5 ನಿಮಿಷ ವಿಡಿಯೋ ಗೇಮ್ ಆಡಿದರೆ ಕೆಲಸದ ಒತ್ತಡ ಕಡಿಮೆಯಾಗುತ್ತೆ!

ನಿರಂತರವಾಗಿ ಕೆಲಸ ಮಾಡುವುದರಿಂದ ಅದು ನಮ್ಮ ಮೆದುಳಿನಲ್ಲಿ ಒತ್ತಡ ಹೆಚ್ಚಾಗುತ್ತದೆ. ಆಗ ನಮ್ಮಲ್ಲಿ ಹತಾಶೆ ಮೂಡುತ್ತದೆ. ಇದರಿಂದ ಕೆಲಸದಲ್ಲಿ ಪ್ರಗತಿ ಕಾಣುವುದಿಲ್ಲ....
ವಿಡಿಯೋ ಗೇಮ್
ವಿಡಿಯೋ ಗೇಮ್
Updated on
ಆಧುನಿಕ ಜೀವನ ಶೈಲಿಯಿಂದಾಗಿ ಉದ್ಯೋಗಸ್ಥರಿಗೆ ಕೆಲಸದ ಒತ್ತಡಗಳು ಹೆಚ್ಚುತ್ತಿವೆ. ಅಂತಹ ಪರಿಸ್ಥಿತಿಯಿಂದ ಹೊರಬರಲು ಕೆಲಸದ ಮಧ್ಯೆ ಐದು ನಿಮಿಷ ವಿಶ್ರಾಂತಿ ತೆಗೆದುಕೊಂಡು ನಿಮ್ಮ ನೆಚ್ಚಿನ ವಿಡಿಯೋ ಗೇಮ್ ಆಡಿದರೆ ಅದು ನಿಮ್ಮಲ್ಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂಬ ಅಂಶ ಸಂಶೋಧನೆಯಿಂದ ತಿಳಿದುಬಂದಿದೆ. 
ನಿರಂತರವಾಗಿ ಕೆಲಸ ಮಾಡುವುದರಿಂದ ಅದು ನಮ್ಮ ಮೆದುಳಿನಲ್ಲಿ ಒತ್ತಡ ಹೆಚ್ಚಾಗುತ್ತದೆ. ಆಗ ನಮ್ಮಲ್ಲಿ ಹತಾಶೆ ಮೂಡುತ್ತದೆ. ಇದರಿಂದ ಕೆಲಸದಲ್ಲಿ ಪ್ರಗತಿ ಕಾಣುವುದಿಲ್ಲ. ಅಂತಹ ಸಮಯದಲ್ಲಿ ಐದು ನಿಮಿಷ ವಿಡಿಯೋ ಗೇಮ್ ಆಡುವುದು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ವರದಿ ಹೇಳಿದೆ. 
ಕೆಲಸದ ಒತ್ತಡದಿಂದಾಗಿ ನಾವು ಹೆಚ್ಚು ಕೆಲಸವನ್ನು ಬಹು ಬೇಗ ಮುಗಿಸಲು ಪ್ರಯತ್ನಿಸುತ್ತೇವೆ. ಅಂತಹ ಸಮಯದಲ್ಲಿ ನಾವು ವಿಶ್ರಾಂತಿಯನ್ನು ತೆಗೆದುಕೊಳ್ಳುವ ಬಗ್ಗೆ ಯೋಚನೆಯನ್ನೇ ಮಾಡುವುದಿಲ್ಲ ಅಂತಹ ಪರಿಸ್ಥಿತಿಯಲ್ಲಿನ ಕೆಲವು ಉದ್ಯೋಗಸ್ಥರನ್ನು ನಮ್ಮ ಸಂಶೋಧನೆಗೆ ಬಳಿಸಿಕೊಂಡು ಈ ಸಂಶೋಧನೆ ಮಾಡಲಾಯಿತು ಎಂದು ಅಮೆರಿಕದ ಕೇಂದ್ರ ಫ್ಲೋರಿಡಾ ವಿಶ್ವವಿದ್ಯಾಲಯದ ಮೈಕೇಲ್ ರುಪ್ ಹೇಳಿದ್ದಾರೆ. 
ಬಿಡುವಿಲ್ಲದೆ ಕೆಲಸ ಮಾಡುವ ಉದ್ಯೋಗಸ್ಥರಿಗೆ ನೀವು ನಿಮ್ಮ ಕೆಲಸದ ವೇಳೆ ಐದು ನಿಮಿಷ ವಿಶ್ರಾಂತಿ ಪಡೆದು ನಿಮಗೆ ಇಷ್ಟವಾದ ವಿಡಿಯೋ ಗೇಮ್ ಆಡುವಂತೆ ಸೂಚಿಸಿದೆವು. ಅವರೆಲ್ಲಾ ಹಾಗೆ ಮಾಡಿದರು ಇದರಿಂದ ಅವರು ಪುನಃ ತಮ್ಮ ಶಕ್ತಿಯನ್ನು ಕೇಂದ್ರಿಕರಿಸಿಕೊಂಡು ಕೆಲಸ ಮಾಡಲು ಪ್ರಯೋಜನವಾಯಿತು ಎಂದು ಮೈಕೆಲ್ ರುಪ್ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com