ಸಿದ್ದರಾಮಯ್ಯರನ್ನು ವಿಲನ್‌ ಮಾಡಲು ಡಿಕೆಶಿಯಿಂದ ಆರ್ಥಿಕ ಇಲಾಖೆ ಪತ್ರ ಲೀಕ್: ಅಶೋಕ್

ಸರ್ಕಾರಕ್ಕೆ ಹಾಗೂ ಉನ್ನತ ಮಟ್ಟದ ನಾಯಕರಿಗೆ ಗೊತ್ತಿಲ್ಲದೆ ಇಲಾಖೆಯ ಕಾರ್ಯದರ್ಶಿ ಇಂತಹ ಪತ್ರವನ್ನು ಬಿಡುಗಡೆ ಮಾಡಲು ಸಾಧ್ಯವೇ? ಎಂದು ಅಶೋಕ್ ಪ್ರಶ್ನಿಸಿದರು.
R. Ashok
ಆರ್.ಅಶೋಕ್
Updated on: 

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಹಣಕಾಸು ಇಲಾಖೆಯ ಪತ್ರ ಸೋರಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಉದ್ದೇಶಪೂರ್ವಕವಾಗಿ ಆ ಪತ್ರವನ್ನು ಲೀಕ್ ಮಾಡಿಸಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಣಕಾಸು ಇಲಾಖೆಯ ಆ ಪತ್ರ ಹೊರಬರುತ್ತಿದ್ದಂತೆಯೇ ಈ ಸರ್ಕಾರದ ಮಾನ-ಮರ್ಯಾದೆ ಸಂಪೂರ್ಣವಾಗಿ ಕಳೆದುಹೋಗಿದೆ. ಸಿಎಂ ಅವರು ಇದೊಂದು ಸಾಮಾನ್ಯ ಸಲಹಾ ಪತ್ರವೆಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಆದರೆ, ಸರ್ಕಾರಕ್ಕೆ ಹಾಗೂ ಉನ್ನತ ಮಟ್ಟದ ನಾಯಕರಿಗೆ ಗೊತ್ತಿಲ್ಲದೆ ಇಲಾಖೆಯ ಕಾರ್ಯದರ್ಶಿ ಇಂತಹ ಪತ್ರವನ್ನು ಬಿಡುಗಡೆ ಮಾಡಲು ಸಾಧ್ಯವೇ? ಎಂದು ಅಶೋಕ್ ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗ ಇಂತಹ ಪತ್ರಗಳು ಏಕೆ ಹೊರಬರಲಿಲ್ಲ ಅಥವಾ ಲೀಕ್ ಆಗಲಿಲ್ಲ? ಈ ಪತ್ರವನ್ನು ಉದ್ದೇಶಪೂರ್ವಕವಾಗಿ ಲೀಕ್ ಮಾಡಿಸಿರುವುದೇ ಸಿಎಂ ಡಿ.ಕೆ. ಶಿವಕುಮಾರ್. ಸಿದ್ದರಾಮಯ್ಯ ಅವರು ಖಜಾನೆ ಖಾಲಿ ಮಾಡಿ ನಮಗೆ ‘ಚೊಂಬು’ ನೀಡಿ ಹೋಗಿದ್ದಾರೆ, ಹಿಂದಿನ ಆಡಳಿತದಲ್ಲಿ ಎಲ್ಲವನ್ನೂ ಲೂಟಿ ಮಾಡಲಾಗಿದೆ ಎಂದು ಜಗತ್ತಿಗೆ ತೋರಿಸುವುದು ಡಿಕೆಶಿಯವರ ಹುನ್ನಾರ ಎಂದು ಆರೋಪಿಸಿದರು.

R. Ashok
ಡಿ.ಕೆ ಶಿವಕುಮಾರ್ ಸರ್ಕಾರಕ್ಕೆ ಅನ್ನದಾತನಿಗಿಂತ ಅದಾನಿ ಹೆಚ್ಚು ಮುಖ್ಯವಾಗಿದೆ: ವಿ ಸುನಿಲ್ ಕುಮಾರ್ ಟೀಕೆ

ಇಂತಹ ಗೌಪ್ಯ ಪತ್ರವು ಸುಲಭವಾಗಿ ಸೋರಿಕೆಯಾಗುವುದಿಲ್ಲ. ಇದನ್ನು ಮುಖ್ಯಮಂತ್ರಿ ಅಥವಾ ಮುಖ್ಯ ಕಾರ್ಯದರ್ಶಿ ಮಾತ್ರ ಸೋರಿಕೆ ಮಾಡಲು ಸಾಧ್ಯ. ಇದು ಸಿದ್ದರಾಮಯ್ಯನವರಿಗೆ ಮುಜುಗರದ ಸಂಗತಿಯಾಗಿದೆ.

ತಾವು ಹೊಸದಾಗಿ ಬಂದು ಅನೇಕ ಯೋಜನೆಗಳನ್ನು ಘೋಷಿಸಲು ಸಿದ್ಧರಿದ್ದರೂ, ಖಜಾನೆಯಲ್ಲಿ ಹಣವೇ ಇಲ್ಲ ಎಂಬ ನೆಪ ಹೇಳಿ ತಮ್ಮನ್ನು ತಾವು ಸೇಫ್ ಮಾಡಿಕೊಳ್ಳಲು ಡಿಕೆಶಿ ಈ ತಂತ್ರ ರೂಪಿಸಿದ್ದಾರೆ. ಸಿದ್ದರಾಮಯ್ಯ ಅವರೇ ಎಲ್ಲವನ್ನೂ ಖಾಲಿ ಮಾಡಿದ ‘ವಿಲನ್’ ಎಂದು ಬಿಂಬಿಸಲು ಹಣಕಾಸು ಕಾರ್ಯದರ್ಶಿಯ ಮೂಲಕ ಅಥವಾ ನೇರವಾಗಿ ಸಿಎಂ ಕಚೇರಿಯಿಂದಲೇ ಈ ಪತ್ರವನ್ನು ಸೋರಿಕೆ ಮಾಡಲಾಗಿದೆ. ಇದು ಸಿದ್ದರಾಮಯ್ಯ ಅವರಿಗೆ ನೇರವಾಗಿ ಅಂಟಿದ ಕಪ್ಪುಚುಕ್ಕೆ ಹಾಗೂ ತೀವ್ರ ಮುಜುಗರ ತಂದಿಟ್ಟ ಸಂಗತಿ ಎಂದು ಆರ್. ಅಶೋಕ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com