

ಮುಂಬಯಿ: ಅಮೇರಿಕನ್ ಡಾಲರ್ ಎದುರು ಭಾರತೀಯ ರುಪಾಯಿ ಮೌಲ್ಯ 6 ಪೈಸೆಯಷ್ಟು ಕುಸಿತವನ್ನು ಕಂಡಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ಗೆ ಬೇಡಿಕೆ ಹೆಚ್ಚಾದ ಹಿನ್ನಲೆಯಲ್ಲಿ ರುಪಾಯಿ ಮೌಲ್ಯದಲ್ಲಿ ಅಲ್ಪ ಪ್ರಮಾಣದಲ್ಲಿ ಕುಸಿತ ದಾಖಲಾಗಿದೆ.
ದಿನದ ವಹಿವಾಟು ಆರಂಭದಿಂದಲೇ ಬಂಡವಾಳದಾರರು ಡಾಲರ್ಗೆ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಇಟ್ಟ ಹಿನ್ನಲೆಯಲ್ಲಿ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತ ಕಂಡಿದೆ. ಆದರೆ ದೇಶೀ ಮಾರುಕಟ್ಟೆಯಲ್ಲಿ ಚೆತೋಹಾರಿ ವ್ಯವಹಾರ ಕಂಡುಬಂದಿದ್ದರಿಂದ ಇತರೆ ವಿದೇಶಿ ಕರೆನ್ಸಿಗಳ ವಿರುದ್ಧ ರುಪಾಯಿ ಮೌಲ್ಯ ಚೆತರಿಸಿಕೊಂಡಿದೆ. ಈ ಬೆಳವಣಿಗೆಯಿಂದ ರುಪಾಯಿ ಮೌಲ್ಯದ ಹೆಚ್ಚಿನ ಕುಸಿತ ತಪ್ಪಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ನಿನ್ನೆ ನಡೆದ ವಹಿವಾಟಿನಲ್ಲಿ 60.12 ರಷ್ಟಿದ್ದ ರುಪಾಯಿ ಮೌಲ್ಯ, ಇಂದು 60.18ಕ್ಕೆ ನಿಂತಿದೆ. ಬಿಎಸ್ಇ ಸೆನ್ಸೆಕ್ಸ್ 60. 75ಪಾಯಿಂಟ್ಗಳಷ್ಟು ಏರಿಕೆಯಾಗಿದೆ.