ಕುಮಾರಸ್ವಾಮಿಗೆ ಸಿದ್ದರಾಮಯ್ಯರನ್ನ ಭೇಟಿ ಮಾಡುವ ಯಾವ ನೈತಿಕತೆ ಇದೆ? ನಾಚಿಕೆ ಆಗಬೇಕು, ಮಾರ್ಯಾದೆ ಇದ್ರೆ ಇಂತ ಮಾತಾಡುತ್ತ ಇರ್ಲಿಲ್ಲ..! ಚಲುವರಾಯಸ್ವಾಮಿ ಕಿಡಿ

ಕುಮಾರಸ್ವಾಮಿ ಅವರೇ ಕ್ಯಾಸೆಟ್ ಮಾಡಿ,.ಈಗ ಸಿದ್ದರಾಮಯ್ಯರನ್ನ ಭೇಟಿ ಮಾಡುವ ಯಾವ ನೈತಿಕತೆ ಇದೆ, ಅವರಿಗೆ ನಾಚಿಕೆ ಆಗಬೇಕು, ಮಾರ್ಯಾದೆ ಇದ್ರೆ ಇಂತ ಮಾತಾಡುತ್ತ ಇರ್ಲಿಲ್ಲ ಎಂದು ಕಿಡಿಕಾರಿದ್ದಾರೆ.
Karnataka Water Resources Minister N Chaluvarayaswamy (L) and Union Minister HD Kumaraswamy
ಕರ್ನಾಟಕ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ
Updated on: 

ಬೆಂಗಳೂರು: ಸ್ಟಿಂಗ್ ಆಪರೇಷನ್ ವಿಚಾರ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಉಂಟು ಮಾಡಿರುವಂತೆಯೇ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಭೇಟಿ ಕುರಿತು ವದಂತಿಗಳು ಹಬ್ಬಿವೆ. ಇದಕ್ಕೆ ಕುಮಾರಸ್ವಾಮಿ ಕೂಡಾ ಸ್ಪಷ್ಟನೆ ನೀಡಿದ್ದು, ಭವಿಷ್ಯದಲ್ಲಿ ಅನಿವಾರ್ಯತೆ ಸೃಷ್ಟಿಯಾದರೆ ಖಂಡಿತಾ ಭೇಟಿ ಮಾಡುವುದಾಗಿ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಲಸಂಪನ್ಮೂಲ ಸಚಿವ ಚಲುವರಾಯಸ್ವಾಮಿ, ಕುಮಾರಸ್ವಾಮಿ ಅವರೇ ಕ್ಯಾಸೆಟ್ ಮಾಡಿ,.ಈಗ ಸಿದ್ದರಾಮಯ್ಯರನ್ನ ಭೇಟಿ ಮಾಡುವ ಯಾವ ನೈತಿಕತೆ ಇದೆ, ಅವರಿಗೆ ನಾಚಿಕೆ ಆಗಬೇಕು, ಮಾರ್ಯಾದೆ ಇದ್ರೆ ಇಂತ ಮಾತಾಡುತ್ತ ಇರ್ಲಿಲ್ಲ ಎಂದು ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಇಡಿ ರಾಜ್ಯದಲ್ಲಿ ದೀರ್ಘಕಾಲದ ಸಿಎಂ ಆಗಿದ್ದವರು. ಹೆಚ್ಚು ಕಾಲ ವಿಪಕ್ಷ ನಾಯಕರಾಗಿ ಜನರ ಮನ ಗೆದ್ದವರು. ಸ್ಟಿಂಗ್ ಬಗ್ಗೆ ಸರ್ಕಾರ ಈಗಾಗಲೇ ತನಿಖೆ ನಡೆಸುತ್ತಿದೆ. ಯಾರು ಸ್ಟಿಂಗ್ ಮಾಡಿದ್ರು, ಕ್ಯಾಸೆಟ್ ಅನ್ನ ಯಾರು ಯಾರಿಗೆ ಕೊಟ್ರು ಅನ್ನೋದೆಲ್ಲಾ ಹೊರಗಡೆ ಬರುತ್ತೆ. ಸಿದ್ದರಾಮಯ್ಯರನ್ನ ಭೇಟಿ ಮಾಡುತ್ತೇನೆ ಅಂತಾ ಹೇಳುತ್ತಾರೆ, ಇವರಿಗೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದರು.

ಇವರದ್ದೇನು ನಾಯಕರನ್ನ ಬೆಳೆಸಿದ ಫ್ಯಾಕ್ಟ್ರಿನಾ? ಎಲ್ಲರನ್ನೂ ನಾವೇ ಬೆಳೆಸಿರೋದು ಅಂತ ಹೇಳುತ್ತಾರೆ. ಬೊಮ್ಮಾಯಿ, ಪಟೇಲ್ ಯಾರೂ ಪಕ್ಷ ಕಟ್ಟಿರಲಿಲ್ಲವಾ? ಏನು ಕುಮಾರಸ್ವಾಮಿ ಬಂದು ಪಕ್ಷವನ್ನ ಕಟ್ಟಿರೋ ಹಾಗೆ ಹೇಳುತ್ತಾರೆ ಎಂದು ಕಿಡಿಕಾರಿದರು.

ಇಡೀ ರಾಜ್ಯದ ಏಳು ಕೋಟಿ ಜನರ ನೈತಿಕ ಬೆಂಬಲ ಸಿದ್ದರಾಮಯ್ಯನವರಿಗೆ ಇದೆ. ಅಸೆಂಬ್ಲಿಯಲ್ಲಿ ಏನು ಮಾತನಾಡಿದ್ದಾರೆ ಅಂತಾ ಗೊತ್ತಿದೆ. ಎಲ್ಲಿ ರಿಲೀಸ್ ಮಾಡಿಸಿದೆ, ಎಲ್ಲಿ ಚರ್ಚೆ ಮಾಡಿಸಿದೆ ಇದೆಲ್ಲಾ ಬೇಕಾ? ಈಗ ಗಲೀಜ್ ಮಾಡಿಬಿಟ್ಟಿದ್ದೀರಿ? ನೀವು ರೈತರ ಪರ ಇರುವ ಲೀಡರ್ ಅಲ್ಲವಾ? ಉದ್ಯಮಿಗಳಿಗೆ ಎನ್‌ಡಿಎ ಸರ್ಕಾರ ಸಾಲಮನ್ನಾ ಮಾಡಿದೆ ಅಲ್ಲವಾ? ಮೊದಲು ಮೋದಿ ಬಳಿ ಹೋಗಿ ರೈತರ ಸಾಲಮನ್ನಾ ಮಾಡಿಸಿ ಎಂದರು.

Karnataka Water Resources Minister N Chaluvarayaswamy (L) and Union Minister HD Kumaraswamy
'ಸ್ಟಿಂಗ್ ಆಪರೇಷನ್ ಮಾಡಿದ್ದು ಯಾರು, ಏಕೆ ಮಾಡಿದ್ರು ಎಂದು ನಾನು ಸಿಎಂ ಕೇಳಲು ಬಯಸುತ್ತೇನೆ': HD ಕುಮಾರಸ್ವಾಮಿ; Video

ಯಾರನ್ನ ಕರೆದುಕೊಂಡು ಹೋಗುತ್ತೀರಿ ಗೊತ್ತಿಲ್ಲಾ. ಇದನ್ನೆಲ್ಲಾ ಬಿಡಿ ಮಿಸ್ಟರ್ ಕುಮಾರಸ್ವಾಮಿ, ಇದರಿಂದ ಸಿದ್ದರಾಮಯ್ಯನವರಿಗೆ ಡ್ಯಾಮೇಜ್ ಆಗಲ್ಲ. ಒಂದು ಕಡೆ ಕ್ಯಾಸೆಟ್ ಬಿಡುಗಡೆ ಮಾಡಿಸಿ ಇನ್ನೊಂದು ಕಡೆ ನೈತಿಕತೆಯ ಮಾತನಾಡುತ್ತೀರಿ ಎಂದು ಹರಿಹಾಯ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com