ಒಂದು ಲೋಟ ಬಿಯರ್ ನಿಮ್ಮನ್ನು ಸಂಘಜೀವಿಯಾಗಿಸಬಲ್ಲದು: ಅಧ್ಯಯನ

ಸಾಮಾಜಿಕ ಕೂಟಗಳಲ್ಲಿ ಭಾಗವಹಿಸುವುದಕ್ಕೆ ನಿಮಗೆ ಸಂಕೋಚವೇ? ಇದಕ್ಕೆ ಪರಿಹಾರವಿದೆಯಂತೆ, ಜನಗಳ ಜೊತೆ ಲೀಲಾಜಾಲವಾಗಿ ಬೆರೆತು ಮಾತನಾಡಿಕೊಂಡು ಸಂಘಜೀವಿಯಂತಿರಲು ಒಂದು ಲೋಟ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಲಂಡನ್: ಸಾಮಾಜಿಕ ಕೂಟಗಳಲ್ಲಿ ಭಾಗವಹಿಸುವುದಕ್ಕೆ ನಿಮಗೆ ಸಂಕೋಚವೇ? ಇದಕ್ಕೆ ಪರಿಹಾರವಿದೆಯಂತೆ, ಜನಗಳ ಜೊತೆ ಲೀಲಾಜಾಲವಾಗಿ ಬೆರೆತು ಮಾತನಾಡಿಕೊಂಡು ಸಂಘಜೀವಿಯಂತಿರಲು ಒಂದು ಲೋಟ ಬಿಯರ್ ಸಾಕು ಎನ್ನುತ್ತದೆ ಅಧ್ಯಯನವೊಂದು.
ಸ್ವಿಟ್ಸರ್ ಲ್ಯಾಂಡ್ ನ ಬ್ಯಾಸೆಲ್ ನ ಯೂನಿವರ್ಸಿಟಿ ಆಸ್ಪತ್ರೆಯ ಸಂಶೋಧಕರು ನಡೆಸಿರುವ ಈ ಅಧ್ಯಯನದಲ್ಲಿ, ಆಲ್ಕೋಹಾಲ್ ಇರುವ ಬಿಯರ್ ಕುಡಿದವರಿಗೆ ಬೇರೆಯವರ ಜೊತೆಗೆ ಕಾಲ ಕಳೆಯಬೇಕು, ಸಂತಸದಿಂದರಬೇಕು ಮತ್ತು ಮುಕ್ತ ವಾತಾವರಣದಲ್ಲಿರಬೇಕು ಎಂಬ ಹಂಬಲ ಹೆಚ್ಚುತ್ತದೆಯಂತೆ. 
ಈ ಅಧ್ಯನದಲ್ಲಿ ಆಲ್ಕೋಹಾಲ್ ಸಹಿತ ಬಿಯರ್ ಕುಡಿದವರಿಗೆ ಸಂತಸದ ಮುಖಗಳನ್ನು ಬೇಗನೆ ಪತ್ತೆಹಚ್ಚಲು ಸಾಧ್ಯವಾಗಿದೆ. ಹಾಗೆಯೇ ಭಾಗವಹಿದವರಲ್ಲಿ ಆಲ್ಕೋಹಾಲ್ ಸಹಿತ ಬಿಯರ್ ಮತೊಬ್ಬರ ಭಾವನೆಗಳಿಗೆ ಅನುಭೂತಿ ತೋರಿಸುವ ಶಕ್ತಿ ಕೂಡ ನೀಡುತ್ತದಂತೆ.
"ಬಹಳಷ್ಟು ಜನ ಬಿಯರ್ ಕುಡಿದರೂ, ವೈಯಕ್ತಿಕ ಅನುಭವಕ್ಕಾಗಿ ಅದರ ಪರಿಣಾಮಗಳ, ಸಾಮಾಜಿಕ ಗುಂಪುಗಳಲ್ಲಿ ಭಾವನೆಗಳನ್ನು ತೋರ್ಪಡಿಸಲು ಸಹಕರಿಸುವ ಬಗ್ಗೆ ಇರುವ ವೈಜ್ಞಾನಿಕ ಮಾಹಿತಿ ಅತ್ಯಲ್ಪ" ಎಂದು ಯೂನಿವರ್ಸಿಟಿ ಆಸ್ಪತ್ರೆಯ ಪ್ರೊಫೆಸರ್ ಮತ್ತು ಈ ಅಧ್ಯಯನದ ಸಂಶೋಧಕರಾದ ಮತ್ತಿಯಾಸ್ ಲೀಚ್ತಿ ಹೇಳಿದ್ದಾರೆ. 
ಆದರೆ ಇದು ಲೈಂಗಿಕ ಉದ್ರೇಕತೆಗೆ ಯಾವುದೇ ಸಹಕಾರ ನೀಡುವುದಿಲ್ಲ ಎಂದು ಕೂಡ ಅಧ್ಯಯನ ತಿಳಿಸಿದೆ. ಆ ಅಧ್ಯಯನಕ್ಕಾಗಿ 60 ಜನ ಆರೋಗ್ಯಕರ ವ್ಯಕ್ತಿಗಳನ್ನು ಸಮೀಕ್ಷೆಗೆ ಒಳಪಡಿಸಿದೆ. ಇವರಲ್ಲಿ ಮಹಿಳೆಯರು ಮತ್ತು ಪುರುಷರು ಸಮಸಂಖ್ಯೆಯಲ್ಲಿ ಭಾಗಿಯಾಗಿದ್ದಾರೆ. 
ಈ ಅಧ್ಯಯನವನ್ನು ಸೈಕೋಫಾರ್ಮಕಾಲಜಿ ಜರ್ನಲ್ ನಲ್ಲಿ ಪ್ರಕಟಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com