ರೇಣುಕಾಸ್ವಾಮಿ ಕೊಲೆ ಕೇಸ್: ಪಟ್ಟಣಗೆರೆ ಶೆಡ್‌ಗೆ ದರ್ಶನ್, ಪವಿತ್ರಾ ಬಂದೇ ಇಲ್ಲ - ಕೋರ್ಟ್‌ನಲ್ಲಿ ಉಲ್ಟಾ ಹೊಡೆದ ಐ ವಿಟ್ನೆಸ್‌!

"ಆರೋಪಿಗಳಾದ ದರ್ಶನ್ ಹಾಗೂ ಪವಿತ್ರಾ ಗೌಡ ಅವರನ್ನು ಶೆಡ್ ಬಳಿ ನೋಡಿಲ್ಲ" ಎಂದು ಪಟ್ಟಣಗೆರೆ ಶೆಡ್‌ನ ಕೆಲಸಗಾರ, ಪ್ರಕರಣದ ಪ್ರತ್ಯಕ್ಷ ಸಾಕ್ಷಿಯಾಗಿರುವ ಪುನೀತ್‌ ಬುಧವಾರ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದಾನೆ.
Pavithra Gowda with Darshan - Renukaswamy
ನಟ ದರ್ಶನ್ ಜೊತೆಗೆ ಪವಿತ್ರಾ ಗೌಡ- ರೇಣುಕಾಸ್ವಾಮಿ
Updated on: 

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದ್ದು, ಕೋರ್ಟ್‌ನಲ್ಲಿ ಪ್ರತ್ಯಕ್ಷ ಸಾಕ್ಷಿ ಪುನೀತ್‌ ಉಲ್ಟಾ ಹೊಡೆದಿದ್ದು, ಕುತೂಹಲ ಕೆರಳಿಸಿದೆ.

"ಆರೋಪಿಗಳಾದ ದರ್ಶನ್ ಹಾಗೂ ಪವಿತ್ರಾ ಗೌಡ ಅವರನ್ನು ಶೆಡ್ ಬಳಿ ನೋಡಿಲ್ಲ" ಎಂದು ಪಟ್ಟಣಗೆರೆ ಶೆಡ್‌ನ ಕೆಲಸಗಾರ, ಪ್ರಕರಣದ ಪ್ರತ್ಯಕ್ಷ ಸಾಕ್ಷಿಯಾಗಿರುವ ಪುನೀತ್‌ ಬುಧವಾರ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದಾನೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಪ್ರಮುಖ ಸಾಕ್ಷಿಗಳಾದ ಕಿರಣ್ ಹಾಗೂ ಪುನೀತ್‌ ಅವರಿಗೆ ಸಾಕ್ಷಿ ನುಡಿಯುವಂತೆ 59ನೇ ಸೆಷನ್ಸ್ ಕೋರ್ಟ್ ಸಮನ್ಸ್‌ ನೀಡಿತ್ತು. ಆದರೆ ನಿನ್ನೆ ಗೈರಾಗಿದ್ದ ಪುನೀತ್‌ ವಿರುದ್ಧ ಕೋರ್ಟ್‌ ವಾರಂಟ್ ಜಾರಿ ಮಾಡಿತ್ತು.

Pavithra Gowda with Darshan - Renukaswamy
ನನ್ನ ಫ್ಯಾಮಿಲಿ ಬಗ್ಗೆ ಮಾತಾಡೋಕೆ ಯಾರಿಗೂ ಅಧಿಕಾರ ಇಲ್ಲ: ಜೈಲಿನಿಂದಲೇ ಧನ್ವೀರ್​ಗೆ ದರ್ಶನ್ ವಾರ್ನಿಂಗ್!

ಇಂದು 59ನೇ ಸಿಸಿಹೆಚ್‌ ಕೋರ್ಟ್‌ಗೆ ಹಾಜರಾಗಿ ಸಾಕ್ಷಿ ನುಡಿದ ಪುನೀತ್‌, ಶೆಡ್‌ ಬಳಿ ದರ್ಶನ್‌ ಮತ್ತು ಪವಿತ್ರಾಗೌಡ ಬಂದೇ ಇರಲಿಲ್ಲ. ಯಾವುದೇ ಆರೋಪಿಗಳೂ ಬಂದಿರಲಿಲ್ಲ. ನಾನು ಘಟನಾ ಸ್ಥಳದಲ್ಲಿ ಅವರನ್ನು ನೋಡಿಲ್ಲ ಎಂದು ಉಲ್ಟಾ ಹೊಡೆದಿದ್ದು, ತನ್ನ ಹಿಂದಿನ ಹೇಳಿಕೆಗೆ ವಿರುದ್ಧವಾಗಿ ಸಾಕ್ಷಿ ನುಡಿದಿದ್ದಾನೆ.

ಇದೇ ಪುನೀತ್‌ ಈ ಹಿಂದೆ ಜಡ್ಜ್ ಮುಂದೆ 164ರ ಅಡಿಯಲ್ಲಿ ಹೇಳಿಕೆ ನೀಡಿದ್ದಾಗ, ಇದಕ್ಕೆ ವಿರುದ್ಧವಾಗಿ ಹೇಳಿದ್ದ. ಈ ಹಿನ್ನೆಲೆಯಲ್ಲಿ ಪುನೀತ್‌ ಶಾಕ್ಷಿಯನ್ನು ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸಲು ಎಸ್‌ಪಿಪಿ ಮನವಿ ಮಾಡಿದ್ದಾರೆ.

ಪುನೀತ್‌ ಹೇಳಿದ್ದೇನು?

ಜೂನ್‌ 8 ರಂದು ನಾನು ಪಟ್ಟಣಗೆರೆ ಶೆಡ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಸಂಜೆ 6.30ವರೆಗೂ ಅಲ್ಲಿಯೇ ಇದ್ದೆ. ಸಂಜೆ ವೇಳೆ ಯಾರೋ ಕಾರಿನಲ್ಲಿ ಬಂದು ದೂರದ ಮರದ ಬಳಿ ಹೋದಂತೆ ಕಾಣಿಸಿತು. ಆ ಬಳಿಕ ನಾನು ಮಲೆಮಹಾದೇಶ್ವರ ಬೆಟ್ಟಕ್ಕೆ ಹೋದೆನು. ಮಲ್ಲಿಕಾರ್ಜುನ್, ಬಸವರಾಜ್, ಕಿರಣ್ ಹಾಗೂ ಸೆಕ್ಯುರಿಟಿ ಗಾರ್ಡ್ ಇದ್ದರು. ಈ ಆರೋಪಿಗಳನ್ನೂ ನಾನು ನೋಡಿಲ್ಲ ಎಂದು ಪುನೀತ್ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಮಾಫಿ ಸಾಕ್ಷಿ ಹೇಳಿಕೆ ದಾಖಲು ಬಳಿಕ ಸದ್ಯ ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ದಾಖಲು ಪ್ರಕ್ರಿಯೆ ನಡೆಯುತ್ತಿದ್ದು, ಈ ವೇಳೆ ಎಲ್ಲಾ ಸಾಕ್ಷಿಗಳು ಕೋರ್ಟ್‌ಗೆ ಖುದ್ದು ಹಾಜರಾಗಿ ಪ್ರಕರಣದ ಆರೋಪಿಗಳನ್ನು ಗುರುತಿಸುವುದು ಹಾಗೂ ನ್ಯಾಯಾಧೀಶರ ಸಮ್ಮುಖದಲ್ಲಿ ತಮ್ಮ ಹೇಳಿಕೆ ದಾಖಲಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com