

ನವದೆಹಲಿ: ಲೋಕಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ಹೇಳಿದ್ದ ಪ್ರತಿಯೊಬ್ಬ ಭಾರತೀಯರಿಗೂ ಸೂರು ಎಂಬ ಅಭಿಯಾನಕ್ಕೆ ಅರುಣ್ ಜೇಟ್ಲಿ ಬಜೆಟ್ನಲ್ಲಿ ಚಾಲನೆ ದೊರೆತಿದೆ.
2022ರೊಳಗೆ ದೇಶದ ಯಾವುದೇ ನಾಗರಿಕ ವಸತಿ ರಹಿತನಾಗಿರಬಾರದು ಎನ್ನುವುದು ಕೇಂದ್ರ ಸರ್ಕಾರದ ಲೆಕ್ಕಾಚಾರವಾಗಿದೆ. ಇದಕ್ಕಾಗಿ ಕಡಿಮೆ ಖರ್ಚಿನ ಮನೆ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಗೃಹ ನಿರ್ಮಾಣ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹರಿವಿಗೂ ಅವಕಾಶ ನೀಡಲು ನಿರ್ಧರಿಸಲಾಗಿದೆ. ಮೋದಿ ಕನಸಿನ ಭಾರತದ ದೊಡ್ಡ ಕಲ್ಪನೆ ಇದಾಗಿತ್ತು.
- ಬಡವರ ವಸತಿ ಯೋಜನೆಗಳ ಸಾಲಕ್ಕಾಗಿ ಎನ್ಎಚ್ಬಿಗೆ ಈ ಸಾಲಿನವಲ್ಲಿ 4 ಸಾವಿರ ಕೋಟಿ ರುಪಾಯಿ ಅನುದಾನ.
- ಗ್ರಾಮೀಣ ವಸತಿ ಯೋಜನೆಗಳಿಗೆ 8 ಸಾವಿರ ಕೋಟಿ ರುಪಾಯಿ ಅನುದಾನ.
- ಗೃಹ ನಿರ್ಮಾಣ ಹಾಗೂ ಸಾಲ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ.
- ಕಾರ್ಪೊರೇಟ್ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ ಯೋಜನೆ ಮೂಲಕ ಕೊಳಗೇರಿ ಪ್ರದೇಶಗಳಿಗೆ ಮೂಲಸೌಕರ್ಯ.
- ಬ್ಯಾಂಕ್ಗಳ ಮೇಲಿನ ರೀಯಲ್ ಎಸ್ಟೇಟ್ ಒತ್ತಡ ತಪ್ಪಿಸಲು ರೀಯಲ್ ಎಸ್ಟೇಟ್ ಇನ್ವೆಸ್ಟ್ಮೆಂಟ್ ಟ್ರಸ್ಟ್ ಹಾಗೂ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಟ್ರಸ್ಟ್ ಎಂಬ ಸಂಸ್ಥೆಗಳಿಗೆ ಬೆಂಬಲ ನೀಡಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಗೃಹ ನಿರ್ಮಾಣ. ಈ ಮೂಲಕ ನಗರದಲ್ಲಿ ಮಧ್ಯಮ ವರ್ಗಗಳಿಗೆ ಮನೆ ಹಂಚಿಕೆ. ಈ ಯೋಜನೆಗೆ ಎನ್ಆರ್ಐಗಳ ನೆರವು ಕೋರಲು ಚಿಂತನೆ.