ಸೆಕ್ಸ್, ಆಲ್ಕೋಹಾಲ್ ಗಿಂತ ಜನರಿಗೆ ವೈ-ಫೈ ಗಾಗಿ ಹೆಚ್ಚು ತುಡಿತ: ಅಧ್ಯಯನ

ಪ್ರತಿ 10 ರಲ್ಲಿ ನಾಲ್ಕು ಮಂದಿಗೆ ದೈನಂದಿನ ಅವಶ್ಯಕತೆಗಳ ಜೊತೆಗೆ ವೈ-ಫೈ ಕೂಡ ಒಂದು ಅತ್ಯಗತ್ಯ ಅವಶ್ಯಕತೆಗಳಲ್ಲಿ ಒಂದಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಂಡನ್: ಪ್ರತಿ 10 ರಲ್ಲಿ ನಾಲ್ಕು ಮಂದಿಗೆ ದೈನಂದಿನ ಅವಶ್ಯಕತೆಗಳಲ್ಲಿ ವೈ-ಫೈ ಕೂಡ ಒಂದಾಗಿ ಬಿಟ್ಟಿದೆ.

ಮಾನವರಿಗೆ ಅವಶ್ಯಕತೆಯಿರುವ ಐಷಾರಾಮಿ ಅವಶ್ಯಕತೆಗಳಾದ ಸೆಕ್ಸ್, ಚಾಕೋಲೇಟ್, ಆಲ್ಕೋಹಾಲ್ ಗಿಂತ ಈಗ ವೈ-ಫೈ ಅನ್ನು ಹೆಚ್ಚಾಗಿ ಬಯಸುತ್ತಾರೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ಯುರೋಪ್ ಮತ್ತು ಅಮೆರಿಕಾಗಳಲ್ಲಿ  ಸುಮಾರು 1700 ಮಂದಿ ನೌಕರರಿಗೆ ನಡೆಸಿದ ಅಧ್ಯಯನದಲ್ಲಿ, ದೈನಂದಿನ ಜೀವನದ ಮಾನವನ ಅವಶ್ಯಕತೆಗಳಿಗಿಂತ ವೈಫೈ ಸಂಪರ್ಕ ಉತ್ತಮಗೊಳಿಸಬೇಕು ಎಂಬುದು ಅವರ ಬಯಕೆಯಾಗಿದೆ.


ಶೇ.40.2 ರಷ್ಟು ಮಂದಿಗೆ ವೈ-ಫೈ, ಶೇ.36.6 ರಷ್ಟು ಮಂದಿಗೆ ಸೆಕ್ಸ್, ಶೇ, 14.3 ರಶ್ಟು ಮಂದಿಗೆ ಚಾಕೋಲೇಟ್ ಹಾಗೂ ಆಲ್ಕೋಹಾಲ್ ಬೇಕೆಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಒಟ್ಟಿನಲ್ಲಿ ಇತರ ಎಲ್ಲಾ ಅಗತ್ಯಗಳಿಗಿಂತ ವೈ-ಫೈ ಸಂಪರ್ಕಕ್ಕೆ ಜನ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ.

ನಮ್ಮ ದೈನಂದಿನ ಅವಶ್ಯಕತೆಗಳಲ್ಲಿ ವೈ-ಫೈ ಕೂಡ ಪ್ರಮುಖ ಸ್ಥಾನ ಪಡೆದುಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com