ಹಾವೇರಿ: ಪ್ರೀತಿಸಿ ಮದುವೆಯಾಗಿದ್ದ ಪತ್ನಿ ದೂರ; 'ಮುಂದಿನ ಜನ್ಮ ಇದ್ದರೆ ನಿನ್ನವನಾಗಿ ಹುಟ್ಟುವೆ' ಎಂದು ಪೋಸ್ಟ್ ಹಾಕಿ ಯುವಕ ಆತ್ಮಹತ್ಯೆ!

ಮೃತ ಯುವಕನನ್ನು ಹಾವೇರಿ ನಗರದ ನಿವಾಸಿ 24 ವರ್ಷದ ಮಂಜುನಾಥ್ ಅಗಡಿ ಎಂದು ಗುರುತಿಸಲಾಗಿದ್ದು, ಪ್ರೀತಿಸಿ ಮದುವೆಯಾಗಿದ್ದ ಪತ್ನಿ ತನ್ನಿಂದ ದೂರವಾದಳು ಎಂಬ ನೋವಿನಿಂದ ಮನನೊಂದ ಸಾವಿಗೆ ಶರಣಾಗಿದ್ದಾನೆ.
Youth dies by suicide in Haveri
ಮಂಜುನಾಥ್ ಅಗಡಿ
Updated on

ಹಾವೇರಿ: ಪ್ರೀತಿಸಿ ಮದುವೆಯಾಗಿದ್ದ ಯುವತಿ ಪೋಷಕರ ಒತ್ತಾಯಕ್ಕೆ ಮಣಿದು ತನ್ನನ್ನು ಬಿಟ್ಟು ಹೋದಳೆಂದು ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಭಾನುವಾರ ಹಾವೇರಿಯಲ್ಲಿ ನಡೆದಿದೆ.

ಮೃತ ಯುವಕನನ್ನು ಹಾವೇರಿ ನಗರದ ನಿವಾಸಿ 24 ವರ್ಷದ ಮಂಜುನಾಥ್ ಅಗಡಿ ಎಂದು ಗುರುತಿಸಲಾಗಿದ್ದು, ಪ್ರೀತಿಸಿ ಮದುವೆಯಾಗಿದ್ದ ಪತ್ನಿ ತನ್ನಿಂದ ದೂರವಾದಳು ಎಂಬ ನೋವಿನಿಂದ ಮನನೊಂದ ಸಾವಿಗೆ ಶರಣಾಗಿದ್ದಾನೆ.

ಕಳೆದ ಎರಡು ವರ್ಷಗಳಿಂದ ಹಾವೇರಿ ತಾಲೂಕಿನ ಗ್ರಾಮವೊಂದರ ಯುವತಿಯನ್ನು ಪ್ರೀತಿಸುತ್ತಿದ್ದ ಮಂಜುನಾಥ, ಇತ್ತೀಚೆಗೆ ಆಕೆಯೊಂದಿಗೆ ಮನೆ ಬಿಟ್ಟು ಹೋಗಿ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದ ಎನ್ನಲಾಗಿದೆ.

Youth dies by suicide in Haveri
ಬೆಂಗಳೂರು: ರೀಲ್ಸ್ ವಿಚಾರಕ್ಕೆ ಗಲಾಟೆ; ಬಿಯರ್ ಬಾಟಲ್‌ನಿಂದ ಪತ್ನಿ ಕೊಂದು ಪತಿ ಆತ್ಮಹತ್ಯೆ!

ಆದರೆ ಯುವತಿ ಪೋಷಕರಿಗೆ ಈ ಪ್ರೇಮ ವಿವಾಹ ಇಷ್ಟವಿರಲಿಲ್ಲ. ಅಲ್ಲದೆ ಮಗಳು ಕಾಣೆಯಾಗಿದ್ದಾಳೆ ಎಂದು ಹಾವೇರಿ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಪೊಲೀಸರು ಇಬ್ಬರನ್ನು ಪತ್ತೆ ಹಚ್ಚಿ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು. ಈ ವೇಳೆ ಯುವತಿ ಪೋಷಕರ ಒತ್ತಾಯಕ್ಕೆ ಮಣಿದು ಮಂಜುನಾಥನೊಂದಿಗೆ ಜೀವನ ನಡೆಸಲು ಸಾಧ್ಯವಿಲ್ಲ ಎಂದು ಹೇಳಿ ತನ್ನ ಮನೆಗೆ ತೆರಳಿದ್ದಳು ಎನ್ನಲಾಗಿದೆ.

ಇದರಿಂದ ತೀವ್ರವಾಗಿ ಮನನೊಂದಿದ್ದ ಮಂಜುನಾಥ ಕಳೆದ ಕೆಲ ದಿನಗಳಿಂದ ಖಿನ್ನತೆಗೆ ಒಳಗಾಗಿದ್ದನು. ಕುಟುಂಬಸ್ಥರು ಆತನಿಗೆ ಧೈರ್ಯ ಹೇಳಿ, ಘಟನೆ ಬಗ್ಗೆ ಹೆಚ್ಚು ಚಿಂತಿಸದಂತೆ ಸಮಾಧಾನಪಡಿಸಿದ್ದರು. ಆದರೆ ಸಂಗಾತಿಯನ್ನು ಮರೆಯಲಾಗದೆ ಮಾನಸಿಕವಾಗಿ ಖಿನ್ನತೆಗೊಳಗಾಗಿ ಇಂದು ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಆತ್ಮಹತ್ಯೆಗೂ ಮುನ್ನ ತನ್ನ ಭಾವನೆಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ‘ಮುಂದಿನ ಜನ್ಮ ಅಂತ ಇದ್ದರೆ ನಾನು ನಿನ್ನವನಾಗಿ ಹುಟ್ಟುವೆ’ ಎಂದು ಸಂದೇಶ ಪೋಸ್ಟ್ ಮಾಡಿದ್ದ ಎನ್ನಲಾಗಿದೆ.

ಈ ಸಂಬಂಧ ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com