ಹಾಕಿ ಕ್ರೀಡೆ ವೀಕ್ಷಣೆ ಉಳಿದ ಕ್ರೀಡೆಗಳಿಗಿಂತ ಹೃದಯಬಡಿತ ಹೆಚ್ಚಿಸುತ್ತದೆ!

ಹಾಕಿ ವೀಕ್ಷಣೆ ಉಳಿದ ಎಲ್ಲಾ ಕ್ರೀಡೆಗಳಿಗಿಂತ ಎದೆಬಡಿತವನ್ನು ಹೆಚ್ಚಿಸುತ್ತದೆ. ಇದು ಕಠಿಣ ವ್ಯಾಯಾಮ ಮಾಡಿದಾಗ ಉಂಟಾಗುವ ಎದೆಬಡಿತಕ್ಕೆ ಸಮನಾಗಿರುತ್ತದೆ ಎಂದು ಹೊಸ ಅಧ್ಯಯನ ವರದಿಯೊಂದು...
ಹಾಕಿ ಕ್ರೀಡೆ ವೀಕ್ಷಣೆ ಉಳಿದ ಕ್ರೀಡೆಗಳಿಗಿಂತ ಹೃದಯಬಡಿತ ಹೆಚ್ಚಿಸುತ್ತದೆ!
ವಾಷಿಂಗ್ ಟನ್: ಹಾಕಿ ವೀಕ್ಷಣೆ ಉಳಿದ ಎಲ್ಲಾ ಕ್ರೀಡೆಗಳಿಗಿಂತ ಎದೆಬಡಿತವನ್ನು ಹೆಚ್ಚಿಸುತ್ತದೆ. ಇದು ಕಠಿಣ ವ್ಯಾಯಾಮ ಮಾಡಿದಾಗ ಉಂಟಾಗುವ ಎದೆಬಡಿತಕ್ಕೆ ಸಮನಾಗಿರುತ್ತದೆ ಎಂದು ಹೊಸ ಅಧ್ಯಯನ ವರದಿಯೊಂದು ತಿಳಿಸಿದೆ. 
ಪಂದ್ಯದ ಸೋಲು-ಗೆಲುವಿನ ಥ್ರಿಲ್ ನಿಂದ ಉಂಟಾಗುವ ಎದೆಬಡಿತ ಹೃದಯ ರಕ್ತನಾಳದ ವ್ಯವಸ್ಥೆ ಮೇಲೆ ಪರಿಣಾಮ ಬೀರಲಿದೆ. ಉಳಿದ ಕ್ರೀಡೆಗಳಿಗಿಂತ ಹಾಕಿ ಕ್ರೀಡೆಯನ್ನು ಟಿವಿಯಲ್ಲಿ ವೀಕ್ಷಿಸುವುದರಿಂದ ಎದೆಬಡಿತ ಶೇ.75 ರಷ್ಟು ಏರಿಕೆಯಾಗುತ್ತದೆ. ನೇರವಾಗಿ ಪಂದ್ಯ ವೀಕ್ಷಿಸಿದರೆ ಶೇ.110 ರಷ್ಟು ಏರಿಕೆಯಾಗುತ್ತದೆ. ನೇರವಾಗಿ ವೀಕ್ಷಿಸುವುದು ಕಠಿಣ ವ್ಯಾಯಾಮ ಮಾಡಿದಾಗ ಉಂಟಾಗುವ ಎದೆಬಡಿತಕ್ಕೆ ಸಮನಾಗಿರುತ್ತದೆ ಎಂದು ಅಧ್ಯಯನ ನಡೆಸಿರುವ  ಮಾಂಟ್ರಿಯಲ್ ವಿಶ್ವವಿದ್ಯಾಲಯದ, ಮಾಂಟ್ರಿಯಲ್ ಹಾರ್ಟ್ ಇನ್ಸ್ಟಿಟ್ಯೂಟ್ ನ ಪ್ರೊಫೆಸರ್ ಪೌಲ್ ಖೈರಿ ತಿಳಿಸಿದ್ದಾರೆ. 
ತೀವ್ರವಾದ ಭಾವನಾತ್ಮಕ ಒತ್ತಡ ಪ್ರೇರಿತ ಪ್ರತಿಕ್ರಿಯೆ  ಹೃದಯ ರಕ್ತನಾಳದ ವ್ಯವಸ್ಥೆ ಪ್ರತಿಕೂಲ ಪರಿಣಾಮವನ್ನೂ ಉಂಟುಮಾಡಬಹುದು ಆದ್ದರಿಂದ ಅಧ್ಯಯನ ವರದಿ ಸಾರ್ವಜನಿಕರ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳ ದೃಷ್ಟಿಯಿಂದಲೂ ಮಹತ್ವ ಪಡೆದುಕೊಂಡಿದೆ ಎಂದು ಹಾರ್ಟ್ ಇನ್ಸ್ಟಿಟ್ಯೂಟ್ ನ ಪ್ರೊಫೆಸರ್ ಪೌಲ್ ಖೈರಿ ಅಭಿಪ್ರಾಯಪಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com