ಸರಳ ಕ್ರಮಗಳಿಂದ ನಿಮ್ಮ ಉಗುರುಗಳ ಸೌಂದರ್ಯ ಕಾಪಾಡಿಕೊಳ್ಳಿ

ನಿಮ್ಮ ಉಗುರು ಸುಲಭವಾಗಿ, ನಿಧಾನವಾಗಿ ಬೆಳೆಯುತ್ತದೆಯೇ ಮತ್ತು ದುರ್ಬಲವಾಗಿದೆಯೇ? ನಿಮ್ಮ ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನಿಮ್ಮ ಉಗುರು ಸುಲಭವಾಗಿ, ನಿಧಾನವಾಗಿ ಬೆಳೆಯುತ್ತದೆಯೇ ಮತ್ತು ದುರ್ಬಲವಾಗಿದೆಯೇ? ನಿಮ್ಮ ಉಗುರನ್ನು ಸುಂದರವಾಗಿ, ಆಕರ್ಷಣೀಯವಾಗಿ ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲವೇ? ಅದಕ್ಕೆ ಆಲಿವ್ ಎಣ್ಣೆ ಮತ್ತು ಲಿಂಬೆ ಹಣ್ಣಿನ ಜ್ಯೂಸ್ ಮಿಕ್ಸ್ ಮಾಡಿ ಹಚ್ಚಿ ಅಥವಾ ನಿಮ್ಮ ಕೈಗಳನ್ನು ಬಿಯರ್ ನಲ್ಲಿ ಮುಳುಗಿಸಿ ಎಂದು ತಜ್ಞರು ಹೇಳುತ್ತಾರೆ.
ಆಲಿವ್ ತೈಲ ಮತ್ತು ನಿಂಬೆ ರಸ ಮಿಶ್ರಣ: ಒಂದು ಚಮಚ ಆಲಿವ್ ಆಯಿಲ್ ಮತ್ತು ಸ್ವಲ್ಪ ನಿಂಬೆ ರಸದ ಮಿಶ್ರಣವನ್ನು ನಿಮ್ಮ  ಕೈ ಬೆರಳಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ನಂತರ ಕೈಗಳನ್ನು ನೆನೆಸಿ. ನಂತರ ತುಂಬಾ ಮೃದುವಾದ ಹಸ್ತಾಲಂಕಾರ ಮಾಡುವ ಕೈಗವಸುಗಳಲ್ಲಿ ರಾತ್ರಿಯಿಡೀ ಕೈಗಳನ್ನು  ಇಡಿ. ನಿಮ್ಮ ಕೈ ಮತ್ತು ಬೆರಳು ಚೆನ್ನಾಗಿ ಹೊಳೆಯುತ್ತಿರುತ್ತದೆ.
ಉಪ್ಪಿನ ಚಿಕಿತ್ಸೆ: ಸಮುದ್ರ ಉಪ್ಪು ಮತ್ತು ನಿಂಬೆ ಹಣ್ಣಿನ ಜ್ಯೂಸ್ ಅಥವಾ ಎಣ್ಣೆಯನ್ನು ಮಿಶ್ರಣ ಮಾಡಿ ಇಡಿ. ಹಗುರ ಬೆಚ್ಚಗಿನ ನೀರಿನಲ್ಲಿ ಇವುಗಳನ್ನು ಮಿಶ್ರಣ ಮಾಡಿ 10-15 ನಿಮಿಷಗಳ ಕಾಲ ಕೈಗಳನ್ನು ನೆನೆಸಿ. ವಾರದಲ್ಲಿ ಹೀಗೆ ಎರಡು ಬಾರಿ ಮಾಡುತ್ತಿರಿ.

ಬಿಯರ್ ಚಿಕಿತ್ಸೆ: ಅರ್ಧ ಕಪ್ ಬಿಯರ್ ತೆಗೆದುಕೊಂಡು ಆಲಿವ್ ಎಣ್ಣೆ ಜೊತೆ ಮಿಶ್ರಣ  ಮಾಡಿ, ಅದಕ್ಕೆ ಆಪಲ್ ವಿನೆಗರ್ ಕೂಡ ಸೇರಿಸಿ. ಇದರಲ್ಲಿ 10 ನಿಮಿಷಗಳ ಕಾಲ ನಿಮ್ಮ ಕೈಗಳನ್ನು  ಇಡಿ. ಕೈ ಚೆನ್ನಾಗಿ ಹೊಳೆಯುತ್ತದೆ.
ಮೊಟ್ಟೆಯ ಹಳದಿ ಮತ್ತು ಹಾಲು: ತೇವಾಂಶವು ಉಗುರುಗಳಿಗೆ ವರವಾಗಿದೆ. ಮೊಟ್ಟೆಯ ಹಳದಿ ಮತ್ತು ಹಾಲನ್ನು ಮಿಶ್ರಣ ಮಾಡಿ ಅದನ್ನು ಉಗುರುಗಳಿಗೆ ಹಚ್ಚುತ್ತಿರಿ. 
ವ್ಯಾಸಲೀನ್:ಅನೇಕ ಚರ್ಮದ ಸಮಸ್ಯೆಗಳಿಗೆ ಕೂಡ ಈ ಪೆಟ್ರೋಲಿಯಂ ಜೆಲ್ಲಿ ಸಹಾಯವಾಗುತ್ತದೆ. ದಿನಕ್ಕೊಂದು ಬಾರಿ ಉಗುರುಗಳಿಗೆ ವ್ಯಾಸಲೀನ್ ಹಚ್ಚಿದರೆ ಒಳ್ಳೆಯದು.
ಹರ್ಬಲ್ ಮಾಸ್ಕ್: ಕ್ಯಾಮೊಮೈಲ್ ಮತ್ತು ಪುದೀನಾ ಚಹಾವನ್ನು ಬಿಸಿ ನೀರಿನಲ್ಲಿ ಮಿಶ್ರಣ ಮಾಡಿ ಒಂದು-ಒಂದೂವರೆ ಗಂಟೆ ಕಾಲ ನೆನೆಸಿಡಿ. ಈ ನೀರಿನಲ್ಲಿ ಬೆರಳು, ಉಗುರು, ಕೈಗಳನ್ನಿಟ್ಟರೆ ಒಳ್ಳೆಯದು. 
ಉಗುರು ಬಣ್ಣ ತೆಗೆಯುವುದನ್ನು ಆದಷ್ಟು ತಪ್ಪಿಸಿಕೊಳ್ಳಿ: ನೈಲ್ ಪಾಲಿಷ್ ರಿಮೂವರ್ ನಲ್ಲಿ ರಾಸಾಯನಿಕ ಪದಾರ್ಥಗಳು, ಚರ್ಮಕ್ಕೆ ಹಾನಿ ಮಾಡುವ ಅಂಶಗಳಿರುತ್ತವೆ. ನೈಲ್ ಪಾಲಿಶ್ ರಿಮೂವರ್ ಗೆ ಬದಲಾಗಿ ಅಗ್ಗದ ಸುಗಂಧ ಅಥವಾ ನೈಸರ್ಗಿಕ ಉಗುರು ಬಣ್ಣ ಹೋಗಲಾಡಿಸುವ ವಸ್ತುವನ್ನು ಬಳಸಿ. ಇದು ಮಹಿಳೆಯರಿಗೆ ಉತ್ತಮ.
ತೆಂಗಿನ ಕಾಯಿ ಹಾಲು ಮಸಾಜ್: ನಿಮ್ಮ ಉಗುರಿಗೆ ತೆಂಗಿನ ಕಾಯಿ ಹಾಲಿನಿಂದ ಮಸಾಜ್ ಮಾಡುತ್ತಿರಿ. ಇದರಿಂದ ನಿಮ್ಮ ಉಗುರು ಮೃದುವಾಗುವುದಲ್ಲದೆ ಬಿಳಿ ಬಣ್ಣ ಕೂಡ ಬರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com