

ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಡುವಣ ಆರೋಪ, ಪ್ರತ್ಯಾರೋಪ, ಏಟು, ಎದಿರೇಟು ಮುಂದುವರೆದಿದೆ.
ಈ ನಡುವೆ ಶುಕ್ರವಾರ ಪುರಂದರ ದಾಸರು ಹಾಗೂ ಸರ್ವಜ್ಞ ಅವರ ವಚನಗಳನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ಬೆಲ್ಲದ ಕಟ್ಟೆಯ ಕಟ್ಟಿ, ಬೇವಿನ ಬೀಜವ ಬಿತ್ತಿ, ಜೇನು ಮಳೆಗರೆದರೆ ವಿಷ ಹೋಗುವುದೇನಯ್ಯ! ಮನೆಯಲ್ಲಿ ಬೆಳೆದು ಬಂದ ರೀತಿ, ಹಿರಿಯರು ಹೇಳಿಕೊಟ್ಟ ಸಂಸ್ಕೃತಿ ಹಾಗೂ ಸಂಸ್ಕಾರ ನನ್ನ ಮಾತಿನ ಮಿತಿಗೆ ಕಾವಲಾಗಿದೆ ಎಂದಿದ್ದಾರೆ.
ಜನ್ಮ + ಸ್ಥಾನಮಾನ ಕೊಟ್ಟ ಅಪ್ಪ ಆಸ್ಪತ್ರೆ ಸೇರಿದರೂ, ಅಧಿಕಾರ ಬಿಡಡ, ನಿನ್ನೆ ನಿಂತ ಕ್ಷೇತ್ರದಲ್ಲಿ ಇಂದು ನಿಲ್ಲಲಾಗದ, ಇಂದು ಕಣ್ಣೀರಿಟ್ಟ ಕ್ಷೇತ್ರವನ್ನ ನಾಳೆ ತಿರುಗಿನೋಡದ ಒಡಹುಟ್ಟಿದ ಅಣ್ಣ & ಕೈಹಿಡಿದವರ ನಂಬಿಕೆದ್ರೋಹ ಬಗೆಯುವ ಎಂದು ವಾಗ್ದಾಳಿ ನಡೆಸಿದ್ದಾರೆ.
ಕೊಟ್ಟ ಕುದುರೆ ಏರಲಾಗದ ‘ಕಿಸುಬಾಯಿ’ದಾಸ ಮಾತನಾಡಿದಷ್ಟೂ ‘ಪುರಂದರ’ದಾಸರ ಕೀರ್ತನೆಯ ಪ್ರಸ್ತುತತೆ ಸಾಬೀತಾಗುತ್ತಲೇ ಇರುತ್ತದೆ. ಆರು ಬೆಟ್ಟವನೊಬ್ಬ ಹಾರಬಹುದೆಂದಿಹರೆ ಹಾರಬಹುದೆಂದು ಎನಬೇಕು, ಮೂರ್ಖನಾ ಹೋರಾಟ ಸಲ್ಲ ಎಂದು ಸರ್ವಜ್ಞನ ವಚನ ಪ್ರಸ್ತಾಪಿಸುವ ಮೂಲಕ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.