ಹಣ್ಣು-ತರಕಾರಿಗಳ ಸೇವನೆ 2 ವಾರಗಳಲ್ಲಿ ಒತ್ತಡವನ್ನು ನಿಯಂತ್ರಿಸುತ್ತವೆ: ಅಧ್ಯಯನ

ಹಣ್ಣು-ತರಕಾರಿಗಳ ಸೇವನೆಯ ಉಪಯೋಗ ಈಗಾಗಲೇ ನೀವು ಹಲವು ಕಡೆಗಳಲ್ಲಿ ಕೇಳಿ, ಓದಿ ತಿಳಿದುಕೊಂಡಿರಬಹುದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಹಣ್ಣು-ತರಕಾರಿಗಳ ಸೇವನೆಯ ಉಪಯೋಗ ಈಗಾಗಲೇ ನೀವು ಹಲವು ಕಡೆಗಳಲ್ಲಿ ಕೇಳಿ, ಓದಿ ತಿಳಿದುಕೊಂಡಿರಬಹುದು. ಕೇವಲ ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲದೆ ಮಾನಸಿಕವಾಗಿಯೂ ಹಣ್ಣು-ತರಕಾರಿಗಳಿಂದ ಉಪಯೋಗವಿದೆ ಎನ್ನುತ್ತಾರೆ ಸಂಶೋಧಕರು.
ಸಂಶೋಧಕರು ಹೇಳುವ ಪ್ರಕಾರ ಯಾವುದೇ ರಾಸಾಯನಿಕಗಳನ್ನು ಸಿಂಪಡಿಸದೆ, ಕೃತಕವಾಗಿ ಬೆಳೆಸದೆ ನೈಸರ್ಗಿಕವಾಗಿ ಬೆಳೆದ ಹಣ್ಣು-ತರಕಾರಿಗಳನ್ನು ತಿನ್ನುವುದರಿಂದ ಎರಡು ವಾರಗಳಲ್ಲಿ ಮನಸ್ಸಿನ ಒತ್ತಡ, ಗೊಂದಲ, ಆತಂಕ ಬಹುತೇಕ ಕಡಿಮೆಯಾಗುತ್ತದೆ.
ಒಟಾಗೊ ವಿಶ್ವವಿದ್ಯಾಲಯದ ಸಂಶೋಧಕರು 18ರಿಂದ 25 ವರ್ಷದೊಳಗಿನ 171 ಮಂದಿ ವಯಸ್ಕರನ್ನು ಸಂಶೋಧನೆ ಮಾಡಿ ಅವರ ಆಹಾರ ಪದ್ಧತಿ, ಡಯಟ್ ಅಭ್ಯಾಸಗಳ ಕುರಿತು ಅಧ್ಯಯನ ನಡೆಸಿ ತೀರ್ಮಾನಕ್ಕೆ ಬಂದಿದ್ದಾರೆ.
171 ಮಂದಿಯನ್ನು ಮೂರು ಗುಂಪುಗಳನ್ನಾಗಿ ವಿಭಜಿಸಿ ಅವರಲ್ಲಿ ಹಣ್ಣು, ತರಕಾರಿ ತಿನ್ನುವುದರಿಂದ ಉಂಟಾಗುವ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಅಧ್ಯಯನ ಮಾಡಿದ್ದಾರೆ.
15 ದಿನಗಳು ಕಳೆದ ನಂತರ ಕೆಲವರು ಮೊದಲಿನಂತೆಯೇ ತಿಂದರೆ, ಕೆಲವರು ಹೆಚ್ಚು ತಿನ್ನಲು ಅಪೇಕ್ಷೆ ಪಡುತ್ತಿದ್ದರು. ಮೂರನೇ ಗುಂಪಿನ ಸದಸ್ಯರಲ್ಲಿ ಮಾನಸಿಕ ಸ್ಥಿತಿಗತಿಯಲ್ಲಿ ಬಹಳ ಸುಧಾರಣೆ ಕಂಡುಬಂತು. 
ಅಧ್ಯಯನದ ಲೇಖಕಿ ಡಾ.ಟಮ್ಲಿನ್ ಕೊನ್ನರ್ ಹೇಳುವ ಪ್ರಕಾರ, ವಾರದ ಅಷ್ಟೂ ದಿನ ಏನೋ ತಿನ್ನುವ ಬದಲು ಹೆಚ್ಚೆಚ್ಚು ಹಣ್ಣು, ತರಕಾರಿ ಸೇವಿಸಬೇಕು ಎಂಬುದು ತಿಳಿಯಿತು ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com