ಪಂಚ ಗ್ಯಾರಂಟಿ ಯೋಜನೆ ತರಲು ನಾನೇ ಮೂಲ ಕಾರಣ: ಡಿ ಕೆ ಶಿವಕುಮಾರ್

ಮಾಧ್ಯಮ ಪ್ರತಿನಿಧಿಯೊಬ್ಬರು ನೀವು ಸಿಎಂ ಆಗಿದ್ದಾಗ ಈ ಯೋಜನೆ ತಂದಿದ್ದೀರಿ, ಇಂತಹ ಗುರುತರ ಕೆಲಸ ಮಾಡಿದ್ದೀರಿ ಎಂದು ಹೇಳುವಂಥಹ ಯಾವ ಕೆಲಸ ಮಾಡಿದ್ದೀರಿ ಎಂದು ಕೇಳಿದರು.
D K Shivakumar
ಡಿ ಕೆ ಶಿವಕುಮಾರ್
Updated on

ಬೆಂಗಳೂರು: ಡಿ ಕೆ ಶಿವಕುಮಾರ್ ಸಿಎಂ ಆಗಿ 100 ದಿನಗಳ ಅವಧಿ ಪೂರ್ಣಗೊಳಿಸಿದ ಸಂದರ್ಭದಲ್ಲಿ ಪತ್ರಕರ್ತರ ಜೊತೆ ಸಂವಾದ ಏರ್ಪಡಿಸಿದ್ದರು.

ಆ ವೇಳೆ ಮಾಧ್ಯಮ ಪ್ರತಿನಿಧಿಯೊಬ್ಬರು ನೀವು ಸಿಎಂ ಆಗಿದ್ದಾಗ ಈ ಯೋಜನೆ ತಂದಿದ್ದೀರಿ, ಇಂತಹ ಗುರುತರ ಕೆಲಸ ಮಾಡಿದ್ದೀರಿ ಎಂದು ಹೇಳುವಂಥಹ ಯಾವ ಕೆಲಸ ಮಾಡಿದ್ದೀರಿ ಎಂದು ಕೇಳಿದರು.

ಅದಕ್ಕೆ ಸಿಎಂ ಡಿ ಕೆ ಶಿವಕುಮಾರ್, ಪಂಚ ಗ್ಯಾರಂಟಿ ಯೋಜನೆಗಳನ್ನು ತಂದಿದ್ದು ನನ್ನ ಅಧ್ಯಕ್ಷತೆಯಲ್ಲಿ. ಪಂಚ ಗ್ಯಾರಂಟಿ ಯೋಜನೆ ತರಲು ನಾನೇ ಮೂಲ ಕಾರಣ. ಸಿದ್ದರಾಮಯ್ಯನವರು 10 ಕೆಜಿ ಅನ್ನಭಾಗ್ಯ ಯೋಜನೆ ಹೇಳಿದ್ದರು. ಉಳಿದ ಯೋಜನೆಗಳನ್ನು ನಾನೇ ಸಿದ್ಧಪಡಿಸಿ,ನಾನೇ ಪರಿಕಲ್ಪನೆ ಕೊಟ್ಟು ನಾನೇ ಜಾರಿಗೆ ತರಲು ಕಾರಣನು ಎಂದರು.

D K Shivakumar
ಮೈಸೂರಲ್ಲಿ ಪ್ರಧಾನಿ ಮೋದಿ ಕಿವಿಯಲ್ಲಿ ಹೇಳಿದ್ದೇನು? ಗೌತಮ್ ಅದಾನಿ ಬೆಂಗಳೂರಿಗೆ ಬಂದಿದ್ದೇಕೆ: ಡಿ ಕೆ ಶಿವಕುಮಾರ್ ಏನು ಹೇಳಿದ್ರು?

ಪ್ರಜಾಸೇವೆ ಇಲಾಖೆಯನ್ನು ಆರಂಭಿಸಿದ್ದು ಕೂಡ ನಾನೇ. ಭಾರತ್ ಜೋಡೋ ಯುವಕರ ಸಂಘ, ಈ ರಾಜ್ಯದ ಬೃಹತ್ 2 ನೀರಾವರಿ ಯೋಜನೆಗಳಾದ ಕಾವೇರಿ ಮತ್ತು ತುಂಗಭದ್ರೆಗೆ ಹೊಸ ರೂಪ ಕೊಟ್ಟಿದ್ದು ನಾನೇ. ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ರೈತರಿಗೆ 70 ಸಾವಿರ ಎಕರೆ ಜಮೀನಿಗೆ ಹೊಸ ಸಮಾಲೋಚನೆ ಮಾಡಿದ್ದು ನನ್ನ ಅವಧಿಯಲ್ಲಿಯೇ ಎಂದರು.

ಹೀಗೆ ನಾನು ಮಾಡಿರುವ ಅನೇಕ ಕೆಲಸಗಳಿವೆ, ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ, ನಾನು ಇತಿಹಾಸವನ್ನು ಓದುವುದು, ಬರೆಯುವುದಲ್ಲಿ ನಂಬಿಕೆ ಇಟ್ಟಿಲ್ಲ, ಇತಿಹಾಸ ಸೃಷ್ಟಿಸುವುದರ ಮೇಲೆ ನಂಬಿಕೆಯಿಟ್ಟವನು ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com