿ ಎದುರಿಸಬೇಕಾಗಿದೆ. ಮಳೆಯನ್ನೇ ನಂಬಿಕೊಂಡಿರುವ ರೈತರು ಅಪಾರ ಕಷ್ಟ ನಷ್ಟ ನಿರಂತರ ಅನುಭವಿಸುತ್ತಿದ್ದಾರೆ.

Basavaraj Bommai
'ನೀರಿನ ಹಂಚಿಕೆ ರಿಯಲ್ ಎಸ್ಟೇಟ್ ಬಿಸ್ನೆಸ್ ಥರ ಅಲ್ಲ, ನದಿ ಜೋಡಣೆ ಯೋಜನೆ ಬಗ್ಗೆ ಅಧ್ಯಯನ ಮಾಡಿ ಘೋಷಣೆ ಮಾಡಿ': HD ಕುಮಾರಸ್ವಾಮಿ; Video

ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಬರ ಅತ್ಯಂತ ಸಾಮಾನ್ಯ ವಿಷಯವಾಗಿದೆ. ಕಳೆದ ಮೂವತ್ತು ವರ್ಷದಲ್ಲಿ ಹದಿನೇಳು ವರ್ಷ ಬರವನ್ನು ಉತ್ತರ ಕರ್ನಾಟಕದ ಜನ ಅನುಭವಿಸುತ್ತಿದ್ದಾರೆ. ಬರ ನಿರ್ವಹಣೆ ಅಲ್ಪಾವಧಿಯ ಕೆಲವು ಕ್ರಮಗಳನ್ನು ರಾಜ್ಯ ತೆಗೆದುಕೊಳ್ಳಬೇಕು ಮತ್ತು ಕೇಂದ್ರ ನೆರವಿಗೆ ಬರಬೇಕು.

ವಿಶೇಷವಾಗಿ ಕುಡಿಯವ ನೀರು, ಮೇವು, ಜನರ ಕೈಗೆ ಕೆಲಸ ಕೊಡುವ ಕೆಲಸವನ್ನು ತಾವು ಮಾಡಬೇಕೆಂದು ಆಗ್ರಹಪಡಿಸುತ್ತಾ ಕೆಲವು ಶಾಶ್ವತವಾದ ಕ್ರಮಗಳನ್ನು ತೆಗೆದುಕೊಳ್ಳಲು ಅತ್ಯಂತ ಸೂಕ್ತಕಾಲವಾಗಿದೆ. ಅದರಲ್ಲಿ ನದಿ ಜೋಡಣೆಯ ಯೋಜನೆ ಅಡಿಯಲ್ಲಿ ಬೇಡ್ತಿ-ವರದಾ ಜೋಡಣೆ ಅತ್ಯಂತ ಪ್ರಮುಖವಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com