

ಚಿಕ್ಕಮಗಳೂರು: ಗೃಹಲಕ್ಷ್ಮಿ ಯೋಜನೆ ಹಣ ನೀಡದ ಕಾರಣಕ್ಕೆ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತಾಯಿತು ಎಂಬ ಚರ್ಚೆಗಳು ನಡೆಯುತ್ತಿವೆ. ಇತ್ತೀಚಿಗೆ ವಿಧಾನಪರಿಷತ್ ಸದಸ್ಯ ಸಿಟಿ ರವಿ ಕೂಡಾ ಇಂತಹ ಮಾತುಗಳನ್ನಾಡಿದ್ದರು.
ಈ ಕುರಿತು ಕಡೂರಿನಲ್ಲಿ ಇಂದು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸಿಟಿ ರವಿಗೆ ಸಖತ್ ಟಾಂಗ್ ಕೊಟ್ಟರು. ತಮ್ಮಯ್ಯಾ… ಯಾರಯ್ಯಾ… ನಿನ್ನ ಮೇಲೆ ಸೋತದ್ದು… ಸಿ.ಟಿ.ರವಿ. ಸಿ.ಟಿ.ರವಿ ಮೊನ್ನೆ ಹೇಳ್ತಿದ್ನಂತೆ. ಗೃಹಲಕ್ಷ್ಮಿ ಯೋಜನೆ ಕೊಡ್ಲಿಲ್ಲ ಅದಕ್ಕೆ ಸಿಎಂ ಸ್ಥಾನ ಹೋಯ್ತು ಅಂದನಂತೆ. ನಾನು, ರಾಹುಲ್ ಗಾಂದಿಗೆ ಮಾತು ಕೊಟ್ಟಿದ್ದೆ. ಅವರು ರಾಜೀನಾಮೆ ಕೊಡು ಅಂದ್ರು ಕೊಟ್ಟೆ ಎಂದು ಹೇಳಿದರು.
ಬಹಳ ಜನ ನನಗೆ ಕೊಡಬೇಡಿ ಸರ್ ಅಂದ್ರು, ಇಲ್ಲ ಮಾತು ಕೊಟ್ಟಿದ್ದೇನೆ ಕೊಡಬೇಕು ಅಂತ ಕೊಟ್ಟೆ. ರಾಜಕೀಯದಲ್ಲಿ ಕೊಟ್ಟ ಮಾತು ಉಳಿಸಿಕೊಂಡ ಯಾವುದಾದರೂ ಸರ್ಕಾರ ಇದ್ದರೆ ಅದು ಸಿದ್ದರಾಮಯ್ಯ ಸರ್ಕಾರ ಎಂದು ಸಿ.ಟಿ.ರವಿ ವಿರುದ್ಧ ವಾಗ್ದಾಳಿ ನಡೆಸಿದರು.
ನಾನು ಯಾವುದೋ ದೇವಸ್ಥಾನಕ್ಕೆ ಹೋದಾಗ ಮೋದಿ…ಮೋದಿ… ಅಂತಿದ್ರು. ಮೋದಿ ಸ್ವಾತಂತ್ರ‍್ಯಕ್ಕೆ ಹೋರಾಡಿದ್ರಾ, ಸಂಗೊಳ್ಳಿ ರಾಯಣ್ಣ ರೀತಿ ಹೋರಾಡಿದ್ರಾ? ಜನ ಸುಮ್ನೆ ಮೋದಿ… ಮೋದಿ… ಅಂತಾರೆ. 2 ಕೋಟಿ ಕೆಲಸ ಎಲ್ಲಿ, ಅಚ್ಚೇ ದಿನ್ ಎಲ್ಲಿ, ರೈತರ ಆದಾಯ ದುಪ್ಪಟ್ಟು ಮಾಡ್ತೀನಿ ಅಂದ್ರು ಮಾಡಿದ್ರಾ? ಎಂದು ಪ್ರಶ್ನಿಸಿದರು.
12 ವರ್ಷ ಆಯ್ತು ಪ್ರಧಾನಿ ಆಗಿ, ಕಪ್ಪು ಹಣ ತಂದು 15 ಲಕ್ಷ ಹಾಕ್ತೀನಿ ಅಂದ್ರು ಹಾಕಿದ್ರಾ? ಪಾರ್ಲಿಮೆಂಟ್ ಚುನಾವಣೆಯಲ್ಲಿ ಬಿಜೆಪಿಗೆ ಏಕೆ ಮತ ಹಾಕಬೇಕು? ಪಾಪ… ಜನರಗೆ ತಪ್ಪು ಮಾಹಿತಿ ನೀಡಿ ತಪ್ಪು ದಾರಿಗೆ ಎಳೆದಿದ್ದಾರೆ ಎಂದು ಹೇಳಿದರು.