ಮಹಾತ್ಮಾ ಗಾಂಧಿಗೆ ಜೀವನಗಾಥೆ ತಿಳಿಯಬೇಕೆ?: ಬೆಂಗಳೂರಿನ ಗಾಂಧಿ ಭವನಕ್ಕೆ ಬನ್ನಿ, ಸ್ಕ್ಯಾನ್ ಮಾಡಿ ಚರಿತ್ರೆ ಓದಿ...

ಮಹಾತ್ಮಾ ಗಾಂಧೀಜಿಯವರ ಬಾಲ್ಯದಿಂದ ಹಿಡಿದು ಜೀವನದ ಅಂತಿಮ ದಿನಗಳವರೆಗೆ ಅವರ ಜೀವನ ಪಯಣವನ್ನು ಡಿಜಿಟಲ್ ರೂಪದಲ್ಲಿ ವೀಕ್ಷಕರಿಗೆ ಪರಿಚಯಿಸುವುದು ಈ ವಸ್ತು ಸಂಗ್ರಹಾಲಯದ ವಿಶೇಷತೆಯಾಗಿದೆ.
Gandhi Bhavan president Wooday P Krishna and treasurer Dinesh HB shows
ಗಾಂಧೀಜಿ ಅವರ ಜೀವನಕ್ಕೆ ಸಮರ್ಪಿತವಾಗಿರುವ ಡಿಜಿಟಲ್ ವಸ್ತುಸಂಗ್ರಹಾಲಯದಲ್ಲಿ ವೀಕ್ಷಕರು ಹೆಚ್ಚು ಸಮಗ್ರ ಅನುಭವ ಪಡೆಯುವ ವಿಧಾನವನ್ನು ಗಾಂಧಿ ಭವನದ ಅಧ್ಯಕ್ಷ ವೂಡೇ ಪಿ. ಕೃಷ್ಣ ಹಾಗೂ ಖಜಾಂಚಿ ದಿನೇಶ್ ಎಚ್.ಬಿ. ವಿವರಿಸುತ್ತಿರುವುದು.
Updated on: 

ಬೆಂಗಳೂರು: ಮಹಾತ್ಮ ಗಾಂಧೀಜಿ ಅವರ ಜೀವನಕ್ಕೆ ಸಮರ್ಪಿತ ರಾಜ್ಯದ ಮೊದಲ ಡಿಜಿಟಲ್ ವಸ್ತು ಸಂಗ್ರಹಾಲಯ ‘ಮಹಾತ್ಮನ ಪಯಣ’ ಇಂದು ಶುಕ್ರವಾರ ಅಕ್ಟೋಬರ್ 2ರಂದು ಗಾಂಧಿ ಭವನದಲ್ಲಿ ಉದ್ಘಾಟನೆಯಾಗಲಿದೆ.

ಮಹಾತ್ಮಾ ಗಾಂಧೀಜಿಯವರ ಬಾಲ್ಯದಿಂದ ಹಿಡಿದು ಜೀವನದ ಅಂತಿಮ ದಿನಗಳವರೆಗೆ ಅವರ ಜೀವನ ಪಯಣವನ್ನು ಡಿಜಿಟಲ್ ರೂಪದಲ್ಲಿ ವೀಕ್ಷಕರಿಗೆ ಪರಿಚಯಿಸುವುದು ಈ ವಸ್ತು ಸಂಗ್ರಹಾಲಯದ ವಿಶೇಷತೆಯಾಗಿದೆ.

ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಾಂಧಿ ಭವನದ ಅಧ್ಯಕ್ಷ ವೂಡೇ ಪಿ. ಕೃಷ್ಣ, ದೆಹಲಿ ರಾಷ್ಟ್ರೀಯ ಗಾಂಧಿ ವಸ್ತು ಸಂಗ್ರಹಾಲಯದ ನಿರ್ದೇಶಕ ಡಾ. ಎ. ಅನ್ನಾಮಲೈ ಅವರು ಈ ವಸ್ತು ಸಂಗ್ರಹಾಲಯದ ಪರಿಕಲ್ಪನೆ ರೂಪಿಸಿ, ವಿನ್ಯಾಸಗೊಳಿಸಿದ್ದಾರೆ. ಛಾಯಾಚಿತ್ರಗಳು, ದಾಖಲೆಗಳು ಮತ್ತು ಕ್ಯೂಆರ್‌ ಕೋಡ್ ಸೌಲಭ್ಯ ಹೊಂದಿರುವ ಡಿಜಿಟಲ್ ತಂತ್ರಜ್ಞಾನದ ಮೂಲಕ ಗಾಂಧೀಜಿ ಅವರ ಜೀವನದ ಸಂಕ್ಷಿಪ್ತ ಚಿತ್ರಣವನ್ನು ಇಲ್ಲಿ ನೀಡಲಾಗಿದೆ ಎಂದು ಹೇಳಿದರು.

Gandhi Bhavan president Wooday P Krishna and treasurer Dinesh HB shows
ಗಾಂಧಿ ಜಯಂತಿ: ರಾಜಘಾಟ್‌ನಲ್ಲಿ ಮಹಾತ್ಮ ಗಾಂಧಿಗೆ, ವಿಜಯ್ ಘಾಟ್‌ನಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಗೆ ಪ್ರಧಾನಿ ಮೋದಿ ನಮನ..!

ವಸ್ತು ಸಂಗ್ರಹಾಲಯದ ಆವರಣದಲ್ಲಿ ಸಬರಮತಿ ಆಶ್ರಮದ ಪ್ರತಿಕೃತಿಯನ್ನು ನಿರ್ಮಿಸಲಾಗಿದೆ. ಗಾಂಧೀಜಿ ಅವರ ಜೀವನದ ವಿವಿಧ ಘಟನೆಗಳನ್ನು ಬಿಂಬಿಸುವ ವಿಷಯಾಧಾರಿತ ಛಾಯಾಚಿತ್ರ ಗ್ಯಾಲರಿಯನ್ನು ದೆಹಲಿಯ ರಾಷ್ಟ್ರೀಯ ಗ್ಯಾಲರಿಯ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದರು.

ವಸ್ತು ಸಂಗ್ರಹಾಲಯದಲ್ಲಿ ಗಾಂಧೀಜಿ ಅವರ ಮೂಲ ಛಾಯಾಚಿತ್ರಗಳನ್ನು ವೀಕ್ಷಿಸಬಹುದಾಗಿದೆ. ಸ್ಮಾರ್ಟ್‌ಫೋನ್ ಮೂಲಕ ಅವುಗಳಲ್ಲಿರುವ ಕ್ಯೂಆರ್‌ ಕೋಡ್‌ಗಳನ್ನು ಸ್ಕ್ಯಾನ್ ಮಾಡಿದರೆ, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಆಡಿಯೊ ತಂತ್ರಜ್ಞಾನದ ಮೂಲಕ ವಿವರಣೆಗಳನ್ನು ಕೇಳಬಹುದಾಗಿದೆ.

ಪ್ರತಿ ಆರು ತಿಂಗಳಿಗೊಮ್ಮೆ ಬದಲಾಯಿಸಲಾಗುವ ತಿರುಗುವ ಪ್ರದರ್ಶನ ಗ್ಯಾಲರಿಯಲ್ಲಿ ಸದ್ಯ ಗಾಂಧೀಜಿ ಅವರು ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ ಸಂದರ್ಭಗಳನ್ನು ಬಿಂಬಿಸಲಾಗಿದೆ ಎಂದು ಹೇಳಿದರು.

ಗಾಂಧೀಜಿ ಅವರು ಹಲವು ಗಣ್ಯ ವ್ಯಕ್ತಿಗಳೊಂದಿಗೆ ವಿನಿಮಯ ಮಾಡಿಕೊಂಡ ಅಪರೂಪದ ಪತ್ರಗಳು ಹಾಗೂ 1915ರಿಂದ 1937ರ ಅವಧಿಯಲ್ಲಿ ಅವರು ಕರ್ನಾಟಕಕ್ಕೆ ಭೇಟಿ ನೀಡಿದ ಸ್ಥಳಗಳ ಛಾಯಾಚಿತ್ರಗಳು ಇಲ್ಲಿನ ಪ್ರಮುಖ ಪ್ರದರ್ಶನಗಳಾಗಿವೆ. ಆರ್.ಆರ್. ದಿವಾಕರ್ ಅವರ ಮನವಿಯ ಮೇರೆಗೆ ಗಾಂಧೀಜಿ ಕನ್ನಡದಲ್ಲಿ ಬರೆದ ಸಂದೇಶವನ್ನೂ ಸಂರಕ್ಷಿಸಲಾಗಿದೆ.

ಗಾಂಧೀಜಿ ಅವರ ಹಿರಿಯ ಸಹೋದರರ ಅಪರೂಪದ ಭಾವಚಿತ್ರವೂ ವಸ್ತು ಸಂಗ್ರಹಾಲಯದಲ್ಲಿದೆ. ಎರಡನೇ ವಿಶ್ವಯುದ್ಧವನ್ನು ನಿಲ್ಲಿಸುವಂತೆ ಒತ್ತಾಯಿಸಿ ಗಾಂಧೀಜಿ ಅವರು ಅಡಾಲ್ಫ್ ಹಿಟ್ಲರ್‌ಗೆ ಬರೆದಿದ್ದ ಪತ್ರವೂ ಪ್ರಮುಖ ಪ್ರದರ್ಶನಗಳಲ್ಲಿ ಒಂದಾಗಿದೆ. ಈ ಪತ್ರವನ್ನು ನಟ ಅಮಿತಾಭ್ ಬಚ್ಚನ್ ಅವರ ಧ್ವನಿಯಲ್ಲಿ ಓದುವುದನ್ನು ವೀಕ್ಷಕರು ಕೇಳಬಹುದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com