ಕರ್ನಾಟಕದ ಅಂತಿಮ ಮತದಾರರ ಪಟ್ಟಿ ಪ್ರಕಟ; ಒಟ್ಟು ಮತದಾರರು 4.55 ಕೋಟಿ, 99 ಲಕ್ಷಕ್ಕೂ ಹೆಚ್ಚು ಹೆಸರು ಡಿಲೀಟ್!

ಕರ್ನಾಟಕದಲ್ಲಿ 'ವಿಶೇಷ ತೀವ್ರ ಪರಿಷ್ಕರಣೆ' (Special Intensive Revision - SIR) ಪ್ರಕ್ರಿಯೆ ಪೂರ್ಣಗೊಂಡಿದ್ದು ಇಂದು ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
Anbu kumar
ಅನ್ಬು ಕುಮಾರ್
Updated on: 

ಬೆಂಗಳೂರು: ಕರ್ನಾಟಕದಲ್ಲಿ 'ವಿಶೇಷ ತೀವ್ರ ಪರಿಷ್ಕರಣೆ' (Special Intensive Revision - SIR) ಪ್ರಕ್ರಿಯೆ ಪೂರ್ಣಗೊಂಡಿದ್ದು ಇಂದು ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ (CEO) ಅನ್ಬುಕುಮಾರ್ ಅವರು ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. 2026ರ ಅಕ್ಟೋಬರ್ 27ರ ಹೊತ್ತಿಗೆ ರಾಜ್ಯದಲ್ಲಿ ಒಟ್ಟು 4,54,55,689 ಮತದಾರರಿದ್ದಾರೆ. ಒಟ್ಟು ಮತದಾರರಲ್ಲಿ ಪುರುಷರು 2,24,40,493 ಹಾಗೂ ಮಹಿಳೆಯರು 2,29,12,355 ಆಗಿದ್ದಾರೆ. ಇವರಲ್ಲದೆ, ತೃತೀಯ ಲಿಂಗಿ ಮತದಾರರ ಸಂಖ್ಯೆ 2,841 ಇದೆ.

Anbu kumar
ವೋಟರ್ ಲಿಸ್ಟ್‌ನಲ್ಲಿ ಅರ್ಹ ಮತದಾರರ ಹೆಸರು ನಾಪತ್ತೆ; GBA ಚುನಾವಣೆ ವಿಳಂಬ ಸಾಧ್ಯತೆ, ವಿಧಾನಸಭೆಯತ್ತ ರಾಜಕೀಯ ನಾಯಕರ ಚಿತ್ತ!

ಮುಖ್ಯ ಚುನಾವಣಾ ಅಧಿಕಾರಿ ಮಾಹಿತಿಯ ಪ್ರಕಾರ, ಈ ಹಿಂದಿನ ಪಟ್ಟಿಯಿಂದ ಅಂತಿಮ ಪಟ್ಟಿಯನ್ನು ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ, ಒಟ್ಟು 99,76,625 ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ (ಅನರ್ಹ ಅಥವಾ ನಕಲಿ ಹೆಸರುಗಳನ್ನು ಮಾರ್ಪಡಿಸಲಾಗಿದೆ/ತೆಗೆಯಲಾಗಿದೆ).

'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆ ಆರಂಭವಾಗುವ ಮೊದಲು, ಕರ್ನಾಟಕದಲ್ಲಿ 5,54,32,814 ಮತದಾರರಿದ್ದರು. ಆಗಸ್ಟ್ 2016ರಲ್ಲಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದಾಗ, ರಾಜ್ಯದಲ್ಲಿ 4,46,35,975 ಮತದಾರರಿದ್ದರು. ಅಲ್ಲದೆ, ಮತಗಟ್ಟೆಗಳ ಸಂಖ್ಯೆಯಲ್ಲಿ 390ರಷ್ಟು ಹೆಚ್ಚಳವಾಗಿದೆ. ಪ್ರಸ್ತುತ ಕರ್ನಾಟಕದಲ್ಲಿ ಒಟ್ಟು 41,888 ಮತಗಟ್ಟೆಗಳಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com