ಬಿಜೆಪಿಯವರು ರಣಹದ್ದುಗಳಂತೆ, ರಾಜಕೀಯ ಲಾಭಕ್ಕಾಗಿ ಕೋಮು ಗಲಭೆ ಮಾಡಲು ಕಾಯುತ್ತಿರುತ್ತಾರೆ: ಯತೀಂದ್ರ ಸಿದ್ದರಾಮಯ್ಯ; Video

ಬಿಜೆಪಿ ಸದಸ್ಯರು ರಣಹದ್ದುಗಳಂತೆ. ರಾಜಕೀಯ ಲಾಭಕ್ಕಾಗಿ ಕೋಮು ಉದ್ವಿಗ್ನತೆಯನ್ನು ಬಳಸಿಕೊಳ್ಳಲು ಅವಕಾಶ ಸಿಗುವುದನ್ನೇ ಅವರು ಕಾಯುತ್ತಿರುತ್ತಾರೆ ಎಂದು ಟೀಕಿಸಿದರು.
ಬಿಜೆಪಿಯವರು ರಣಹದ್ದುಗಳಂತೆ, ರಾಜಕೀಯ ಲಾಭಕ್ಕಾಗಿ ಕೋಮು ಗಲಭೆ ಮಾಡಲು ಕಾಯುತ್ತಿರುತ್ತಾರೆ: ಯತೀಂದ್ರ ಸಿದ್ದರಾಮಯ್ಯ; Video
Updated on

ಬೆಂಗಳೂರು: ಸಚಿವ ಯತೀಂದ್ರ ಸಿದ್ದರಾಮಯ್ಯ ಮತ್ತೆ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಜಕೀಯ ಲಾಭಕ್ಕಾಗಿ ಕೋಮು ಉದ್ವಿಗ್ನತೆಯನ್ನು ಬಳಸಿಕೊಳ್ಳಲು ಅವಕಾಶಕ್ಕಾಗಿ ಕಾಯುತ್ತಿರುವ ರಣಹದ್ದುಗಳಂತೆ ಬಿಜೆಪಿ ಸದಸ್ಯರು ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಗಣೇಶ ಪೂಜಾ ಸಮಿತಿಯ ಸದಸ್ಯರಿಗೆ ನಿಯಮಗಳನ್ನು ಪಾಲಿಸುವಂತೆ, ಇಲ್ಲದಿದ್ದರೆ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಎಚ್ಚರಿಕೆ ನೀಡಿದ್ದರು ಎನ್ನಲಾದ ಘಟನೆಗೆ ಸಂಬಂಧಿಸಿ ಕಳೆದ ವಾರ ಟಿ. ನರಸೀಪುರದಲ್ಲಿ ಬಿಜೆಪಿ ನಾಯಕರು ನಡೆಸಿದ ಪ್ರತಿಭಟನೆ ಕುರಿತು ಅವರು ಮಾತನಾಡಿದರು.

ಬಿಜೆಪಿ ಸದಸ್ಯರು ರಣಹದ್ದುಗಳಂತೆ. ರಾಜಕೀಯ ಲಾಭಕ್ಕಾಗಿ ಕೋಮು ಉದ್ವಿಗ್ನತೆಯನ್ನು ಬಳಸಿಕೊಳ್ಳಲು ಅವಕಾಶ ಸಿಗುವುದನ್ನೇ ಅವರು ಕಾಯುತ್ತಿರುತ್ತಾರೆ ಎಂದು ಟೀಕಿಸಿದರು.

ಬಿಜೆಪಿಯವರು ರಣಹದ್ದುಗಳಂತೆ, ರಾಜಕೀಯ ಲಾಭಕ್ಕಾಗಿ ಕೋಮು ಗಲಭೆ ಮಾಡಲು ಕಾಯುತ್ತಿರುತ್ತಾರೆ: ಯತೀಂದ್ರ ಸಿದ್ದರಾಮಯ್ಯ; Video
ಸಿದ್ದರಾಮಯ್ಯ ಮನೆ ಗೃಹಪ್ರವೇಶ: ಪತ್ನಿಯಿಂದ ಗೋ ಪೂಜೆ, ಲಕ್ಷ್ಮಿ ಫೋಟೊ ಹಿಡಿದು ನಿಂತ ಯತೀಂದ್ರ; ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆ

ಟಿ.ನರಸೀಪುರ ಗಣೇಶ ಮೆರವಣಿಗೆಯ ಕುರಿತು ಇನ್ಸ್​ಪೆಕ್ಟರ್​​ ವೈರಲ್ ವಿಡಿಯೋ ಸರಿಯಿದೆ. ಮಸೀದಿ ಮುಂದೆ, ಚರ್ಚ್​ಗಳ ಮುಂದೆ ದೇವಸ್ಥಾನಗಳ ಮುಂದೆ ಪಟಾಕಿ ಹೊಡೆಯುವುದು ತಪ್ಪು. ಯಾರಾದರು ದೇವಸ್ಥಾನಗಳ ಮುಂದೆ ಬೇರೆಯವರು ಬಂದು ಪಟಾಕಿ ಹೊಡೆದರೆ ಸರಿನಾ?, ಸುಮ್ಮನೆ ಪಟಾಕಿ ಹೊಡೆಯುವುದು ಸರಿಯಲ್ಲ.

ಕಳೆದ ಬಾರಿ ಅನುಮತಿ ಪಡೆಯದೇ ಆ ರಸ್ತೆಯಲ್ಲಿ ಹೋಗಿದ್ದಾರೆ. ಆಗ ಪೊಲೀಸ್ ಇರಲಿಲ್ಲ. ಈಗ ಹೆಚ್ಚು ಕಡಿಮೆ ಆದರೆ ಯಾರು ಹೊಣೆ. ಆದ್ದರಿಂದ ಅನುಮತಿ ಕೊಟ್ಟಿದ್ದಾರೆ, ಅನುಮತಿ ಪಡೆದು ಯಾವ ರಸ್ತೆಯಲ್ಲಿ ಬೇಕಾದರೂ ಮೆರವಣಿಗೆ ಹೋಗಬಹುದು. ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ ಅಷ್ಟೇ ಎಂದರು.

ಗಣೇಶ ಉತ್ಸವ ಆರಂಭಿಸಿದ್ದೇ ಬಾಲಗಂಗಾಧರನಾಥ ತಿಲಕರು, ತಿಲಕರು ಯಾವ ಪಕ್ಷದವರು ಎಂದು ಕೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com