ಜನಾದೇಶದ ಮೂಲಕ ಚುನಾವಣೆ ಗೆಲ್ಲಬೇಕೇ ಹೊರತು ಕಳ್ಳತನದಿಂದಲ್ಲ: ರಾಜ್ಯದಲ್ಲಿ 1.7 ಕೋಟಿ ಮತದಾರರ ಹೆಸರು ಡಿಲೀಟ್; ಕೆ ಸಿ ವೇಣುಗೋಪಾಲ್‌

ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶ್ವದ "ಅತ್ಯಂತ ಪ್ರಜಾಸತ್ತಾತ್ಮಕ ವ್ಯಕ್ತಿ" ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಬಣ್ಣಿಸಿರುವುದನ್ನು "ದೇಶದ ಅತಿದೊಡ್ಡ ತಮಾಷೆ" ಎಂದು ಕರೆದ ವೇಣುಗೋಪಾಲ್, ಇಂತಹ ಹೇಳಿಕೆಗಳನ್ನು ಜನರು ಒಪ್ಪುವುದಿಲ್ಲ ಎಂದು ಹೇಳಿದ
K.C venugopal
ಕೆ ಸಿ ವೇಣುಗೋಪಾಲ್‌
Updated on

ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯು ಸೂಕ್ತ ಪಾರದರ್ಶಕತೆಯಿಲ್ಲದೆ ನಡೆಯುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಬುಧವಾರ ಆರೋಪಿಸಿದ್ದಾರೆ.

ನೂತನವಾಗಿ ನೇಮಕಗೊಂಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವೇಣುಗೋಪಾಲ್, ರಾಜ್ಯದ ಒಟ್ಟು 5.54 ಕೋಟಿ ಮತದಾರರ ಪೈಕಿ 1,07,96,415 ಹೆಸರುಗಳನ್ನು ತೆಗೆದುಹಾಕಲಾಗಿದೆ.

ಸುಮಾರು 43 ಲಕ್ಷ ಮತದಾರರಿಗೆ ನೋಟಿಸ್‌ಗಳನ್ನು ನೀಡಲಾಗಿದ್ದು, ಅವರ ಹೆಸರುಗಳೂ ಪಟ್ಟಿಯಿಂದ ಅಳಿಸಲ್ಪಡುವ ಸಾಧ್ಯತೆಯಿದೆ ಎಂದು ತಿಳಿಸಿದರು. ವಿರೋಧ ಪಕ್ಷಗಳು ಎತ್ತಿದ ಪ್ರಶ್ನೆಗಳು ಮತ್ತು ದೂರುಗಳಿಗೆ ಚುನಾವಣಾ ಆಯೋಗವು ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಅವರು ಆರೋಪಿಸಿದರು.

ಚುನಾವಣೆಗಳನ್ನು ಜನರ ಜನಾದೇಶದ ಮೂಲಕ ಗೆಲ್ಲಬೇಕೇ ಹೊರತು ಮತಗಳ ಕಳ್ಳತನದ ಮೂಲಕವಲ್ಲ ಎಂದು ಹೇಳಿದ ಅವರು, ಜಿಲ್ಲಾ ಮಟ್ಟದಲ್ಲಿ ನಡೆಯುವ ಈ ಪರಿಷ್ಕರಣಾ ಪ್ರಕ್ರಿಯೆಯನ್ನು ಕಾಂಗ್ರೆಸ್ ಸೂಕ್ಷ್ಮವಾಗಿ ಗಮನಿಸಲಿದೆ ಎಂದು ತಿಳಿಸಿದರು. ನೂತನ ಜಿಲ್ಲಾ ಅಧ್ಯಕ್ಷರ ಕಾರ್ಯಕ್ಷಮತೆಯನ್ನು ಆರು ತಿಂಗಳ ನಂತರ ಪರಿಶೀಲಿಸಲಾಗುವುದು ಮತ್ತು ನಿರೀಕ್ಷಿತ ಫಲಿತಾಂಶ ನೀಡಲು ವಿಫಲರಾದವರನ್ನು ಬದಲಾಯಿಸಲಾಗುವುದು ಎಂದು ವೇಣುಗೋಪಾಲ್ ಹೇಳಿದರು.

K.C venugopal
SIR ಪ್ರಕ್ರಿಯೆಯ ‘ಸಾಮಾಜಿಕ ಲೆಕ್ಕಪರಿಶೋಧನೆ’ಗೆ ಪ್ರಕಾಶ್ ರಾಜ್ ಅಭಿಯಾನ: ಸೆಪ್ಟೆಂಬರ್ 20ರಿಂದ 10 ಜಿಲ್ಲೆಗಳಲ್ಲಿ ಕಾರ್ಯಾಚರಣೆ; Video

ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶ್ವದ "ಅತ್ಯಂತ ಪ್ರಜಾಸತ್ತಾತ್ಮಕ ವ್ಯಕ್ತಿ" ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಬಣ್ಣಿಸಿರುವುದನ್ನು "ದೇಶದ ಅತಿದೊಡ್ಡ ತಮಾಷೆ" ಎಂದು ಕರೆದ ವೇಣುಗೋಪಾಲ್, ಇಂತಹ ಹೇಳಿಕೆಗಳನ್ನು ಜನರು ಒಪ್ಪುವುದಿಲ್ಲ ಎಂದು ಹೇಳಿದ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com