ದೇವರಿಲ್ಲ ಎಂದು ನಾನು ಹೇಳಿಲ್ಲ; ಕೆಟ್ಟ ಕೆಲಸ ಮಾಡಿ ಪೂಜೆ ಮಾಡಿದರೆ ದೇವರು ಒಳ್ಳೆಯದು ಮಾಡಲ್ಲ: ಸಿದ್ದರಾಮಯ್ಯ

ನಾವು ಮಾಡುವ ಕೆಲಸಗಳು ಶುದ್ಧವಾಗಿರಬೇಕು ಮತ್ತು ಇನ್ನೊಬ್ಬರಿಗೆ ಕೆಟ್ಟದ್ದನ್ನು ಬಗೆಯದೆ ನೆಮ್ಮದಿಯಿಂದ ಬದುಕಬೇಕು. ಕೇವಲ ಪೂಜೆ ಮಾಡಿದರೆ ಸಾಲದು, ಮನಸ್ಸು ಮತ್ತು ನಡವಳಿಕೆ ಶುದ್ಧವಾಗಿರಬೇಕು ಎಂದು ಅವರು ತಿಳಿಸಿದ್ದಾರೆ.
Siddaramaiah
ಸಿದ್ದರಾಮಯ್ಯ
Updated on: 

ಮೈಸೂರು: ಕೆಟ್ಟ ಕೆಲಸ ಮಾಡಿ ಪೂಜೆ ಮಾಡಿದರೆ ದೇವರು ಒಳ್ಳೆಯದು ಮಾಡುವುದಿಲ್ಲ. ಇನ್ನೊಬ್ಬರಿಗೆ ಕೇಡು ಬಯಸದೆ ಪೂಜೆ ಮಾಡಿದರೆ ಮಾತ್ರ ಒಳ್ಳೇದು ಮಾಡುತ್ತಾನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮಾರ್ಮಿಕವಾಗಿ ಹೇಳಿದ್ದಾರೆ.

ಮೈಸೂರು ಜಿಲ್ಲೆಯ ಕೆ.ಆರ್.ನಗರದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ದೇವರು ಇದ್ದಾನೆ, ಇಲ್ಲ ಎಂದು ನಾನು ಯಾವತ್ತೂ ಹೇಳಿಲ್ಲ ಎಂದರು. ಇನ್ನು ಇದೇ ವೇಳೆ 8 ವರ್ಷ ಸಿಎಂ ಆಗಿ 17 ಬಜೆಟ್ ಮಂಡಿಸಿದ್ದೇನೆ, ಇದು ರಾಜ್ಯದಲ್ಲಿ ರೆಕಾರ್ಡ್. ನಾನು ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ನಾವು ಮಾಡುವ ಕೆಲಸಗಳು ಶುದ್ಧವಾಗಿರಬೇಕು ಮತ್ತು ಇನ್ನೊಬ್ಬರಿಗೆ ಕೆಟ್ಟದ್ದನ್ನು ಬಗೆಯದೆ ನೆಮ್ಮದಿಯಿಂದ ಬದುಕಬೇಕು. ಕೇವಲ ಪೂಜೆ ಮಾಡಿದರೆ ಸಾಲದು, ಮನಸ್ಸು ಮತ್ತು ನಡವಳಿಕೆ ಶುದ್ಧವಾಗಿರಬೇಕು ಎಂದು ಅವರು ತಿಳಿಸಿದ್ದಾರೆ.

ಸಿದ್ದರಾಮಯ್ಯ ಅವರ ಈ ಮಾತುಗಳು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸಿದ್ದರಾಮಯ್ಯ ಹೇಳಿಕೆ ಉಲ್ಲೇಖಿಸಿ ಪೋಸ್ಟ್ ಮಾಡಿರುವ ಸಂಸದ ಕೆ. ಸುಧಾಕರ್, ಯಾರನ್ನು ಗುರಿಯಾಗಿಸಿಕೊಂಡು ಈ ಮಾತು ಹೇಳಿದ್ದೀರಿ ಸ್ಪಷ್ಟ ಪಡಿಸಿ ಎಂದಿದ್ದಾರೆ.

Siddaramaiah
'ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ; ರಾಜಮಾತೆ ಪ್ರಮೋದಾ ದೇವಿ ಜತೆ ಮಾತನಾಡುವ ಅಗತ್ಯವೂ ನನಗಿಲ್ಲ': ಯತೀಂದ್ರ ಸಿದ್ದರಾಮಯ್ಯ; Video

X
Kannada Prabha
www.kannadaprabha.com