15 ವರ್ಷಗಳಲ್ಲಿ ಮಕ್ಕಳ ಆನ್ ಲೈನ್ ಗೇಮ್ ಆಡುವ ಅವಧಿ 30 ನಿಮಿಷದಷ್ಟು ಹೆಚ್ಚಳ: ಅದ್ಯಯನ ವರದಿ

ಸ್ಮಾರ್ಟ್ ಫೋನ್ ನಲ್ಲಿ ವೀಡಿಯೊ ಗೇಮ್ ಗಳನ್ನು ಆಡುವ ಅಥವಾ ಕಂಪ್ಯೂಟರನ್ನು ಬಳಸುವುದರ ಮೂಲಕ ಮಕ್ಕಳು ಆನ್ ಲೈನ್ ನಲ್ಲಿ ಕಳೆಯುವ ಸರಾಸರಿ ಸಮಯವು ........
15 ವರ್ಷಗಳಲ್ಲಿ ಮಕ್ಕಳ ಆನ್ ಲೈನ್ ಗೇಮ್ ಆಡುವ ಅವಧಿ 30 ನಿಮಿಷದಷ್ಟು ಹೆಚ್ಚಳ: ಅದ್ಯಯನ ವರದಿ
15 ವರ್ಷಗಳಲ್ಲಿ ಮಕ್ಕಳ ಆನ್ ಲೈನ್ ಗೇಮ್ ಆಡುವ ಅವಧಿ 30 ನಿಮಿಷದಷ್ಟು ಹೆಚ್ಚಳ: ಅದ್ಯಯನ ವರದಿ
Updated on
ಲಂಡನ್: ಸ್ಮಾರ್ಟ್ ಫೋನ್ ನಲ್ಲಿ ವೀಡಿಯೊ ಗೇಮ್ ಗಳನ್ನು ಆಡುವ ಅಥವಾ ಕಂಪ್ಯೂಟರನ್ನು ಬಳಸುವುದರ ಮೂಲಕ ಮಕ್ಕಳು ಆನ್ ಲೈನ್ ನಲ್ಲಿ ಕಳೆಯುವ ಸರಾಸರಿ ಸಮಯವು ಕಳೆದ ಹದಿನೈದು ವರ್ಷಗಳಲ್ಲಿ  30 ನಿಮಿಷಗಳಷ್ಟು ಹೆಚ್ಚಾಗಿದೆ ಎಂದು ಅದ್ಯಯನವೊಂದು ತಿಳಿಸಿದೆ
ಮಕ್ಕಳು ಮಲ್ಟಿ ಟಾಸ್ಕ್ ಗಳಲ್ಲಿ ಪ್ರವೀಣರಾಗುತ್ತಾರೆ. ಈ ಸಾಧನಗಳನ್ನು ಬಳಸುವುದರಿಂದ ಅವರ ಬುದ್ದಿ ಚುರುಕಾಗಲಿದೆ ಎಂದು ವರದಿಯಲ್ಲಿ ಹೇಳಿದ್ದು ಪೋಷಕರು ಆತಂಕಗೊಳ್ಳಬೇಕಾಗಿಲ್ಲ ಎಂದಿದೆ.
2000 ಮತ್ತು 2015 ರ ನಡುವೆ ಮಕ್ಕಳಲ್ಲಿ ಈ ಬೆಳವಣಿಗೆ ಕಂಡುಬಂದಿದೆ. ಇನ್ನು ಇದೇ ಅವಧಿಯಲ್ಲಿ ಟಿವಿ ವೀಕ್ಷಣೆಗಾಘಿ ಮಕ್ಕಳು 10 ನಿಮಿಷಗಳನ್ನು ವ್ಯಯಿಸುತ್ತಿದ್ದಾರೆ. ಮಕ್ಕಳು ವೀಡಿಯೋ ಗೇಮ್ ಗಳಲ್ಲಿ ಮತ್ತು ಕಂಪ್ಯೂಟರನ್ನು ಬಳಸುವ ಒಟ್ಟು 40 ನಿಮಿಷಗಳಷ್ಟು ಹೆಚ್ಚಾಗುತ್ತದೆ, ಸಾಂಪ್ರದಾಯಿಕ ಸ್ಕ್ರೀನ್-ಆಧಾರಿತ ಚಟುವಟಿಕೆಗಳಲ್ಲಿ ಮಕ್ಕಳು ಒಟ್ಟಾರೆ 30 ನಿಮಿಷಗಳ ಕಾಲ ಹೆಚ್ಚು ಸಮಯ ಕಳೆಯುತ್ತಾರೆ. ತಂತ್ರಜ್ಞಾನವು ಮಕ್ಕಳ ಸಮಯ ಮತ್ತು ಗಮನವನ್ನು ಸೆಳೆಯುತ್ತಿಲ್ಲ ಎಂದೂ ವರದಿಯಲ್ಲಿ ಹೇಳಲಾಗಿದೆ.
ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದ ಹಿರಿಯ ಸಂಶೋಧಕರು ಈ ಅದ್ಯಯನ ಕೈಗೊಂಡಿದ್ದು ಇದಕ್ಕಾಗಿ ತಂಡವು 2000-01 ಮತ್ತು 2014-15ರ ಎರಡು ಸಮೀಕ್ಷೆಗಳಿಂದ ದತ್ತಾಂಶವನ್ನು ಸಂಗ್ರಹಿಸಿದೆ, 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com