ಮಧ್ಯಾಹ್ನದ ಆ ಒಂದು ಕಿರುನಿದ್ರೆ ಸಿಬ್ಬಂದಿಗಳ ಸೃಜನಶೀಲತೆ ಹೆಚ್ಚಿಸುತ್ತದೆ ಗೊತ್ತಾ!

ಆಫೀಸಿನಲ್ಲಿ ನಿಮ್ಮ ಬಾಸ್ ನಿಮ್ಮ ಕೆಲಸದಲ್ಲಿ ಮತ್ತಷ್ಟು ಕ್ರಿಯಾಶೀಲತೆ ನಿರೀಕ್ಷಿಸುತ್ತಿದ್ದಾರೆಯೇ? ಅವರ ನಿರೀಕ್ಷೆಗಳನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಲಂಡನ್: ಆಫೀಸಿನಲ್ಲಿ ನಿಮ್ಮ ಬಾಸ್ ನಿಮ್ಮ ಕೆಲಸದಲ್ಲಿ ಮತ್ತಷ್ಟು ಕ್ರಿಯಾಶೀಲತೆ ನಿರೀಕ್ಷಿಸುತ್ತಿದ್ದಾರೆಯೇ? ಅವರ ನಿರೀಕ್ಷೆಗಳನ್ನು ಈಡೇರಿಸಲು, ಆಫೀಸಿನಲ್ಲಿ ನೀವು ಉತ್ತಮ ಸಿಬ್ಬಂದಿ ಎನಿಸಿಕೊಳ್ಳಲು ಮಧ್ಯಾಹ್ನ ಮೇಲೆ ಕಿರು ನಿದ್ದೆ ಮಾಡಿ. 
ಹೊಸ ಅಧ್ಯಯನವೊಂದರ ಪ್ರಕಾರ, ಮಧ್ಯಾಹ್ನ ಮೇಲೆ 20 ನಿಮಿಷಗಳ ನಿದ್ದೆ ನೌಕರರಲ್ಲಿ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ ಮತ್ತು ಸಮಸ್ಯೆಯನ್ನು ಬಗೆಹರಿಸಲು ಸಹಾಯ ಮಾಡುತ್ತದೆ ಎಂದು ತಿಳಿದುಬಂದಿರುವುದಾಗಿ ಟೆಲಿಗ್ರಾಫ್.ಕೊ.ಯುಕೆ  ವರದಿ ಮಾಡಿದೆ.
ಇಂಗ್ಲೆಂಡಿನ ಲೀಡ್ಸ್ ಯೂನಿವರ್ಸಿಟಿಯ ವಿಜ್ಞಾನಿಗಳು ಹೇಳುವ ಪ್ರಕಾರ, ಸಣ್ಣ ನಿದ್ದೆ ಮಾಡುವುದರಿಂದ ಸಕ್ಕರೆ ಕಾಯಿಲೆ, ಹೃದ್ರೋಗ ಸಮಸ್ಯೆ, ಮಾನಸಿಕ ಒತ್ತಡ ಮೊದಲಾದ ಸಮಸ್ಯೆಗಳನ್ನು ತಡೆಯಬಹುದು. ಮನುಷ್ಯನಿಗೆ ಸಾಕಷ್ಟು ನಿದ್ದೆಯಿಲ್ಲದಿದ್ದಾಗ ಈ ಎಲ್ಲಾ ಆರೋಗ್ಯ ಸಮಸ್ಯೆಗಳು ತಲೆದೋರುತ್ತವೆ.
ನಿದ್ದೆ ಮಾಡಲು ಸಾಕಷ್ಟು ತೊಂದರೆ ಅನುಭವಿಸುವವರಿಗೆ   ಒಂದು ಗಂಟೆ ಕೂಡ ಸರಿಯಾಗಿ ನಿದ್ದೆ ಬಾರದಿದ್ದರೆ ಹಾನಿಯಾಗುತ್ತದೆ ಎನ್ನುತ್ತಾರೆ ಅಧ್ಯಯನದ ಲೇಖಕ ನೆರಿನಾ ರಮ್ಲಖನ್.
ರಾತ್ರಿ ಹೊತ್ತು ನೀವು 5 ಗಂಟೆ ಸರಾಸರಿ ಯಾವಾಗಲೂ ನಿದ್ದೆ ಮಾಡುತ್ತಿದ್ದರೆ, ಒಂದು ದಿನ ರಾತ್ರಿ 4 ಗಂಟೆಯಷ್ಟು ಹೊತ್ತು ನಿದ್ದೆ ಮಾಡಿದರೆ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಕಚೇರಿಯಲ್ಲಿ ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. 
ಕಚೇರಿಗಳಲ್ಲಿ ನೌಕರರು ಸ್ವಲ್ಪ ಹೊತ್ತು ನಿದ್ದೆ ಮಾಡಲು ಮೇಲಾಧಿಕಾರಿಗಳು ಕೂಡ ಅವಕಾಶ ನೀಡಬೇಕು. ಇದರಿಂದ ಬಹಳ ಬದಲಾವಣೆಗಳಾಗುತ್ತವೆ ಎಂದು ಸಂಶೋಧಕರು ಹೇಳುತ್ತಾರೆ ಎಂದು ಸ್ವತಂತ್ರ ಅಧ್ಯಯನವೊಂದು ತಿಳಿಸಿದೆ. 
ಮಧ್ಯಾಹ್ನ ನಂತರ 2 ಗಂಟೆಯಿಂದ 4 ಗಂಟೆಯೊಳಗೆ ಕೇವಲ  20 ನಿಮಿಷ ನಿದ್ದೆ ಮಾಡಿದರೆ ಸಾಕು, ನಿಮ್ಮ ಕೆಲಸದಲ್ಲಿ ಮತ್ತು ಆರೋಗ್ಯದಲ್ಲಿ ಮಹತ್ತರ ಬದಲಾವಣೆಗಳಾಗುತ್ತವೆ.
ಸಣ್ಣ ಪ್ರಮಾಣದ ನಿದ್ದೆಯಿಂದ ನಿಮ್ಮಲ್ಲಿ ಕ್ರಿಯಾಶೀಲತೆ ಹೆಚ್ಚಿ ಸಮಸ್ಯೆಯನ್ನು ಬಗೆಹರಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಶರೀರದಲ್ಲಿ ನಿರೋಧಕ ವ್ಯವಸ್ಥೆಯನ್ನು ಮರು ಸಮತೋಲನದಲ್ಲಿಟ್ಟುಕೊಳ್ಳುತ್ತದೆ. ಸಿಬ್ಬಂದಿಗಳು ಆರೋಗ್ಯವಿಲ್ಲವೆಂದು ರಜೆ ತೆಗೆದುಕೊಳ್ಳುವುದು ಕೂಡ ಕಡಿಮೆಯಾಗುತ್ತದೆ.
ಕಚೇರಿಯಲ್ಲಿ ಕೆಲಸದ ವೇಳೆ ಸಿಬ್ಬಂದಿ ನಿದ್ದೆ ಮಾಡುವುದು ಕೇಳಲು ನಿಮಗೆ ಸರಿಯಲ್ಲದೆನಿಸಬಹುದು. ಆದರೆ ಸಿಬ್ಬಂದಿಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಅವರ ಕ್ರಿಯಾಶೀಲ ಕೆಲಸ, ಆರೋಗ್ಯಕ್ಕೆ ಸಣ್ಣ ಪ್ರಮಾಣದ ನಿದ್ದೆ ಒಳ್ಳೆಯದು ಎನ್ನುತ್ತಾರೆ ಡಾ. ರಮ್ಲಾಖಾನ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com