ಕುದುರೆಗಳು ಮನುಷ್ಯರ ಜೊತೆ ಸಂವಹನ ನಡೆಸಬಹುದು: ಅಧ್ಯಯನ

ಕುದುರೆಗಳು ಮನುಷ್ಯರ ಜೊತೆ ಸಂವಹನ ನಡೆಸಲು ಕಲಿಯುತ್ತವೆ ಮತ್ತು ಅವುಗಳ ಭಾವನೆಗಳನ್ನು ಹಂಚಿಕೊಳ್ಳುತ್ತವೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಲಂಡನ್: ಕುದುರೆಗಳು ಮನುಷ್ಯರ ಜೊತೆ ಸಂವಹನ ನಡೆಸಲು ಕಲಿಯುತ್ತವೆ ಮತ್ತು ಅವುಗಳ ಭಾವನೆಗಳನ್ನು ಹಂಚಿಕೊಳ್ಳುತ್ತವೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ನಾರ್ವೆಯ ಪಶು ಸಂಸ್ಥೆಯಲ್ಲಿ ತರಬೇತಿ ನೀಡಿದ ಕುದುರೆಗಳು ಶರೀರಕ್ಕೆ ರಗ್ಗು ಹೊದೆದುಕೊಳ್ಳಬೇಕೆಂದು ಬಯಸಿದರೆ ತರಬೇತುದಾರರು ಪ್ರಚೋದನೆಗೆಂದು ಕ್ಯಾರೆಟ್ ಚೂರುಗಳನ್ನು ನೀಡಿದರೆ ಅದು ತನ್ನ ಮೂತಿಯ ಸಹಾಯದಿಂದ ಹಲಗೆಯೊಂದನ್ನು ಮುಟ್ಟುತ್ತದೆ. ಹವಾಮಾನಕ್ಕೆ ತಕ್ಕಂತೆ ಕುದುರೆಗಳು ತಮಗೆ ಏನು ಬೇಕೆಂದು ಕೇಳುತ್ತವೆ ಎನ್ನುತ್ತಾರೆ ಅಧ್ಯಯನ ನಡೆಸಿದ ಸಂಸ್ಥೆಯ ಸಂಶೋಧಕರಾದ ಸೆಸಿಲಿ ಮೆಜ್ ಡೆಲ್ಲ್. ಅವರ ತಂಡ ಕುದುರೆಯ ಬಳಿ ಇನ್ನಷ್ಟು ಪ್ರಶ್ನೆಗಳನ್ನು ಕೇಳಲು ಈ ಮಾದರಿಯನ್ನು ಬಳಸಬಹುದೆಂದು ಕಂಡುಹಿಡಿದಿದೆ. ಸಾಮಾನ್ಯ ಕುದುರೆಗೆ ತರಬೇತಿ ನೀಡಬಹುದು ಎನ್ನುತ್ತದೆ ಅಧ್ಯಯನ ತಂಡ.
ನಾರ್ಡಿಕ್ ದೇಶಗಳಲ್ಲಿ ಎಲ್ಲಾ ಋತುಮಾನಗಳಲ್ಲಿ ಕುದುರೆಗಳು ರಗ್ಗು ಹೊದ್ದುಕೊಳ್ಳುವುದು ಸಾಮಾನ್ಯ. 
ಕುದುರೆಗಳನ್ನು ಸಾಮಾನ್ಯವಾಗಿ ಅಷ್ಟು ಬುದ್ದಿವಂತ ಪ್ರಾಣಿಯಲ್ಲ ಎಂದು ಪರಿಗಣಿಸಲಾಗುತ್ತದೆ ಆದರೆ ಈ ಮಾದರಿಯನ್ನು ಸರಿಯಾಗಿ ಬಳಸಿದರೆ ಕುದುರೆಗಳು ಮನುಷ್ಯರ ಜೊತೆ ಸಂವಹನ ನಡೆಸಬಹುದು ಮತ್ತು ತಮ್ಮ ಭಾವನೆಗಳನ್ನು ಹಂಚಿಕೊಳ್ಳಬಹುದು ಮತ್ತು ನಮ್ಮ ಅರಿವಿಗೆ ಬರುವ ವಿಷಯಗಳನ್ನು ಅವು ಆಯ್ಕೆ ಮಾಡಿಕೊಳ್ಳಬಹುದು ಎಂದು ಮೆಜ್ ಡೆಲ್ಲ್ ಹೇಳುತ್ತಾರೆ.
ಕುದುರೆಗೆ ತರಬೇತಿ ನೀಡುವ ತರಬೇತುದಾರರೊಂದಿಗೆ 23 ವಿವಿಧ ತಳಿಯ ಕುದುರೆಗಳಿಗೆ ಕಲಿಸುವುದು ಹೇಗೆ ಎಂಬ ಬಗ್ಗೆ ತಿಳಿದುಕೊಳ್ಳಲು ಸಂಶೋಧಕರು ಅಧ್ಯಯನ ನಡೆಸಿದ್ದಾರೆ.
ಮೊದಲಿಗೆ ತರಬೇತಿ ಪಡೆದ ಕುದುರೆಗೆ ಬೇಲಿಯಲ್ಲಿ ನೇತು ಹಾಕಿದ ಹಲಗೆಯನ್ನು ಮುಟ್ಟುವಂತೆ ಹೇಳಲಾಯಿತು ಎಂದು ಬಿಬಿಸಿ ನ್ಯೂಸ್ ವರದಿ ಮಾಡಿದೆ.
ಹಲಗೆಯಲ್ಲಿರುವ ವಿವಿಧ ಗುರುತುಗಳನ್ನು ಅವುಗಳ ವ್ಯತ್ಯಾಸಗಳನ್ನು ತಿಳಿಸುವಂತೆ ಹೇಳಲಾಯಿತು. ರಗ್ಗು ಹೊದೆದಿರುವಾಗ, ಹೊದೆಯದೇ ಇರುವಾಗ ಮತ್ತು ಹಾಗೆಯೇ ಇರುವಾಗ ಕುದುರೆ ಯಾವ ರೀತಿ ವ್ಯತ್ಯಾಸಕ್ಕೆ ಪ್ರತಿಕ್ರಿಯಿಸುತ್ತದೆ ಎಂದು ನೋಡಲಾಯಿತು. 
ಚಳಿ, ಶೀತ ಇರುವಾಗ ರಗ್ಗು ಬೇಕೆಂದು ಕೇಳುವ ಕುದುರೆ, ಬಿಸಿಲಿನಲ್ಲಿ ರಗ್ಗು ಬೇಡವೆಂದು ಸನ್ನೆ ಮಾಡುತ್ತಿತ್ತು. ಇದರರ್ಥ ತರಬೇತುದಾರನ ಸೂಚನೆಗೆ ಬದಲಾಗಿ ಕುದುರೆಗಳು ತಮ್ಮ ಸ್ವಂತ ಪ್ರಚೋದನೆಯಿಂದ ಪ್ರತಿಕ್ರಿಯಿಸುತ್ತವೆ ಎಂದು ಸಂಶೋಧಕರು ಹೇಳುತ್ತಾರೆ.
ಸಂಶೋಧಕರು ಎರಡು ವಾರಗಳಲ್ಲಿ ಪ್ರತಿನಿತ್ಯ 10-15 ನಿಮಿಷಗಳವರೆಗೆ ತರಬೇತಿ ನೀಡಿ ಈ ಅಧ್ಯಯನ ನಡೆಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com