ಕಾರವಾರ: ತದಡಿ ನಂತರ ಮುದಗಾ ಬಂದರಿನಲ್ಲಿ ಮತ್ತೊಂದು ಭೀಕರ ದುರಂತ; ಬೋಟ್‌ನಲ್ಲಿ ವಿಷಗಾಳಿ ಸೇವಿಸಿ ಇಬ್ಬರು ಮೀನುಗಾರರು ಸಾವು!

ಇಂದು ಬೆಳಗ್ಗೆ ಮುದಗಾ ಬಂದರಿನಲ್ಲಿ, ಬೋಟ್ ಸ್ವಚ್ಛಗೊಳಿಸುತ್ತಿದ್ದ ವೇಳೆ ಕೊಳೆತ ಚಮನ್ ಮೀನಿನ ವಿಷ ಗಾಳಿ ಸೇವಿಸಿ ಇಬ್ಬರು ಮೀನುಗಾರರು ಮೃತಪಟ್ಟಿದ್ದು, ಮೂವರು ಅಸ್ವಸ್ಥರಾಗಿದ್ದಾರೆ.
Two fishermen die of suffocation while cleaning boat in Karwar
ಬೋಟ್‌ನಲ್ಲಿ ವಿಷಗಾಳಿ ಸೇವಿಸಿ ಇಬ್ಬರು ಮೀನುಗಾರರು ಸಾವು
Updated on: 

ಕಾರವಾರ: ಕಳೆದ ಮಂಗಳವಾರ ಉತ್ತರ ಕನ್ನಡ ಜಿಲ್ಲೆಯ ತದಡಿ ಬಂದರಿನಲ್ಲಿ ಬೋಟ್ ನ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದ ವೇಳೆ ಮೂವರು ಮೀನುಗಾರರು ವಿಷಕಾರಿ ವಾಸನೆಯಿಂದ ಉಸಿರುಗಟ್ಟಿ ಮೃತಪಟ್ಟ ಬೆನ್ನಲ್ಲೇ ಶನಿವಾರ ಕಾರವಾರ ತಾಲೂಕಿನ ಮುದಗಾ ಬಂದರಿನಲ್ಲಿ ಮತ್ತೊಂದು ದುರಂತ ಸಂಭವಿಸಿದೆ.

ಇಂದು ಬೆಳಗ್ಗೆ ಮುದಗಾ ಬಂದರಿನಲ್ಲಿ, ಬೋಟ್ ಸ್ವಚ್ಛಗೊಳಿಸುತ್ತಿದ್ದ ವೇಳೆ ಕೊಳೆತ ಚಮನ್ ಮೀನಿನ ವಿಷ ಗಾಳಿ ಸೇವಿಸಿ ಇಬ್ಬರು ಮೀನುಗಾರರು ಮೃತಪಟ್ಟಿದ್ದು, ಮೂವರು ಅಸ್ವಸ್ಥರಾಗಿದ್ದಾರೆ.

ಮೃತ ಮೀನುಗಾರರನ್ನು ಒಡಿಶಾ ಮೂಲದ ಪುರಂಧರ್ ಬಿಸರ(21), ಆಕಾಶ್ ನಾಯ್ಕ (24) ಎಂದು ಗುರುತಿಸಲಾಗಿದೆ. ಲಾಲಿಂದರ್ ದೃವ (41) ಗಂಭೀರ ಸ್ಥಿತಿಯಲ್ಲಿದ್ದು, ರಾಬುಲ್ ಎಂಬ ಕಾರ್ಮಿಕ ಹಾಗೂ ಇನ್ನೋರ್ವ ಕಾರ್ಮಿಕರು ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Two fishermen die of suffocation while cleaning boat in Karwar
ಗೋಕರ್ಣದ ತದಡಿ ಬಂದರಿನಲ್ಲಿ ಭೀಕರ ದುರಂತ; ಬೋಟ್‌ನಲ್ಲಿ ಉಸಿರುಗಟ್ಟಿ ಮೂವರು ಮೀನುಗಾರರು ಸಾವು!

ಮಲ್ಪೆ ಮೂಲದ ಕೃಷ್ಣ ಎಂಬವರಿಗೆ ಸೇರಿದ ಬೋಟ್ ಮೀನನ್ನು ಅನ್‌ಲೋಡ್ ಮಾಡಲು ಮುದಗಾ ಬಂದರಿಗೆ ಬಂದಿತ್ತು. ಈ ವೇಳೆ ಮೀನುಗಳನ್ನ ಬಂದರಿನಲ್ಲಿ ಇಳಿಸಿ ಐದು ಜನ ಕಾರ್ಮಿಕರು ಬೋಟಿನ ಒಳಗೆ ಸ್ವಚ್ಛ ಮಾಡಲು ತೆರಳಿದ್ದರು. ಈ ವೇಳೆ ಚಮನ್ ಮೀನಿನ ವಿಷಗಾಳಿ ಸೇವಿಸಿ ಐವರು ಕಾರ್ಮಿಕರು ಕುಸಿದು ಬಿದ್ದರು. ತಕ್ಷಣ ಮೂರನ್ನು ರಕ್ಷಿಸಿದರೂ ಇಬ್ಬರು ಬೋಟಿನಲ್ಲಿಯೇ ಮೃತಪಟ್ಟಿದ್ದಾರೆ.

ಎನ್‌ಡಿಆರ್‌ಎಫ್ ತಂಡ ಮಲ್ಟಿ ಡಿಟೆಕ್ಟರ್‌ನಿಂದ ವಿಷ ಅನಿಲ ಸಾಂದ್ರತೆ ತಪಾಸಣೆ ನಡೆಸಿದೆ. ಬೋಟ್‌ನಲ್ಲಿ 100% ಹೈಡ್ರೋಜನ್ ಸಲ್ಫೇಟ್ ವಿಷ ಅನಿಲ ಇರುವುದನ್ನ ಎನ್‌ಡಿಆರ್‌ಎಫ್ ತಂಡ ಪತ್ತೆ ಮಾಡಿದೆ. ಎನ್‌ಡಿಆರ್‌ಎಫ್ ಇನ್ಪೆಕ್ಟರ್ ವಿನೋದ್ ಕುಮಾರ್ ಮಾತನಾಡಿ, ಕೇವಲ 10% ಮಾತ್ರ ಹೈಡ್ರೋಜನ್ ಸಲ್ಫೇಟ್ ಇರಬೇಕು. ಆದರೆ, 100% ಗೂ ಹೆಚ್ಚು ಅನಿಲ ತುಂಬಿಕೊಂಡಿದೆ. ಕಡ್ಡಿ ಗೀರಿದರೂ ಬೆಂಕಿ ಹತ್ತುತ್ತದೆ. ನಮ್ಮ ತಂಡದಿಂದ ತಪಾಸಣೆ ನಡೆಸಿದ್ದೇವೆ. ಇದೀಗ ಬೋಟ್ ಸ್ಟೋರೇಜ್ ಓಪನ್ ಮಾಡಿ ಮೂರು ದಿನ ಹಾಗೆಯೇ ಬಿಡಬೇಕು. ಅತೀ ಅಪಾಯಕಾರಿ ಅನಿಲ ಇದು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X