ಉಡುಪಿ ಕೃಷ್ಣ ಮಠದ ವಸತಿಗೃಹದಲ್ಲಿ ಮುಸ್ಲಿಂ ಯುವತಿಗೆ ವಸತಿ ನಿರಾಕರಣೆ; ಅಂಗಲಾಚಿದರೂ ಕರುಣೆ ತೋರದ ಸಿಬ್ಬಂದಿ: CPI(M) ಖಂಡನೆ

ಈ ಬಗ್ಗೆ ಸೋಮವಾರ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಗಾರ ಅವರು, ಬಳ್ಳಾರಿಯ ಯುವತಿಯೊಬ್ಬರಿಗೆ ಕೇವಲ ಅವರು ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕಾಗಿ ಅಕ್ಟೋಬರ್ 3 ರಂದು ಮಠದ ವಸತಿ ಗೃಹದಲ್ಲಿ ರಾತ್ರಿ ತಂಗಲು ಅನುಮತಿ ನಿರಾಕರಿಸಲಾಗಿದೆ.
CPM condemns alleged denial of accommodation to Muslim woman at Udupi Krishna Mutt
ಸಾಂದರ್ಭಿಕ ಚಿತ್ರ
Updated on: 

ಉಡುಪಿ: ಹಿಂದೂ ಕುಟುಂಬದ ಸ್ನೇಹಿತೆಯೊಂದಿಗೆ ಪ್ರವಾಸಕ್ಕಾಗಿ ಉಡುಪಿಗೆ ಬಂದಿದ್ದ ಬಳ್ಳಾರಿಯ ಯುವತಿಗೆ ಮುಸ್ಲಿಂ ಧರ್ಮಕ್ಕೆ ಸೇರಿದವರು ಎಂಬ ಕಾರಣಕ್ಕೆ ರಾತ್ರಿ ಉಳಿದುಕೊಳ್ಳಲು ಅನುಮತಿ ನಿರಾಕರಿಸಿದ್ದು, ಮಠದ ವಸತಿ ಗೃಹದ ಅಧಿಕಾರಿಗಳ ಕೃತ್ಯವನ್ನು ಸಿಪಿಎಂ(ಎಂ) ಉಡುಪಿ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.

ಈ ಬಗ್ಗೆ ಸೋಮವಾರ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಗಾರ ಅವರು, ಬಳ್ಳಾರಿಯ ಯುವತಿಯೊಬ್ಬರಿಗೆ ಕೇವಲ ಅವರು ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕಾಗಿ ಅಕ್ಟೋಬರ್ 3 ರಂದು ಮಠದ ವಸತಿ ಗೃಹದಲ್ಲಿ ರಾತ್ರಿ ತಂಗಲು ಅನುಮತಿ ನಿರಾಕರಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಅಕ್ಬೋಬರ್ 3 ರಂದು ಬಳ್ಳಾರಿ ಜಿಲ್ಲೆಯ ಮಸ್ಲಿಂ ಯುವತಿ ತನ್ನ ಸ್ನೇಹಿತೆ ಶಕುಂತಲಾ ಮತ್ತು ಅವರ ಕುಟುಂಬದೊಂದಿಗೆ ಪ್ರವಾಸಕ್ಕಾಗಿ ಉಡುಪಿ ಜಿಲ್ಲೆಗೆ ಆಗಮಿಸಿದ್ದು, ಕೃಷ್ಣ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ರಾತ್ರಿ ಉಳಿದು ಕೊಳ್ಳಲು ಕೃಷ್ಣ ಮಠದ ವಸತಿ ಗೃಹಕ್ಕೆ ಆಗಮಿಸಿದ್ದರು. ಆ ವೇಳೆ ರಾತ್ರಿ 8 ಗಂಟೆ ಆಗಿತ್ತು. ಎಲ್ಲರ ಆಧಾರ್ ಕಾರ್ಡ್ ಪರಿಶೀಲಿಸಿದ ವಸತಿ ಗೃಹದ ಅಧಿಕಾರಿಗಳು ಮುಸ್ಲಿಂ ಯುವತಿಗೆ ರಾತ್ರಿ ಉಳಿದುಕೊಳ್ಳಲು ಅವಕಾಶ ನೀಡಲಿಲ್ಲ. ಸ್ನೇಹಿತೆ ಶಕುಂತಲಾ ಅವರ ಕುಟುಂಬದ ಹಿರಿಯರು, ಆಕೆ ನಮ್ಮ ಮೊಮ್ಮಗಳು ಇದ್ದಂತೆ, ಅಲ್ಲದೆ ರಾತ್ರಿ ಹೊತ್ತಿನಲ್ಲಿ ಅಪರಿಚಿತ ನಗರದಲ್ಲಿ ಒಬ್ಬಳೇ ಎಲ್ಲಿಗೆ ಹೋಗುವುದು ಎಂದು ಅಂಗಲಾಚಿದರೂ ವಸತಿ ಗೃಹದ ಅಧಿಕಾರಿಗಳು ಕೇಳಲಿಲ್ಲ ಎಂದು ಹೇಳಿದ್ದಾರೆ.

CPM condemns alleged denial of accommodation to Muslim woman at Udupi Krishna Mutt
ಉಡುಪಿ: ಗರ್ಭಿಣಿ ಪತ್ನಿಗೆ ವಿಷದ ಇಂಜೆಕ್ಷನ್ ನೀಡಿ ಕೊಲೆ ಯತ್ನ; ಹೆಂಡ್ತಿ ಬದುಕುಳಿಯುತ್ತಿದ್ದಂತೆ ಪ್ರೇಯಸಿ ಜತೆ ಪತಿ ಆತ್ಮಹತ್ಯೆ!

ಹಿಂದೆ ಪೇಜಾವರ ಮಠದ ವಿಶ್ವೇಶ್ವರತೀರ್ಥ ಸ್ವಾಮೀಜಿ ತನ್ನ ಕಾರಿನ ಚಾಲಕ ಮುಸ್ಲಿಂ ಧರ್ಮವನ್ನು ಅನುಸರಿಸುವವನಾಗಿದ್ದರೂ, ಅವರನ್ನು ಆದರದಿಂದ ನೋಡುತ್ತಿದ್ದುದು, ಮಾತ್ರವಲ್ಲದೆ ಇಫ್ತಾರ್ ಕೂಟವನ್ನೂ ಆಯೋಜಿಸಿದ್ದರು. ಉಡುಪಿಯ ಕೊಡುಗೈ ದಾನಿಯೆಂದೇ ಹೆಸರು ಹೊಂದಿದ್ದ ಹಾಜಿ ಅಬ್ದುಲ್ಲಾ ಸಾಹೇಬ್ ಮಠದ ಭಕ್ತರಾಗಿದ್ದು ಮಾತ್ರವಲ್ಲ ದೀಪೋತ್ಸವ ಸಂದರ್ಭದಲ್ಲಿ ತೊಂದರೆಗೆ ಒಳಗಾದ ಮಠಕ್ಕೆ ದೀಪದ ಎಣ್ಣೆ ಒದಗಿಸಿರುವುದನ್ನು ಉಡುಪಿಯ ಜನರು ಇಂದಿಗೂ ನೆನಪಿಸಿಕೊಳ್ಳುತ್ತಾರೆ.

ಇಂತಹ ಸೌಹಾರ್ದ ಪರಂಪರೆ ಇರುವ ಉಡುಪಿಯಲ್ಲಿ ಮತ್ತು ಮಠದಲ್ಲಿ ರಾತ್ರಿ ಹೊತ್ತಿನಲ್ಲಿ ಮುಸ್ಲಿಂ ಯುವತಿಗೆ ಉಳಿದುಕೊಳ್ಳಲು ಅವಕಾಶ ನೀಡದೆ ಇರುವುದು ಅಕ್ಷಮ್ಯ ಅಪರಾಧ. ಇಂತಹ ಘಟನೆಗಳು ಮರುಕಳಿಸಬಾರದೆಂದು ಮಠದ ಅಧಿಕಾರಿಗಳಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಬೇಕು ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಗಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com