ಸತತವಾಗಿ ಶೋಕ ಸಂಗೀತ ಕೇಳುತ್ತಿದ್ದೀರಾ? ಜಾಗ್ರತೆ, ನೀವು ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚು!

ಸತತವಾಗಿ ಶೋಕ ಗೀತೆ(ಸಂಗೀತ) ಕೇಳುತ್ತಿದ್ದರೆ ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಅಧ್ಯಯನ ವರದಿಯೊಂದು ಎಚ್ಚರಿಸಿದೆ.
ಶೋಕ ಸಂಗೀತ
ಶೋಕ ಸಂಗೀತ
ನವದೆಹಲಿ: ಸತತವಾಗಿ ಶೋಕ ಗೀತೆ(ಸಂಗೀತ) ಕೇಳುತ್ತಿದ್ದರೆ ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಅಧ್ಯಯನ ವರದಿಯೊಂದು ಎಚ್ಚರಿಸಿದೆ.
ಇಂದಿನ ಯುವ ಜನತೆಯಲ್ಲಿ ಸತತವಾಗಿ ಸಂಗೀತ ಕೇಳುವ ಗೀಳಿದ್ದು, ಸಂಗೀತ ಕೇಳುವುದು ಸಾಮಾಜಿಕ ಸಂಬಂಧಗಳ ಮೇಲೂ ಪರಿಣಾಮ ಬೀರಲಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಇಷ್ಟೇ ಅಲ್ಲದೇ ಖಿನ್ನತೆಗೊಳಗಾದವರು ಸಂಗೀತವನ್ನು ಯಾವ ರೀತಿ ಬಳಕೆ ಮಾಡಿಕೊಳ್ಳಲಿದ್ದಾರೆ ಎಂಬುದನ್ನೂ ಈ ಅಧ್ಯಯನ ವರದಿಯ ಮೂಲಕ ಸಂಶೋಧಕರು ಕಂಡುಕೊಂಡಿದ್ದಾರೆ. 
ಆಸ್ಟ್ರೇಲಿಯಾದ ವೆಸ್ಟ್ರನ್ ಸಿಡ್ನಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ, ಬರಹಗಾರ ಸಾಂಡ್ರಾ ಗ್ಯಾರಿಡೊ ಈ ಬಗ್ಗೆ ಮಾಹಿತಿ ನೀಡಿದ್ದು, ಸತತವಾಗಿ ಶೋಕ ಸಂಗೀತ ಕೇಳುವ ವ್ಯಕ್ತಿಗಳಿಗೆ ಋಣಾತ್ಮಕ ಫಲಿತಾಂಶ ಹೊಂದುತ್ತಾರೆ ಎಂದು ಎಚ್ಚರಿಸಿದ್ದಾರೆ. 
ಅಧ್ಯಯನಕ್ಕಾಗಿ ಸುಮಾರು 697 ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, ಸಂಗೀತವನ್ನು ಕೇಳುವ ರೀತಿ, ಯಾವ ವಿಧದ ಸಂಗೀತ ಕೇಳುತ್ತಾರೆ ಹಾಗೂ ಅದರಿಂದ ಮನಸ್ಸಿನ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ  ಸಂಶೋಧಕರು ಮಾಹಿತಿ ಪಡೆದಿದ್ದು ಅಧ್ಯಯನ ವರದಿ ತಯಾರಿಸಿದ್ದಾರೆ. ಮನಶಾಸ್ತ್ರಕ್ಕೆ ಸಂಬಂಧಿಸಿದ ಜರ್ನಲ್ ನಲ್ಲಿ ಈ ಕುರಿತ ವರದಿ ಪ್ರಕಟವಾಗಿದೆ. 
ಇದೇ ವೇಳೆ ಸತತವಾಗಿ ಶೋಕ ಸಂಗೀತ ಕೇಳಿದರೆ ಖಿನ್ನತೆಗೆ ಒಳಗಾದರೆ, ಉತ್ತೇಜಕಾರಿ ಸಂಗೀತವನ್ನು ಕೇಳಿದರೆ ಹಾಗೂ ಅಂತಹ ಸಂಗೀತದ ಬಗ್ಗೆ ಮಾತನಾಡಿದರೆ ಸಕಾರಾತ್ಮಕ ಮನಸ್ಥಿತಿ ಹೆಚ್ಚುತ್ತದೆ ಎಂದೂ ಸಂಶೋಧಕರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com