ಹಾಲಿನ ದರ ಏರಿಕೆಗೆ Modinomics ಕಾರಣ; ನಮ್ಮ ಸರ್ಕಾರವಲ್ಲ: ಪ್ರಿಯಾಂಕ್ ಖರ್ಗೆ

ದೇಶದಲ್ಲಿನ ಒಟ್ಟಾರೆ ಹಣದುಬ್ಬರಕ್ಕೆ ಕೇಂದ್ರ ಸರ್ಕಾರದ ಸ್ಥೂಲ ಆರ್ಥಿಕ ನೀತಿಗಳೇ ಕಾರಣ ಎಂದು ಪ್ರಿಯಾಂಕ್ ಖರ್ಗೆ, ಶುಕ್ರವಾರ ಆರೋಪಿಸಿದರು.
Priyank kharge
ಪ್ರಿಯಾಂಕ್ ಖರ್ಗೆonline desk
Updated on: 

ಬೆಂಗಳೂರು: ನವೆಂಬರ್ 1 ರಿಂದ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರೂಪಾಯಿಗಳಷ್ಟು ಹೆಚ್ಚಿಸುವ ಸಚಿವ ಸಂಪುಟದ ನಿರ್ಧಾರವನ್ನು ಐಟಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ದೇಶದಲ್ಲಿನ ಒಟ್ಟಾರೆ ಹಣದುಬ್ಬರಕ್ಕೆ ಕೇಂದ್ರ ಸರ್ಕಾರದ ಸ್ಥೂಲ ಆರ್ಥಿಕ ನೀತಿಗಳೇ ಕಾರಣ ಎಂದು ಪ್ರಿಯಾಂಕ್ ಖರ್ಗೆ, ಶುಕ್ರವಾರ ಆರೋಪಿಸಿದರು.ಈ ವೇಳೆ ಅವರು, ಮೋದಿ ಸರ್ಕಾರವನ್ನು ಗುರಿಯಾಗಿಸಲು ಬಿಜೆಪಿ 2014ರ ಚುನಾವಣಾ ಪ್ರಚಾರದಲ್ಲಿ ಬಳಸಿದ್ದ ಘೋಷಣೆಯನ್ನೇ ಉಲ್ಲೇಖಿಸಿದರು.

ಜೀವನ ವೆಚ್ಚ ಏರಿಕೆಯ ಕುರಿತು ವಿರೋಧ ಪಕ್ಷಗಳು ವ್ಯಕ್ತಪಡಿಸಿದ ಟೀಕೆಗಳಿಗೆ ಪ್ರತಿಕ್ರಿಯಿಸಿದ ಖರ್ಗೆ, ರಾಜ್ಯ ಮಟ್ಟದಲ್ಲಿ ಕೈಗೊಂಡಿರುವ ಈ ಬದಲಾವಣೆಗಳು ದೇಶಾದ್ಯಂತ ಆಗಿರುವ ಬೆಲೆ ಏರಿಕೆಯ ಪರಿಣಾಮವಾಗಿದ್ದು, ಹೈನುಗಾರ ರೈತರಿಗೆ ನೇರ ಬೆಂಬಲ ನೀಡುವ ಉದ್ದೇಶವನ್ನು ಹೊಂದಿವೆ ಎಂದು ಪ್ರತಿಪಾದಿಸಿದರು. ಅಲ್ಲದೆ, ಗುಜರಾತ್, ರಾಜಸ್ಥಾನ ಮತ್ತು ಮಹಾರಾಷ್ಟ್ರದಂತಹ ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕದಲ್ಲಿ ಹಾಲಿನ ದರ ಇನ್ನೂ ಅತ್ಯಂತ ಕಡಿಮೆ ಇದೆ ಎಂದು ಅವರು ಒತ್ತಿ ಹೇಳಿದರು.

"ಹಣದುಬ್ಬರಕ್ಕೆ ಯಾರು ಹೊಣೆ? ರಾಜ್ಯ ಸರ್ಕಾರವೇ? ಗ್ರಾಹಕ ಬೆಲೆ ಸೂಚ್ಯಂಕವನ್ನು (Consumer Price Index) ನಿರ್ಧರಿಸುವವರು ಯಾರು? ಕೇಂದ್ರ ಸರ್ಕಾರವೋ ಅಥವಾ ರಾಜ್ಯ ಸರ್ಕಾರವೋ? ನಿಮಗೆ ನೆನಪಿದ್ದರೆ, 13-14 ವರ್ಷಗಳ ಹಿಂದೆ ಒಂದು ಘೋಷಣೆ ಇತ್ತು—'ಬಹುತ್ ಹೋ ಗಯಿ ಮೆಹಂಗಾಯಿ ಕಿ ಮಾರ್, ಅಬ್ ಕಿ ಬಾರ್ ಮೋದಿ ಸರ್ಕಾರ್' (ಬೆಲೆ ಏರಿಕೆಯ ಹೊಡೆತ ಸಾಕಾಯಿತು, ಈ ಬಾರಿ ಮೋದಿ ಸರ್ಕಾರ). ಈಗ ಹಣದುಬ್ಬರ ಕಡಿಮೆಯಾಗಿದೆಯೇ ಅಥವಾ ಹೆಚ್ಚಾಗಿದೆಯೇ?" ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಗ್ರಾಹಕ ಬೆಲೆ ಸೂಚ್ಯಂಕ (CPI), ಇಂಧನ ಮೇಲಿನ ತೆರಿಗೆಗಳು ಮತ್ತು ಅಗತ್ಯ ವಸ್ತುಗಳ ಬೆಲೆಗಳಂತಹ ರಾಷ್ಟ್ರೀಯ ಸ್ಥೂಲ ಆರ್ಥಿಕ ಸೂಚಕಗಳು ರಾಜ್ಯ ಸಚಿವ ಸಂಪುಟದ ನಿಯಂತ್ರಣದಲ್ಲಿರುವುದಿಲ್ಲ, ಬದಲಾಗಿ ಅವು ಕೇಂದ್ರ ಸರ್ಕಾರದ ನೀತಿಗಳಿಂದ ನಿರ್ಧಾರವಾಗುತ್ತವೆ ಎಂದು ಖರ್ಗೆ ಸ್ಪಷ್ಟಪಡಿಸಿದರು.

ಪ್ರತಿ ಲೀಟರ್‌ಗೆ 8 ರೂಪಾಯಿ ದರ ಹೆಚ್ಚಳದಿಂದ ಗ್ರಾಮೀಣ ಹೈನುಗಾರ ರೈತರಿಗೆ ನೇರ ಲಾಭವಾಗಲಿದೆ. ಇದರಲ್ಲಿ 7 ರೂಪಾಯಿ ನೇರವಾಗಿ ರೈತರಿಗೆ ತಲುಪಲಿದ್ದು, ಇದು ಮೇವು ಮತ್ತು ನಿರ್ವಹಣಾ ವೆಚ್ಚಗಳ ಏರಿಕೆಯಿಂದ ರೈತರಿಗೆ ಆಗಿರುವ ಹೊರೆ ತಗ್ಗಿಸಲು ಸಹಾಯ ಮಾಡುತ್ತದೆ. ದರ ಪರಿಷ್ಕರಣೆಯ ನಂತರವೂ, ಗುಜರಾತ್, ರಾಜಸ್ಥಾನ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ 'ನಂದಿನಿ' ಹಾಲು ಗಮನಾರ್ಹವಾಗಿ ಅಗ್ಗವಾಗಿದೆ ಎಂದು ಖರ್ಗೆ ತಿಳಿಸಿದರು.

ಕೇಂದ್ರ ಸರ್ಕಾರದ್ದು 'ರಾಜಕೀಯ ದ್ವಿಮುಖ ನೀತಿ' (political hypocrisy) ಎಂದು ಹೇಳಿರುವ ಖರ್ಗೆ, ಬಿಜೆಪಿ ಬೆಂಬಲಿಗರನ್ನು ಮತ್ತು ಕೇಂದ್ರ ಸರ್ಕಾರ ತೆರಿಗೆಗಳಲ್ಲಿ ಮಾಡಿರುವ ಬದಲಾವಣೆಗಳನ್ನು ಟೀಕಿಸಿದರು. "ಅವರು ತೆರಿಗೆಗಳನ್ನು ಹೆಚ್ಚಿಸಿದಾಗಲೆಲ್ಲಾ, ಅದು ರಾಷ್ಟ್ರದ ಸೇವೆಗಾಗಿ ಎಂದು ಹೇಳಲಾಗುತ್ತದೆ. ಅವರು ಬೆಲೆಗಳನ್ನು ಹೆಚ್ಚಿಸಿದಾಗಲೆಲ್ಲಾ, ಅದು ಭಾರತದ ಜನರ ಸೇವೆಗಾಗಿ ಎಂದು ಹೇಳಲಾಗುತ್ತದೆ. ಆದರೆ ನಾವು ಹಾಗೆ ಮಾಡಿದರೆ, ಅವರಿಗೆ ಸಮಸ್ಯೆ ಉಂಟಾಗುತ್ತದೆ. ನಿಮಗೆ ನೆನಪಿರಬಹುದು, ಇದೇ ಬಿಜೆಪಿ ಬೆಂಬಲಿಗರು, 'ಪೆಟ್ರೋಲ್ ಬೆಲೆ ₹200ಕ್ಕೆ ಏರಿದರೂ ನಾವು ಅದನ್ನು ಖರೀದಿಸುತ್ತೇವೆ, ಏಕೆಂದರೆ ಅದು ರಾಷ್ಟ್ರಕ್ಕಾಗಿ' ಎಂದು ಹೇಳಿದ್ದರು."

Priyank kharge
ಹಾಲಿನ ದರ ಏರಿಕೆ ಬಹುದಿನಗಳ ಬೇಡಿಕೆ; ಹೆಚ್ಚುವರಿ ಹಣ ರೈತರಿಗೆ ತಲುಪಲಿದೆ: ಸಿಎಂ ಡಿ.ಕೆ. ಶಿವಕುಮಾರ್; Video

"ನಾವು ಇದನ್ನು ಯಾರಿಗಾಗಿ ಮಾಡುತ್ತಿದ್ದೇವೆ? ಕೇವಲ ರೈತರಿಗಾಗಿ, ಕೇವಲ ಕರ್ನಾಟಕದ ಜನರಿಗಾಗಿ. ಇಷ್ಟೆಲ್ಲಾ ಇದ್ದರೂ, ಗುಜರಾತ್, ರಾಜಸ್ಥಾನ ಮತ್ತು ಮಹಾರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮಲ್ಲಿ ಬೆಲೆಗಳು ಇನ್ನೂ ಕಡಿಮೆ ಇವೆ. ದೇಶದಲ್ಲೇ ಅತಿ ಕಡಿಮೆ ಬೆಲೆಗಳು ನಮ್ಮಲ್ಲಿಯೇ ಇವೆ. ಹೌದು, ಇದರಿಂದ ಸ್ವಲ್ಪ ತೊಂದರೆಯಾಗಬಹುದು, ಆದರೆ ಬೆಲೆ ಏರಿಕೆಯಾಗುತ್ತಿರುವುದು 'ಮೋದಿ ಅರ್ಥಶಾಸ್ತ್ರ'ದಿಂದ (Modinomics) ಹೊರತು, ಡಿ.ಕೆ. ಶಿವಕುಮಾರ್ ಅವರ ಕಾರಣದಿಂದಲ್ಲ," ಎಂದು ಖರ್ಗೆ ಹೇಳಿದರು.

ಗ್ರಾಹಕರ ಆರ್ಥಿಕ ಸಾಮರ್ಥ್ಯದ ಬಗ್ಗೆ ಪ್ರಸ್ತಾಪಿಸಿದ ಖರ್ಗೆ, ಕಳೆದ ಒಂದು ದಶಕದಲ್ಲಿ ದೇಶಾದ್ಯಂತ ದೈನಂದಿನ ಕುಟುಂಬ ಬಜೆಟ್‌ಗಳು — ಅಂದರೆ ಅಗತ್ಯ ಆಹಾರ ಪದಾರ್ಥಗಳು (ಊಟದ ತಟ್ಟೆ), ಧಾನ್ಯಗಳು, ಮಸಾಲೆ ಪದಾರ್ಥಗಳು ಮತ್ತು ಇಂಧನದ ವೆಚ್ಚ — ವ್ಯವಸ್ಥಿತವಾಗಿ ಏರಿಕೆಯಾಗಿವೆ ಎಂದು ಗಮನಸೆಳೆದರು.

ರಾಜ್ಯದಲ್ಲಿ ಇತ್ತೀಚಿನ ಬರಗಾಲದ ಪರಿಸ್ಥಿತಿಯಿಂದಾಗಿ ಹಾಲಿನ ಉತ್ಪಾದನೆಯು ಸುಮಾರು 10 ಲಕ್ಷ ಲೀಟರ್‌ಗಳಷ್ಟು ಕುಸಿದಿದೆ. ಈ ಹಿನ್ನೆಲೆಯಲ್ಲಿ, ಹೈನುಗಾರ ರೈತರಿಗೆ ನೆರವು ನೀಡುವಂತೆ ರಾಜ್ಯ ವಿಧಾನಮಂಡಲದಲ್ಲಿ ಎಲ್ಲಾ ಪಕ್ಷಗಳ ಸದಸ್ಯರು ಒತ್ತಾಯಿಸಿದ ನಂತರ, ಸಚಿವ ಕೃಷ್ಣ ಬೈರೇಗೌಡ ಅವರು ಕರ್ನಾಟಕ ಸಚಿವ ಸಂಪುಟದ ನಿರ್ಧಾರವನ್ನು ಪ್ರಕಟಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X