

ಬೆಂಗಳೂರು: ಗಣಪತಿ ಹಬ್ಬಕ್ಕೆ ಟಿ. ನರಸೀಪುರ ಇನ್ಸ್ ಪೆಕ್ಟರ್ ಧನಂಜಯ್ ಹಲವು ನಿರ್ಬಂಧಗಳನ್ನು ಹಾಕಿರುವುದಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದು ಹಿಂದೂಗಳ ತಂಟೆಗೆ ಹೋದರೆ ಹುಷಾರ್. ಎಲ್ಲೇ ಗಣಪತಿ ಹಬ್ಬಕ್ಕೆ ತೊಂದರೆ ಆದರೂ ನಾನು ಬರುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ನೆಮ್ಮದಿಯಿಂದ ಗಣೇಶೋತ್ಸವ ಮಾಡಲೂ ಬಿಡ್ತಿಲ್ಲ. ಇಡೀ ರಾಜ್ಯಾದ್ಯಂತ ಸರ್ಕಾರದಿಂದ ಕಿರುಕುಳ ನಡೆಯುತ್ತಿದೆ. ಇನ್ಸ್ಪೆಕ್ಟರ್ ಧನಂಜಯ್ ಹೀಗೆ ಮಾತನಾಡಿದ್ದಾರೆ ಎಂದರೆ ಇದರ ಹಿಂದೆ ದೊಡ್ಡ ಷಢ್ಯಂತ್ರ ಇದೆ. ಸರ್ಕಾರದ ಕುಮ್ಮಕ್ಕಿದೆ. ಕರ್ನಾಟಕದಲ್ಲಿ ಹಿಂದೂ ವಿರೋಧಿ ಸರ್ಕಾರ ಇದೆ. ಎಂದು ವಾಗ್ದಾಳಿ ನಡೆಸಿದರು.
ಟಿ. ನರಸೀಪುರದಲ್ಲಿ ಇನ್ಸ್ಪೆಕ್ಟರ್ ಧನಂಜಯ್ ದುರಹಂಕಾರದಿಂದ ಮಾತನಾಡಿದ್ದಾರೆ. ಮಸೀದಿ ಮುಂದೆ ಮೆರಣಿಗೆ ಮಾಡುವಂತಿಲ್ಲ, ಪಟಾಕಿ ಹೊಡೆಯುವಂತಿಲ್ಲ ಅಂದಿದ್ದಾರೆ. ನೀವೇನು ರೌಡಿನಾ ಗ್ರಹಚಾರ ಬಿಡಿಸೋಕೆ ಅಥವಾ ಮೆರವಣಿಗೆ ಮಾಡೋರು ರೌಡಿಗಳಾ ಎಂದು ಪ್ರಶ್ನಿಸಿದರು. ಡಿಕೆ ಶಿವಕುಮಾರ್ ಚುನಾವಣೆ ಬಂದ ತಕ್ಷಣ ದೇವಸ್ಥಾನಗಳಿಗೆ ಹೋಗ್ತಾರೆ, ಕುಂಕುಮ ಹಾಕ್ತಾರೆ, ನದೀಲಿ ಮುಳುಗ್ತಾರೆ. ನಾನೂ ದೊಡ್ಡ ಹಿಂದೂ ಅಂತ ಬಿಂಬಿಸಿಕೊಳ್ತಾರೆ. ಇದೇನಾ ನಿಮ್ಮ ಹಿಂದೂ ಕಾಳಜಿ? ಭಕ್ತಾದಿಗಳಿಗೆ ಧಮಕಿ ಹಾಕೋದೇ ಕರ್ನಾಟಕ ಮಾಡೆಲ್ಲಾ? ಚುನಾವಣೆ ಬಂದಾಗ ಮಾತ್ರ ಕಪಟ ಹಿಂದುತ್ವ ತೋರುತ್ತೀರಾ ಎಂದು ಪ್ರಶ್ನಿಸಿದರು.