ಪ್ರಜ್ವಲ್ ರೇವಣ್ಣ ಪೋನ್​ನಲ್ಲಿ ಮಾತನಾಡಿದ್ದು ಯಾರಿಗೆ? ನಾನು 4 ಸೆಲ್‌ಗಳ ಗೃಹ ಸಚಿವನಲ್ಲ; ಕುಮಾರಸ್ವಾಮಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು

ರೇವಣ್ಣ ಅವರದ್ದು ಸಾಮಾನ್ಯ ಅಥವಾ ಆರ್ಡಿನರಿ ಫ್ಯಾಮಿಲಿ ಅಲ್ಲ. ರಾಜಕೀಯವಾಗಿ ದೊಡ್ಡ ಹೆಸರು ಹೊಂದಿರುವ ಕುಟುಂಬ. ಈ ರೀತಿ ತಪ್ಪು ಮಾಡುತ್ತಿರುವುದನ್ನು ಕಂಡು, ಈಗಾಗಲೇ ಸಾಕಷ್ಟು ಮುಜುಗರ ಎದುರಿಸಿದ್ದೇವೆ, ಇನ್ನು ಮುಂದೆ ಹೀಗೆ ಮಾಡಿ ಮತ್ತಷ್ಟು ಮುಜುಗರಕ್ಕೆ ತಳ್ಳಬೇಡ .
Priyank Kharge
ಪ್ರಿಯಾಂಕ್ ಖರ್ಗೆ
Updated on

ಕಲಬುರಗಿ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ನಿರಂತರವಾಗಿ ಪೋನ್​​ನಲ್ಲಿ ಮಾತನಾಡಿದ್ದು ಯಾರಿಗೆ? ಇಷ್ಟೆಲ್ಲಾ ಮಾತನಾಡೋರು ಯಾಕೆ ಮಾಹಿತಿ ನೀಡಿಲ್ಲ ಎಂದು ಕೇಂದ್ರ ಸಚಿವ ಎಚ್ .ಡಿ ಕುಮಾರಸ್ವಾಮಿ ಅವರಿಗೆ ಪ್ರಿಯಾಂಕ್​ ಖರ್ಗೆ ಕೌಂಟರ್​ ಕೊಟ್ಟಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು ಸರ್ಕಾರದ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡ ಸಚಿವರು, "ನಾವು ಬರೀ ಪರಪ್ಪನ ಅಗ್ರಹಾರಕ್ಕೆ ಮಾತ್ರ ಸೀಮಿತವಾದ ಗೃಹ ಸಚಿವರಾ? ನಾನೇನು ಒಂದೇ ಒಂದು ಸೆಲ್‌ಗೆ ಮಾತ್ರ ಮಂತ್ರಿಯೇ?" ಎಂದು ಪ್ರಶ್ನಿಸಿದರು.

ರಾಜ್ಯದ ಕಾನೂನು ಸುವ್ಯವಸ್ಥೆ ಮತ್ತು ಜೈಲುಗಳ ಭದ್ರತೆ ನಮ್ಮ ಆದ್ಯತೆಯಾಗಿದೆ. ಕೇವಲ ಬೆಂಗಳೂರಿನ ಪರಪ್ಪನ ಅಗ್ರಹಾರ ಮಾತ್ರವಲ್ಲದೆ, ಕಲ್ಬುರ್ಗಿ, ಮಂಡ್ಯ, ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ಇರುವ ಪ್ರಮುಖ ಕಾರಾಗೃಹಗಳ ಮೇಲೆಯೂ ದಿಢೀರ್ ದಾಳಿಗಳನ್ನು ನಡೆಸಲಾಗಿದೆ ಎಂದರು.

ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಫೋನ್ ಇತ್ತು ಹಾಗೂ ಅವರು ಜೈಲಿನಿಂದಲೇ ತಮ್ಮ ಕುಟುಂಬದವರೊಂದಿಗೆ ಸಂಪರ್ಕದಲ್ಲಿದ್ದರು ಎನ್ನಲಾದ ವಿಚಾರಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, "ಜೈಲಿನಲ್ಲಿ ಮೊಬೈಲ್ ಇಟ್ಟುಕೊಂಡು ಕಾನೂನುಬಾಹಿರವಾಗಿ ಸಂಪರ್ಕದಲ್ಲಿದ್ದಾಗ, ಅವರ ಕುಟುಂಬದವರೇ ಅದಕ್ಕೆ ತಡೆ ಒಡ್ಡಬೇಕಿತ್ತು. ಮೊಬೈಲ್ ಇಟ್ಟುಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧ (ಕ್ರೈಮ್) ಎಂಬುದು ಎಲ್ಲರಿಗೂ ಗೊತ್ತಿದೆ" ಎಂದರು.

Priyank Kharge
'ತಮ್ಮ ಮಗನನ್ನು ಪ್ರತಿಷ್ಠಾಪಿಸಲು ಪ್ರಜ್ವಲ್ ರೇವಣ್ಣರನ್ನು ಮುಗಿಸಿದ ಕುಮಾರಸ್ವಾಮಿ': ಸಚಿವ ಬಾಲಕೃಷ್ಣ

ರೇವಣ್ಣ ಅವರದ್ದು ಸಾಮಾನ್ಯ ಅಥವಾ ಆರ್ಡಿನರಿ ಫ್ಯಾಮಿಲಿ ಅಲ್ಲ. ರಾಜಕೀಯವಾಗಿ ದೊಡ್ಡ ಹೆಸರು ಹೊಂದಿರುವ ಕುಟುಂಬ. ಈ ರೀತಿ ತಪ್ಪು ಮಾಡುತ್ತಿರುವುದನ್ನು ಕಂಡು, ಈಗಾಗಲೇ ಸಾಕಷ್ಟು ಮುಜುಗರ ಎದುರಿಸಿದ್ದೇವೆ, ಇನ್ನು ಮುಂದೆ ಹೀಗೆ ಮಾಡಿ ಮತ್ತಷ್ಟು ಮುಜುಗರಕ್ಕೆ ತಳ್ಳಬೇಡ ಎಂದು ಕುಟುಂಬದವರೇ ಅವರಿಗೆ ಬುದ್ಧಿ ಹೇಳಬಹುದಿತ್ತು.

ಕುಟುಂಬದವರು ಹೋಗಲಿ, ಜವಾಬ್ದಾರಿಯುತ ಸ್ಥಾನದಲ್ಲಿರುವ ನಮಗಾದರೂ ಒಂದು ಪತ್ರ ಬರೆದು 'ಯಾರೋ ಮೊಬೈಲ್ ತಲುಪಿಸಿದ್ದಾರೆ, ತನಿಖೆ ಮಾಡಿ' ಎಂದು ತಿಳಿಸಬಹುದಿತ್ತು. ಹಾಗೆ ಮಾಡಿದ್ದರೆ ಅದನ್ನು ಜವಾಬ್ದಾರಿಯುತ ನಾಯಕರ ಲಕ್ಷಣ ಎನ್ನಬಹುದಿತ್ತು ಎಂದು ಹೆಚ್.ಡಿ. ಕುಮಾರಸ್ವಾಮಿ ಹೆಸರು ಉಲ್ಲೇಖಿಸದೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಕುಟುಂಬದವರ ಜೊತೆ ತಾನೇ ಆತ ಮಾತನಾಡಿದ್ದು. ಹಾಸನದಲ್ಲಿ ಏನಾಗಿತ್ತು ಅದರ ಬಗ್ಗೆ ಒಂದು ಬಾರಿಯಾದ್ರು ಮಾತನಾಡಿದ್ದಾರಾ? ಮೊದಲು ಆ ಕುಟುಂಬಗಳ ಕ್ಷಮೆ ಕೇಳಬೇಕು. ಆ ನೊಂದ ಹೆಣ್ಮಕ್ಕಳ ಕ್ಷಮೆ ಕೇಳಲಿ ಎಂದು ಹೇಳಿದರು. ಇನ್ನು, ಇದೇ ವೇಳೆ ವಿಜಯ ದಶಮಿಯಿಂದ ಯುದ್ಧ ಸ್ಟಾರ್ಟ್​ ಎಂದ ಹೆಚ್​.ಡಿ. ಕುಮಾರಸ್ವಾಮಿ ಹೇಳಿಕೆ ಬಗ್ಗೆ ಮಾತನಾಡಿದ ಪ್ರಿಯಾಂಕ್​ ಖರ್ಗೆ, ಅಲ್ಲೋಲ ಕಲ್ಲೋಲ ಆಗೋದು ಮುಂದಕ್ಕೆ ಹೋಯ್ತಾ ಎಂದು ವ್ಯಂಗ್ಯವಾಡಿದರು.

ಅಮೆರಿಕಾದಿಂದ ವಾಪಸ್ ಆಗುತ್ತಲೇ ಕೇಂದ್ರ ಸಚಿವ ಹೆಚ್​.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ನಮ್ಮ ಕುಟುಂಬಕ್ಕೆ ಕೈ ಹಾಕಿದ್ದೀರಿ ಬಿಡೋದಿಲ್ಲ ಎಂದು ಹೆಚ್​.ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com