ನವದೆಹಲಿ: ಪ್ರೀತಿ, ಪ್ರೇಮದ ಋತು ಎಂದು ಮುಂಗಾರು ಅಥವಾ ಮಳೆಗಾಲವನ್ನು ಕರೆಯುತ್ತಾರೆ. ಮಳೆಗಾಲದಲ್ಲಿ ಎಲ್ಲಿ ನೋಡಿದರಲ್ಲಿ ಹಸಿರು, ಪ್ರಕೃತಿ ಸೌಂದರ್ಯ, ಖುಷಿ ಮನೆಮಾಡಿರುತ್ತದೆ. ಹಾಗೆಂದು ಮಳೆಯಲ್ಲಿ ನೆನೆದುಕೊಂಡು ಹೋಗುವುದೆಂದರೆ ಬಹುತೇಕ ಮಂದಿಗೆ ಮನಸ್ಸಿಗೆ ಕಿರಿಕಿರಿಯಾಗುತ್ತದೆ. ಮಳೆಗಾಲದಲ್ಲ ಕೊಚ್ಚೆಯಾಗಿರುವ ಕೊಳಕಾದ ದಾರಿಗಳು, ನೀರು ತುಂಬಿದ ಬೀದಿಗಳು, ತೇವಾಂಶವುಳ್ಳ ತಂಪಾದ ವಾತಾವರಣ ಮತ್ತು ತೇವಗಳು ನಡೆದುಕೊಂಡು ಹೋಗುವವರಿಗೆ ಕಷ್ಟವಾಗಬಹುದು. ಪದೇ ಪದೇ ಕಾಲುಗಳು ಒದ್ದೆಯಾಗುತ್ತಿದ್ದರೆ ಬ್ಯಾಕ್ಟೀರಿಯಾ, ಫಂಗಸ್ ಸೋಂಕು, ರಿಂಗ್ ವರ್ಮ್, ತುರಿಕೆ ಮತ್ತು ಕೆಂಪು ಮೊದಲಾದವು ಆಗಬಹುದು.