ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಹೆಚ್ಚುತ್ತಿರುವ ಒತ್ತಡ: 5 ರಲ್ಲಿ 3 GBA ಗೆಲ್ಲುವ ಅನಿವಾರ್ಯತೆ; ಕಾಂಗ್ರೆಸ್ ಸರ್ಕಾರಕ್ಕೆ ಸತ್ವ ಪರೀಕ್ಷೆ!

ಅನೇಕ ನಾಗರಿಕ ಸಮಸ್ಯೆಗಳ ನಡುವೆ, ಸ್ಥಳೀಯ ಕೌನ್ಸಿಲರ್ ಇಲ್ಲದಿರುವುದು ಜನರಲ್ಲಿ ಹತಾಶೆ ಮೂಡಿಸಿದೆ. ನಮ್ಮ ಸರ್ಕಾರವು ಐದು ನಿಗಮಗಳನ್ನು ರಚಿಸಿದೆ. ಅವುಗಳಲ್ಲಿ ಕನಿಷ್ಠ ಮೂರನ್ನಾದರೂ ಗೆಲ್ಲಬೇಕೆಂಬ ಒತ್ತಡ ನಮ್ಮ ಮೇಲಿದೆ
Dk Shivakumar
ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್
Updated on

ಬೆಂಗಳೂರು: ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರವು 100 ದಿನಗಳ ಆಡಳಿತ ಪೂರೈಸುತ್ತಿರುವಾಗ, ಪಂಚಾಯತ್‌ಗಳು, ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಮತ್ತು ಇತರ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮೇಲೆ ಒತ್ತಡ ಹೆಚ್ಚುತ್ತಿದೆ. ಹೊಸ ಸರ್ಕಾರಕ್ಕೆ ಇದು ಮೊದಲ ಪ್ರಮುಖ ಚುನಾವಣಾ ಸವಾಲಾಗಿರಲಿದೆ.

ಸುಮಾರು 6,000 ಗ್ರಾಮ ಪಂಚಾಯತ್‌ಗಳು, 239 ತಾಲೂಕು ಮತ್ತು 31 ಜಿಲ್ಲಾ ಪಂಚಾಯತ್‌ಗಳು ಹಾಗೂ ಬೆಂಗಳೂರಿನ GBA ವ್ಯಾಪ್ತಿಯ ಐದು ನಿಗಮಗಳಿಗೆ ಚುನಾವಣೆಗಳು ನಡೆಯಬೇಕಿದೆ. ಮೈಸೂರು, ದಾವಣಗೆರೆ, ಮಂಗಳೂರು, ಶಿವಮೊಗ್ಗ ಮತ್ತು ತುಮಕೂರು ಮಹಾನಗರ ಪಾಲಿಕೆಗಳಿಗೂ ಚುನಾವಣೆಗಳು ಬಾಕಿ ಇವೆ.

ರಾಜ್ಯ ರಾಜಧಾನಿಯು ಕಳೆದ ಆರು ವರ್ಷಗಳಿಂದ ಚುನಾಯಿತ ಆಡಳಿತ ಮಂಡಳಿಯನ್ನು ಹೊಂದಿಲ್ಲ. ಸರ್ಕಾರವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು (BBMP) ಐದು ನಿಗಮಗಳಾಗಿ ವಿಂಗಡಿಸಿದ್ದು, ಇವು ಈಗ GBAಯ ಭಾಗವಾಗಿವೆ. ಆದರೂ ಕೆಲವು ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ.

ಶಿವಕುಮಾರ್ ಅವರು ಜೂನ್ 3 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ನೀಕರಿಸಿದರು, ಕೃಷ್ಣ ಬೈರೇಗೌಡ ಅವರು ಸುಮಾರು ಎರಡು ವಾರಗಳ ನಂತರ ಬೆಂಗಳೂರು ಅಭಿವೃದ್ಧಿ ಖಾತೆಯ ಜವಾಬ್ದಾರಿಯನ್ನು ವಹಿಸಿಕೊಂಡರು.

Dk Shivakumar
'ದೃಢ ಕರ್ನಾಟಕ': ಮುಂದಿನ 500 ದಿನಗಳು ಮಹತ್ವದ್ದು, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ; CM ಡಿ.ಕೆ ಶಿವಕುಮಾರ್; Video

ಗುಂಡಿಗಳು, ಹದಗೆಟ್ಟ ರಸ್ತೆಗಳು, ಸಂಚಾರ ದಟ್ಟಣೆ, ಕಲುಷಿತ ಕೆರೆಗಳು, ವಿಲೇವಾರಿಯಾಗದ ಕಸ ಮತ್ತು ಇತರ ನಾಗರಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ, ರಾಜ್ಯ ರಾಜಧಾನಿಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಎದುರಿಸುವುದು ಆಡಳಿತಾರೂಢ ಕಾಂಗ್ರೆಸ್‌ಗೆ ಸವಾಲಿನ ವಿಷಯವಾಗಿದೆ. ಬೆಂಗಳೂರಿನ ಎಲ್ಲಾ ನಾಲ್ಕು ಲೋಕಸಭಾ ಕ್ಷೇತ್ರಗಳನ್ನು (ಬೆಂಗಳೂರು ಗ್ರಾಮಾಂತರ ಸೇರಿದಂತೆ) ಬಿಜೆಪಿ ಪ್ರತಿನಿಧಿಸುತ್ತಿದೆ ಮತ್ತು ನಗರದಲ್ಲಿ ಹೆಚ್ಚಿನ ಸಂಖ್ಯೆಯ ಶಾಸಕರನ್ನೂ ಬಿಜೆಪಿ ಹೊಂದಿದೆ.

'ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ಜೊತೆ ಮಾತನಾಡಿದ ಹಿರಿಯ ಕಾಂಗ್ರೆಸ್ ಸದಸ್ಯರೊಬ್ಬರು, ಬೆಂಗಳೂರಿನ ಜನರು ಹಿಂದಿನ ಬಿಬಿಎಂಪಿ ಆಡಳಿತವನ್ನು ಮರೆತಿದ್ದಾರೆ ಎಂದು ಹೇಳಿದರು. ಅನೇಕ ನಾಗರಿಕ ಸಮಸ್ಯೆಗಳ ನಡುವೆ, ಸ್ಥಳೀಯ ಕೌನ್ಸಿಲರ್ ಇಲ್ಲದಿರುವುದು ಜನರಲ್ಲಿ ಹತಾಶೆ ಮೂಡಿಸಿದೆ. ನಮ್ಮ ಸರ್ಕಾರವು ಐದು ನಿಗಮಗಳನ್ನು ರಚಿಸಿದೆ. ಅವುಗಳಲ್ಲಿ ಕನಿಷ್ಠ ಮೂರನ್ನಾದರೂ ಗೆಲ್ಲಬೇಕೆಂಬ ಒತ್ತಡ ನಮ್ಮ ಮೇಲಿದೆ, ಇದು ಸವಾಲಿನ ವಿಷಯವಾಗಿದೆ.

ಇಷ್ಟು ವರ್ಷಗಳ ಕಾಲ ಬೆಂಗಳೂರು ಒಂದೇ ನಿಗಮವನ್ನು ಹೊಂದಿತ್ತು. ಸಾಮಾನ್ಯವಾಗಿ ಒಂದೇ ಪಕ್ಷವು ಅಧಿಕಾರಕ್ಕೆ ಬರುತ್ತಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ನಿಗಮದ ಚುನಾವಣೆಯಲ್ಲಿ ಸೋಲುವುದು ರಾಜ್ಯ ಸರ್ಕಾರಕ್ಕೆ ಮುಜುಗರದ ವಿಷಯವಾಗಲಿದೆ ಎಂದು ಅವರು ಹೇಳಿದರು.

ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ಪಂಚಾಯತ್ ಚುನಾವಣೆಗಳಿಗೆ ಸಿದ್ಧತೆಗಳನ್ನು ಆರಂಭಿಸಿದ್ದರೆ, ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ GBA ಚುನಾವಣೆಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಸ್ವಲ್ಪ ಕಾಲಾವಕಾಶ ಸಿಕ್ಕಂತಾಗಿದೆ.

ಈ ಹಿಂದೆ GBA ಚುನಾವಣೆಗಳಿಗೆ ಜೂನ್ ಗಡುವನ್ನು ನಿಗದಿಪಡಿಸಿದ್ದ ಸುಪ್ರೀಂ ಕೋರ್ಟ್, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಚುನಾವಣೆ ನಡೆಸಲು ಕಾಲಾವಕಾಶ ವಿಸ್ತರಣೆಗೆ ನಂತರ ಅನುಮತಿ ನೀಡಿತು. ಸರ್ವೋಚ್ಚ ನ್ಯಾಯಾಲಯವು ಈಗ ಗಡುವನ್ನು ಡಿಸೆಂಬರ್‌ಗೆ ನಿಗದಿಪಡಿಸಿದೆ. ತಮ್ಮ ಜಿಲ್ಲೆಗಳಲ್ಲಿ ಲಭ್ಯವಿರುವ ಮತಪೆಟ್ಟಿಗೆಗಳ ವಿವರಗಳನ್ನು ಒದಗಿಸುವಂತೆ ರಾಜ್ಯ ಚುನಾವಣಾ ಆಯೋಗವು ಈಗ ಎಲ್ಲಾ ಜಿಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com