ಚರ್ಚೆ ನಡೆಸುವುದರಿಂದ ಪರಿಣಾಮಕಾರಿ ನಿರ್ಧಾರಗಳು ಸಾಧ್ಯ: ಅಧ್ಯಯನ ವರದಿ

ವ್ಯಕ್ತಿಯೊಬ್ಬ ಯಾವುದೇ ನಿರ್ಧಾರ ಕೈಗೊಳ್ಳುವುದಿದ್ದರೂ ತನ್ನ ಆಲೋಚನೆಗಳಿಂದಲೇ ಎಂಬ ಸಾಂಪ್ರದಾಯಿಕ ನಂಬಿಕೆಗೆ ಸವಾಲು ಹಾಕುವ ರೀತಿಯಲ್ಲಿ ಹೊಸ ಸಂಶೋಧನಾ ವರದಿ ಬಹಿರಂಗವಾಗಿದೆ.
ಚರ್ಚೆ ನಡೆಸುವುದರಿಂದ ಪರಿಣಾಮಕಾರಿ ನಿರ್ಧಾರಗಳು ಸಾಧ್ಯ (ಸಾಂಕೇತಿಕ ಚಿತ್ರ)
ಚರ್ಚೆ ನಡೆಸುವುದರಿಂದ ಪರಿಣಾಮಕಾರಿ ನಿರ್ಧಾರಗಳು ಸಾಧ್ಯ (ಸಾಂಕೇತಿಕ ಚಿತ್ರ)
ಲಂಡನ್: ವ್ಯಕ್ತಿಯೊಬ್ಬ ಯಾವುದೇ ನಿರ್ಧಾರ ಕೈಗೊಳ್ಳುವುದಿದ್ದರೂ ತನ್ನ ಆಲೋಚನೆಗಳಿಂದಲೇ ಎಂಬ ಸಾಂಪ್ರದಾಯಿಕ ನಂಬಿಕೆಗೆ ಸವಾಲು ಹಾಕುವ ರೀತಿಯಲ್ಲಿ ಹೊಸ ಸಂಶೋಧನಾ ವರದಿ ಬಹಿರಂಗವಾಗಿದ್ದು, ವ್ಯಕ್ತಿಯೊಬ್ಬರ ಸುತ್ತಲಿನ ಪ್ರಪಂಚ ಆತ ನಿರ್ಧಾರ ಕೈಗೊಳ್ಳುವುದರ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಎಂದಿದೆ. 
ಆಲೋಚನೆಗಳಿಂದ ಮಾತ್ರವಷ್ಟೇ ಅಲ್ಲದೇ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಆ ವ್ಯಕ್ತಿ ಅನ್ಯರೊಂದಿಗೆ ನಡೆಸುವ ಚರ್ಚೆಗಳೂ ಮಹತ್ವದ ಪಾತ್ರ ವಹಿಸುತ್ತವೆ ಎಂದು ಬ್ರಿಟನ್ ನಲ್ಲಿರುವ ಕಿಂಗ್ ಸ್ಟನ್ ವಿವಿಯ ಪ್ರೊಫೆಸರ್ ಹೇಳಿದ್ದಾರೆ. ಬರವಣಿಗೆ ಅಥವಾ ರಚಿಸಿದರೆ ಆ ಪ್ರಕ್ರಿಯೆಯೇ ನಿಮ್ಮನ್ನು ಭಿನ್ನವಾಗಿ ಯೋಚಿಸುವಂತೆ ಮಾಡುತ್ತದೆ. ಸಾಮಾನ್ಯವಾದ ಮನಶಾಸ್ತ್ರದ ಪ್ರಕಾರ ಮನಸ್ಸನ್ನು ಕಂಪ್ಯೂಟರ್ ರೀತಿಯಲ್ಲಿ ನೋಡಲು ನಿಮ್ಮನ್ನು ತರಬೇತುಗೊಳಿಸಿರಲಾಗುತ್ತದೆ, ಆದರೆ ಜನರು ನಿಜವಾದ ಜಗತ್ತಿನಲ್ಲಿ ಆ ರೀತಿಯಲ್ಲಿ ಯೋಚನೆ ಮಾಡುವುದಿಲ್ಲ ಎಂದು ಬ್ರಿಟನ್ ನ ಪ್ರಾಧ್ಯಾಪಕರು ಅಭಿಪ್ರಾಯಪಟ್ಟಿದ್ದಾರೆ. 
ಯಾವುದೇ ವಿಷಯವನ್ನು ಪರಸ್ಪರ ಸಂಹನಕ್ಕಾಗಿ ನೀಡಿದರೆ ಜನರು ಭಿನ್ನವಾಗಿಯೇ ಯೋಚಿಸುತ್ತಾರೆ ಎಂಬುದು ಬ್ರಿಟನ್ ಪ್ರಾಧ್ಯಾಪಕರ ಅಭಿಪ್ರಾಯವಾಗಿದೆ. ಗಣಿತವನ್ನು ಬಳಸಿ ನಡೆಸಲಾಗಿರುವ ಸಮೀಕ್ಷೆಯಲ್ಲಿ ಭಾಗವಹಿಸಿದ್ದವರಿಗೆ ಒಂದು ಪದವನ್ನು ನಿರಂತರವಾಗಿ ಮಾತನಾಡುತ್ತಾ ಉದ್ದದ ಲೆಕ್ಕ ಮಾಡುವಂತೆ ಸೂಚಿಸಲಾಗಿತ್ತು. ಮತ್ತಷ್ಟು ಜನರಿಗೆ ಇದೇ ಮಾದರಿಯಲ್ಲಿ ರೆಸ್ಟೋರೆಂಟ್ ಬಿಲ್ ವಿಭಜಿಸುವ ಕೆಲಸಕ್ಕೆ ನಿಯೋಜಿಸಲಾಗಿತ್ತು. 
ನಿರಂತರ ಸಂವಹನ ನಡೆಸುತ್ತಿದ್ದವರ ಪೈಕಿ ರೆಸ್ಟೋರೆಂಟ್ ಬಿಲ್ ವಿಭಜಿಸುವ ಕಾರ್ಯದಲ್ಲಿ ನಿರತರಾಗಿದ್ದವರು ಲೆಕ್ಕದಲ್ಲಿ ನಿರತರಾದವರಿಗಿಂತ ಸುಲಭವಾಗಿ, ಕ್ರಿಯಾತ್ಮಕವಾಗಿ ಕೆಲಸವನ್ನು ಮುಗಿಸಿದ್ದರು. ಈ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ನಿರ್ಧಾರ ಕೈಗೊಳ್ಳುವ ವೇಳೆ ಚರ್ಚೆ ನಡೆಸುವುದರಿಂದ ನಿರ್ಧಾರ ಪರಿಣಾಮಕಾರಿಯಾಗಿರುತ್ತದೆ ಎಂಬುದನ್ನು ಕಂಡುಕೊಂಡಿದ್ದಾರಂತೆ ಬ್ರಿಟನ್ ಪ್ರಾಧ್ಯಾಪಕರು. 
ಚರ್ಚೆ ನಡೆಸಿ ತೆಗೆದುಕೊಳ್ಳಲಾಗುವಂತಹ ನಿರ್ಧಾರಗಳು ಉದ್ಯಮ, ಕಾರ್ಯಕ್ಷೇತ್ರಗಳಲ್ಲಿ ಪರಿಣಾಮಕಾರಿಯಾಗಿರಲಿವೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದು, ಅರಿವಿಗೆ ಸಂಬಂಧಿಸಿದ ಸಂಶೋಧನೆಯ ಪ್ರಿನ್ಸಿಪಲ್ಸ್ ಅಂಡ್ ಇಂಪ್ಲಿಕೇಶನ್ಸ್ ಜರ್ನಲ್ ನಲ್ಲಿ ಪ್ರಕಟವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com