ಬೆರಳುಗಳ ಉದ್ದವು ಅಥ್ಲೀಟ್ ನ ಸಾಮರ್ಥ್ಯವನ್ನು ಹೇಳಬಲ್ಲದು!

ಮ್ಮ ಕೈಗಳು ನೀವು ಕ್ರೀಡೆಗಳಲ್ಲಿ ಎಷ್ಟು ಉತ್ತಮವೆಂದು ಹೇಳಬಲ್ಲವು!
ಬೆರಳಿನ ಉದ್ದವು ಅಥ್ಲೀಟ್ ನ ಸಾಮರ್ಥ್ಯವನ್ನು ಹೇಳಬಲ್ಲದು
ಬೆರಳಿನ ಉದ್ದವು ಅಥ್ಲೀಟ್ ನ ಸಾಮರ್ಥ್ಯವನ್ನು ಹೇಳಬಲ್ಲದು
ವಾಶಿಂಗ್ಟನ್ ಡಿ.ಸಿ:  ನಿಮ್ಮ ಕೈಗಳು ನೀವು ಕ್ರೀಡೆಗಳಲ್ಲಿ ಎಷ್ಟು ಉತ್ತಮವೆಂದು ಹೇಳಬಲ್ಲವು!, ಅಥ್ಲೆಟಿಕ್ ಸಾಮರ್ಥ್ಯವೂ ನಿಮ್ಮ ಬೆರಳುಗಳ ಉದ್ದಕ್ಕೂ ಸಂಬಧವಿದೆ ಎಂದು ಅಮೆರಿಕಾದ ವಿಜ್ಞಾನಿಗಳು ತಮ್ಮ ಸಂಶೋಧನೆಯಿಂದ ಕಂಡುಕೊಂಡಿದ್ದಾರೆ. 
ಒಬ್ಬರ ತೋರು ಬೆರಳು ಮತ್ತು ಉಂಗುರ ಬೆರಳಿನ ನಡುವಿನ ವ್ಯತ್ಯಾಸವು ಅವರ ಸ್ನಾಯುಬಲಕ್ಕೆ ಸಂಬಂಧವನ್ನು ಹೊಂದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ತೋರು ಬೆರಳಿನ ಉದ್ದ ಮತ್ತು ಉಂಗುರ ಬೆರಳಿನ ಉದ್ದದ ಅನುಪಾತವನ್ನು "ಅಂಕಿಯ ಅನುಪಾತ" ಎಂದು ಕರೆಯುತ್ತಾರೆ - ಹುಡುಗರಲ್ಲಿ ಸ್ನಾಯುವಿನ ಬಲಕ್ಕೆ ಈ ಅನುಪಾತವು ಸಂಬಂಧಿಸಿದೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
ಪುರುಷರಲ್ಲಿ ಉಂಗುರ ಬೆರಳು ವಿಶಿಷ್ಟವಾಗಿ ತೋರು ಬೆರಳುಗಳಿಗಿಂತ ಉದ್ದವಾಗಿದೆ, ಆದರೆ ಹೆಣ್ಣುಮಕ್ಕಳ  ಬೆರಳುಗಳು ಒಂದೇ ಉದ್ದವನ್ನು ಹೊಂದಿರುತ್ತವೆ, ಯು.ಎಸ್.ನ ಉತ್ತರ ಡಕೋಟದ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಗ್ರಾಂಟ್ ಟೊಮ್ಕಿನ್ಸನ್ ಈ ಸಂಶೋಧನೆ ಕುರಿತು ವಿವರಿಸಿದರು.
"ಬೆರಳುಗಳ ಉದ್ದದ ಈ ಅಂಕಿಯ ಅನುಪಾತವನ್ನು ಟೆಸ್ಟೋಸ್ಟೆರಾನ್ ಬೆಳವಣಿಗೆಯ ಸಮಯದಲ್ಲಿ ನಿರ್ಧರಿಸಲಾಗುತ್ತದೆ." ಅವರು ಹೇಳಿದರು.
ಟೆಸ್ಟೋಸ್ಟೆರಾನ್ ನೈಸರ್ಗಿಕ ಸ್ಟೀರಾಯ್ಡ್ ಹಾರ್ಮೋನ್ ಆಗಿದ್ದು, ಕ್ರೀಡಾ, ಅಥ್ಲೆಟಿಕ್ ಮತ್ತು ಫಿಟ್ ನೆಸ್ ಪರೀಕ್ಷೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಸಾಮಾನ್ಯವಾಗಿ, ಸಣ್ಣ ಅನುಪಾತಗಳುಳ್ಳ ಜನರು ಉತ್ತಮ ಕ್ರೀಡಾಪಟುಗಳು ಆಗಬಲ್ಲರು, ಅವರು ತಿಳಿಸಿದರು.
"ನಮ್ಮ ಅಧ್ಯಯನದ ಪ್ರಕಾರ ಕಡಿಮೆ ಅನುಪಾತಗಳುಳ್ಳ ಹುಡುಗರಿಗೆ ಅವರ ವಯಸ್ಸು ಅಥವಾ ದೇಹದ ಗಾತ್ರದ ಹೊರತಾಗಿ ಉತ್ತಮ ಕೈಬಳಕೆಯ ಸಾಮರ್ಥ್ಯವಿರುತ್ತದೆ" ಎಂದು ಟಾಮ್ಕಿನ್ಸನ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com