

ಬೆಂಗಳೂರು: ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಸಂಬಂಧಿಸಿದ ಹಳೆಯ ವೈಯಕ್ತಿಕ ವಿಷಯವೊಂದನ್ನು ಪ್ರಸ್ತಾಪಿಸಿ ಗಂಭೀರ ಆರೋಪ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಎಚ್.ಡಿ. ಕುಮಾರಸ್ವಾಮಿ ಅವರು ಈ ಹಿಂದೆ ರಾಧಿಕಾ ಅವರಿಗೆ ಅಬಾರ್ಷನ್ (ಗರ್ಭಪಾತ) ಮಾಡಿಸಲು ಮುಂದಾಗಿದ್ದರು ಮತ್ತು ಈ ವಿಷಯಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಕೆಲವರ ಮನೆ ಬಾಗಿಲಿಗೆ ಹೋಗಿ ನಿಂತಿದ್ದರು ಎಂದು ಮಾಧುಸ್ವಾಮಿ ಸಾರ್ವಜನಿಕವಾಗಿ ಆರೋಪಿಸಿದ್ದಾರೆ. ವೈಯಕ್ತಿಕ ಜೀವನದ ಹಳೆಯ ವಿಚಾರಗಳನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಂಡಿರುವುದು ಕರ್ನಾಟಕದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ವಿಧಾನಸಭೆಯಲ್ಲಿ ಸಭಾ ನಾಯಕರಿಲ್ಲದೇ ಏಕೆ ಅಧಿವೇಶನ ಕರೆದ್ರಿ ಎಂದು ಪ್ರಶ್ನಿಸಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ನಂಬರ್ ಇಲ್ಲದ ಕಾರಿನಲ್ಲಿ ಮಂಗಳೂರಿನಲ್ಲಿ ಓಡಾಡುತ್ತಿದ್ದರು. ಶಾಸ್ತ್ರ ಕೇಳಿ ರಾಧಿಕಾಗೆ ಅಬಾರ್ಷನ್ ಮಾಡಿಸಲು ಮುಂದಾಗಿದ್ದರು. ಆದರೆ ಆಕೆ ಒಪ್ಪಲಿಲ್ಲ. ಆಕೆಯ ಮನವೊಲಿಸಲು ಯಾರ್ಯಾರ ಮನೆ ಬಾಗಿಲಿಗೆ ಹೋಗಿದ್ದಾರೆ ಎಂಬುದು ನನಗೆ ಗೊತ್ತು, ನಾನು ಸುಳ್ಳು ಹೇಳುತ್ತಿಲ್ಲ.
ನನ್ನ ಬಳಿ ಅಧಿಕೃತ ಮಾಹಿತಿ ಇದೆ. ನನಗೆ ಯಾವುದೇ ಭಯ ಇಲ್ಲ. ಮುಖ್ಯಮಂತ್ರಿ ಸ್ಥಾನದಲ್ಲಿದ್ದುಕೊಂಡು ಮೊದಲನೆ ಹೆಂಡತಿ ಇದ್ದರೂ ಎರಡನೇ ಮದುವೆಯಾಗಿರುವ ಇವರಿಗೆ ನೈತಿಕತೆ ಇದ್ಯಾ? ನನಗೆ ನೈತಿಕತೆ ಪಾಠ ಹೇಳಲು ಬರುತ್ತಾರಾ ಎಂದು ಕುಮಾರಸ್ವಾಮಿ ವಿರುದ್ಧ ಮಾಧುಸ್ವಾಮಿ ಮಾತನಾಡಿರುವ ಹಳೇಯ ವಿಡಿಯೋವೊಂದು ಈಗ ವೈರಲ್ ಆಗಿದೆ.
ಚಿಕ್ಕನಾಯಕನಹಳ್ಳಿ ಶಾಸಕರನ್ನು ಕುಮಾರಸ್ವಾಮಿ ತಮ್ಮ ಜೊತೆ ಏಕೆ ಇಟ್ಟುಕೊಂಡಿದ್ದರು ಎಂಬುದು ನನಗೆ ಗೊತ್ತು ಎಂದು ಹೇಳಿರುವ ಅವರು, ಯಾವ್ಯಾವ ಗೆಸ್ಟ್ ಹೌಸ್ ನಲ್ಲಿ ಏನೇನು ಮಾಡಿದ್ದಾರೆ ಎಂಬ ಸಂಪೂರ್ಣ ಮಾಹಿತಿಯಿದೆ. ನನ್ನ ಜೊತೆ ಚಾಲೆಂಜ್ ಮಾಡಲಿ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಮದುವೆಯಾಗಿರುವ ವಿಷಯದ ಬಗ್ಗೆ ಕುಮಾರಸ್ವಾಮಿ ಎಲ್ಲಿಯೂ ಏನನ್ನೂ ಹೇಳಲಿಲ್ಲ. ಆದರೆ ಆಕೆ ಮಾತ್ರ ರಾಧಿಕಾ ಕುಮಾರಸ್ವಾಮಿ ಅಂತಾ ಹೇಳಿದ್ದಾಳೆ. ರಾಧಿಕಾ ಕುಮಾರಸ್ವಾಮಿ ಪ್ರೊಡಕ್ಷನ್ ಹೆಸರಲ್ಲಿ ಸಿನಿಮಾ ತೆಗಿತಾಳೆ ಎಂದಿದ್ದಾರೆ.