ಗಾಂಧೀಜಿ ವಿಚಾರಧಾರೆ ಅಳಿಸಲು ಯಾರಿಂದಲೂ ಸಾಧ್ಯವಿಲ್ಲ: ಗಾಂಧಿವಾದಿ ಎಸ್.ಕರಿಯಪ್ಪ ಅವರಿಂದ ರಾಜಕೀಯ ಪ್ರವೇಶಿಸಲು ಪ್ರೇರಣೆ; ಸಿಎಂ

ಈ ದೇಶದಲ್ಲಿ ಎರಡು ವಿಚಾರಧಾರೆಗಳಿವೆ. ಒಂದು ಗಾಂಧಿವಾದಿ ತತ್ವವನ್ನು ಒಪ್ಪಿಕೊಂಡಿರುವ ಕುಟುಂಬ, ಮತ್ತೊಂದು ಗಾಂಧಿವಾದವನ್ನು ವಿರೋಧಿಸುವ ಗುಂಪು. ಇವೆರಡರ ನಡುವಿನ ಸಂಘರ್ಷವನ್ನು ದೇಶ ನೋಡುತ್ತಿದೆ ಎಂದು ಹೇಳಿದರು.
DK Shivakumar
ಡಿಕೆ ಶಿವಕುಮಾರ್
Updated on: 

ಬೆಂಗಳೂರು: ಗಾಂಧೀಜಿ ಅವರನ್ನು ವಿಶ್ವ ಒಪ್ಪಿಕೊಂಡಿದೆ. ಅವರ ಹೆಸರು, ವಿಚಾರಧಾರೆ ಅಳಿಸಲು ಯಾರಿಂದಲೂ ಸಾಧ್ಯವಿಲ್ಲ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ಗಾಂಧೀ ಜಯಂತಿ ಅವರ ಜನ್ಮದಿನದ ಅಂಗವಾಗಿ ಸಿಎಂ ಡಿ ಕೆ ಶಿವಕುಮಾರ್ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಶುಕ್ರವಾರ ಬೆಳಗ್ಗೆ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ನಂತರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೌರಕಾರ್ಮಿಕರಿಗೆ ಸನ್ಮಾನ ಮಾಡಿದರು. ನಂತರ ಸರ್ಕಾರಿ ಕಲಾ ಕಾಲೇಜಿನಲ್ಲಿ ಮಹಾತ್ಮಾ ಗಾಂಧಿ ಸ್ಮಾರಕ ಸ್ತಂಭ ಅನಾವರಣಗೊಳಿಸಿದರು. ಬಳಿಕ ಗಾಂಧಿ ಭವನದಲ್ಲಿ ನಡೆದ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಎಲ್ಲರೂ ಮಹಾತ್ಮ ಗಾಂಧೀಜಿ ಅವರನ್ನು ಸ್ಮರಿಸುತ್ತಾರೆ. ಅವರ ಪ್ರತಿಮೆಗೆ ಗೌರವ ಸಲ್ಲಿಸುತ್ತಾರೆ. ವಿದೇಶದಿಂದ ಬರುವ ಗಣ್ಯರೂ ರಾಜಘಾಟ್ ಗೆ ತೆರಳಿ ಗೌರವ ಸಲ್ಲಿಸುತ್ತಾರೆ. ಗಾಂಧೀಜಿ ಅವರನ್ನು ಜನ ಒಪ್ಪಿಕೊಂಡಿದ್ದಾರೆ, ವಿಶ್ವ ಒಪ್ಪಿಕೊಂಡಿದೆ. ಅವರ ಪ್ರತಿಮೆಯನ್ನು ತೆಗೆದುಹಾಕಲು ಯಾರಿಂದಲೂ ಸಾಧ್ಯವಿಲ್ಲ” ಎಂದರು.

DK Shivakumar
'FIR ಆಗೋ ತನಕ ಇಲ್ಲಿಂದ ಕದಲೋದಿಲ್ಲ': ಸಿಎಂ ಡಿ.ಕೆ ಶಿವಕುಮಾರ್ ಪಟ್ಟು, ಧರಣಿ, CEO ಕಚೇರಿ ಮುಂದೆ ಹೈಡ್ರಾಮಾ; Video

“ಮಹಾತ್ಮ ಗಾಂಧೀಜಿ ಭಾರತದ ಆತ್ಮದಂತಿದ್ದು, ವಿಶ್ವಕ್ಕೆ ಶಾಂತಿ ಮತ್ತು ಸಹಬಾಳ್ವೆಯ ಸಂದೇಶ ನೀಡಿದ ಶ್ರೇಷ್ಠ ವ್ಯಕ್ತಿ. ಯಾವುದೇ ರಾಜಕೀಯ ಪಕ್ಷದವರು ಗಾಂಧೀಜಿ ವಿಚಾರಧಾರೆಯನ್ನು ಒಪ್ಪಿಕೊಳ್ಳಲು ಹಿಂಜರಿಯಬಾರದು. ಈ ವಿಚಾರವನ್ನು ಇಂದಿನ ಪೀಳಿಗೆ ಗಂಭೀರವಾಗಿ ಚರ್ಚಿಸಬೇಕು” ಎಂದು ತಿಳಿಸಿದರು.

“ಈ ದೇಶದಲ್ಲಿ ಎರಡು ವಿಚಾರಧಾರೆಗಳಿವೆ. ಒಂದು ಗಾಂಧಿವಾದಿ ತತ್ವವನ್ನು ಒಪ್ಪಿಕೊಂಡಿರುವ ಕುಟುಂಬ, ಮತ್ತೊಂದು ಗಾಂಧಿವಾದವನ್ನು ವಿರೋಧಿಸುವ ಗುಂಪು. ಇವೆರಡರ ನಡುವಿನ ಸಂಘರ್ಷವನ್ನು ದೇಶ ನೋಡುತ್ತಿದೆ ಎಂದು ಹೇಳಿದರು.

“ವ್ಯಕ್ತಿ ಮರಣ ಹೊಂದಿದರೂ ಅವರ ವಿಚಾರಧಾರೆಗಳು ಸಾಯುವುದಿಲ್ಲ. ವಿಶ್ವದ ಹಲವು ರಾಷ್ಟ್ರಗಳಲ್ಲಿ ಗಾಂಧೀಜಿ ಪ್ರತಿಮೆಗಳಿವೆ. ಅನೇಕ ವಿಶ್ವವಿದ್ಯಾಲಯಗಳಲ್ಲಿ ಅವರ ಚಿಂತನೆಗಳನ್ನು ಅಧ್ಯಯನ ಮಾಡಲಾಗುತ್ತಿದೆ. ಅಹಿಂಸಾ ದಿನ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ವಿಶ್ವವೇ ಗಾಂಧೀಜಿ ವಿಚಾರಗಳನ್ನು ಸ್ಮರಿಸುತ್ತಿದೆ. ಗಾಂಧೀಜಿ ನಿಧನರಾದ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಕಟ್ಟಡದ ಮೇಲಿದ್ದ ವಿವಿಧ ರಾಷ್ಟ್ರಗಳ ಧ್ವಜಗಳನ್ನು ಕೆಳಗಿಳಿಸಿ ಗೌರವ ಸಲ್ಲಿಸಲಾಗಿತ್ತು. ಗಾಂಧೀಜಿ ಅವರ ಜಾಗತಿಕ ಪ್ರಭಾವವನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.

ಗಾಂಧಿವಾದಿ ಎಸ್.ಕರಿಯಪ್ಪ ಅವರಿಂದ ತಮಗೆ ರಾಜಕೀಯ ಪ್ರವೇಶದ ಪ್ರೇರಣೆ ದೊರೆಯಿತು. ನಾನು 12–13 ವರ್ಷದವನಿದ್ದಾಗ ಕನಕಪುರದಲ್ಲಿ ಎಸ್.ಕರಿಯಪ್ಪ ಎಂಬ ಗಾಂಧಿವಾದಿ ಶಾಸಕರಿದ್ದರು. ನಮ್ಮ ತಂದೆ-ತಾಯಿ ನನ್ನನ್ನು ಅವರ ಬಳಿ ಕರೆದುಕೊಂಡು ಹೋಗಿ ಅವರ ಕಾಲಿಗೆ ನಮಸ್ಕಾರ ಮಾಡಿಸಿದ್ದರು. ಅವರು ಸ್ವಾತಂತ್ರ್ಯ ಹೋರಾಟ ಮಾಡಿದವರು, ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಎಂದು ಹೇಳಿದ್ದರು” ಎಂದು ಸ್ಮರಿಸಿದರು.

“ಆ ಸಂದರ್ಭದಲ್ಲಿ ಜನರು ರಾಜಕಾರಣಿಗಳಿಗೆ ನೀಡುತ್ತಿದ್ದ ಗೌರವವನ್ನು ಕಂಡು ತಾನೂ ರಾಜಕಾರಣಕ್ಕೆ ಬರಬೇಕು ಎಂಬ ಆಲೋಚನೆ ಮೂಡಿತು. ಯಾವುದೇ ವೃತ್ತಿಯಲ್ಲಿದ್ದರೂ ಜನಸೇವೆ ಮಾಡುವ ಅವಕಾಶ ರಾಜಕಾರಣದಲ್ಲಿ ಇದೆ ಎಂಬ ಭಾವನೆಯಿಂದ ರಾಜಕೀಯಕ್ಕೆ ಹೆಜ್ಜೆ ಇಟ್ಟೆ” ಎಂದು ಹೇಳಿದರು.

DK Shivakumar
ಮಹಾತ್ಮಾ ಗಾಂಧಿಗೆ ಜೀವನಗಾಥೆ ತಿಳಿಯಬೇಕೆ?: ಬೆಂಗಳೂರಿನ ಗಾಂಧಿ ಭವನಕ್ಕೆ ಬನ್ನಿ, ಸ್ಕ್ಯಾನ್ ಮಾಡಿ ಚರಿತ್ರೆ ಓದಿ...

ಗಾಂಧೀಜಿಯವರು ಧೀಮಂತ ನಾಯಕರಾಗಿದ್ದು, ಅಪರೂಪದ ವ್ಯಕ್ತಿತ್ವ ಹೊಂದಿದ್ದರು. ಭಾರತಕ್ಕೆ ಮಾತ್ರವಲ್ಲದೇ, ವಿಶ್ವಕ್ಕೆ ಶಾಂತಿಯ ಸಂದೇಶ ನೀಡಿದ ಶಾಂತಿಯ ಧೂತರಾಗಿದ್ದರು. ಗಾಂಧಿ ತತ್ವಗಳನ್ನು ಪಾಲಿಸುವ ನಾವೆಲ್ಲರೂ ಗಾಂಧಿ ಕುಟುಂಬದವರೇ ಆಗಿದ್ದೇವೆ. ಅವರ ವಿಚಾರಧಾರೆಗಳ ಹಾದಿಯಲ್ಲಿ ನಮ್ಮ ಸರ್ಕಾರ ನಡೆಯುತ್ತಿದೆ” ಎಂದರು.

“ಕುರ್ಚಿಯಿಂದ ಬರುವ ಗೌರವ ಶಾಶ್ವತವಲ್ಲ ಸೇವೆಯಿಂದ ದೊರಕುವ ಗೌರವ ಶಾಶ್ವತವಾದದ್ದು. ನಿನ್ನನ್ನು ನೀನು ನಿಯಂತ್ರಿಸಿಕೊಳ್ಳಬೇಕಾದರೆ ನಿನ್ನ ಮೆದುಳನ್ನು ಉಪಯೋಗಿಸು ಮತ್ತೊಬ್ಬರನ್ನು ನಿಯಂತ್ರಿಸಲು ನಿನ್ನ ಹೃದಯವನ್ನು ಉಪಯೋಗಿಸು" ಎಂಬ ಗಾಂಧಿ ಅವರ ಹೇಳಿಕೆಯನ್ನು ಮುಖ್ಯಮಂತ್ರಿಗಳು ಸ್ಮರಿಸಿದರು.

"Full effort is full Victory" ಎಂದು ಮಹಾತ್ಮ ಗಾಂಧಿ ಹೇಳಿದ್ದು, ಈ ವಿಚಾರವನ್ನು ಅಳವಡಿಸಿಕೊಳ್ಳಲು ನಾನು ಸದಾ ಪ್ರಯತ್ನಿಸುತ್ತಿದ್ದೇನೆ. ನಾನು ಯಾವುದೇ ವಿಚಾರದಲ್ಲಿ ಸಂಪೂರ್ಣ ಶ್ರಮವನ್ನು ಹಾಕಿದಾಗಲೇ ನಾನು ಯಶಸ್ಸು ಕಂಡಿದ್ದೇನೆ” ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com