ಮೆಟ್ರೋ ನಗರಗಳಲ್ಲಿ ಅತಿ ನೆಚ್ಚಿನ ಆಲ್ಕೋಹಾಲ್ ಪಾನೀಯ ಬಿಯರ್: ಸಮೀಕ್ಷೆ

ಗುರುಗ್ರಾಮ್ ಮತ್ತು ಬೆಂಗಳೂರಿನಲ್ಲಿನ ವ್ಯಕ್ತಿಗಳು ಅತಿ ಹೆಚ್ಚು ಬಿಯರ್ ಸೇವಿಸಿದರೆ, ಮುಂಬೈ ಜನತೆ ಹೆಚ್ಚು ಕಿಕ್ ಕೊಡುವ 'ಹಾರ್ಡ್ ಡ್ರಿಂಕ್' ಆಲ್ಕೋಹಾಲ್ ಪಾನೀಯಗಳ ಮೊರೆ ಹೋಗುತ್ತಾರೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಗುರುಗ್ರಾಮ್ ಮತ್ತು ಬೆಂಗಳೂರಿನಲ್ಲಿನ ವ್ಯಕ್ತಿಗಳು ಅತಿ ಹೆಚ್ಚು ಬಿಯರ್ ಸೇವಿಸಿದರೆ, ಮುಂಬೈ ಜನತೆ ಹೆಚ್ಚು ಕಿಕ್ ಕೊಡುವ 'ಹಾರ್ಡ್ ಡ್ರಿಂಕ್' ಆಲ್ಕೋಹಾಲ್ ಪಾನೀಯಗಳ ಮೊರೆ ಹೋಗುತ್ತಾರೆ ಎನ್ನುತ್ತದೆ ಸಮೀಕ್ಷೆಯೊಂದು. 
ಜನರ ಪಾನಮತ್ತ ಸ್ವರೂಪವನ್ನು ಅಧ್ಯಯನ ಮಾಡಲು ಕ್ರೌನ್ ಇಟ್ ಎಂಬ ಪ್ರಚಾರ ಸಂಸ್ಥೆ ಗುರುಗ್ರಾಮ್, ದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ನಡೆಸಿರುವ ಈ ಸಮೀಕ್ಷೆಯಲ್ಲಿ ಬಿಯರ್ ನೆಚ್ಚಿನ ಆಲ್ಕೋಹಾಲ್ ಪಾನೀಯವಾಗಿ ಹೊರಹೊಮ್ಮಿದೆ. ಆಲ್ಕೋಹಾಲ್ ಸೇವಿಸುವವರಲ್ಲಿ ೪೭% ಮಂದಿ ಬಿಯರ್ ಗೆ ಒಲವು ತೋರಿಸಿದ್ದಾರೆ. 
ಈ ವರ್ಷ ಮಾರ್ಚ್ ನಿಂದ ಏಪ್ರಿಲ್ ನವರೆಗೆ ನಡೆದ ಈ ಸಮೀಕ್ಷೆಯಲ್ಲಿ ಸುಮಾರು ೧ ಲಕ್ಷ ಜನ ಭಾಗವಹಿಸಿದ್ದಾರೆ. 
ಬೆಂಗಳೂರು ಮತ್ತು ಗುರುಗ್ರಾಮ್ ನಲ್ಲಿ ಸುಮಾರು ೫೭% ಜನ ಬಿಯರ್ ಸೇವಿಸುವರಾಗಿದ್ದರೆ, ಮುಂಬೈ ನಲ್ಲಿ ೩೩% ಜನ ಹಾರ್ಡ್ ಡ್ರಿಂಕ್ ಗಳನ್ನು ಸೇವಿಸುವುದಾಗಿ ಹೇಳಿದ್ದಾರೆ. ಹಾರ್ಡ್ ಡ್ರಿಂಕ್ ಸೇವಿಸುವುದರಲ್ಲಿ ನಂತರದ ಸ್ಥಾನ ದೆಹಲಿಯದ್ದು ೩೨%.
ವೈನ್ ಇನ್ನು ಅಷ್ಟು ಜನಪ್ರಿಯವಾಗದೆ, ಇದರ ಸೇವನೆ ಕೇವಲ ೧ ರಿಂಡ್ ೨% ಇದೆ ಎನ್ನುತ್ತದೆ ಸಮೀಕ್ಷೆ. 
ಆಲ್ಕೋಹಾಲ್ ಪಾನೀಯಗಳಾದ ಬಿಯರ್, ಹಾರ್ಡ್ ಡ್ರಿಂಕ್, ಕಾಕ್ಟೇಲ್ ಮತ್ತು ವೈನ್ ಕುರಿತ ಸಮೀಕ್ಷೆ ಇದಾಗಿದ್ದು, ವಾರಾಂತ್ಯದಲ್ಲಿ ಆಲ್ಕೋಹಾಲ್ ಸೇವನೆ ಹೆಚ್ಚಿರುತ್ತದೆ ಮತ್ತು ರಾತ್ರಿ ೮ ರಿಂದ ಬೆಳಗ್ಗೆ (ಮಧ್ಯರಾತ್ರಿ) ೨ ರವರೆಗೆ ಇದು ತೀವ್ರವಾಗುತ್ತದೆ ಎನ್ನಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com