ಮಹಿಳೆಯರಿಗೆ ಮನೆಗೆಲಸ ಹೆಚ್ಚು, ಪುರುಷರಿಗೆ ವಿಶ್ರಾಂತ ಸಮಯ ಹೆಚ್ಚು: ಅಧ್ಯಯನ

ಆಧುನಿಕ ಸಮಾಜದಲ್ಲಿ ಲಿಂಗ ತಾರತಮ್ಯ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದ್ದರೂ ಕೂಡ ಅಮೆರಿಕಾದ ಅಧ್ಯಯನ ವಾಸ್ತವತೆಯನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ವಾಷಿಂಗ್ಟನ್: ಆಧುನಿಕ ಸಮಾಜದಲ್ಲಿ ಲಿಂಗ ತಾರತಮ್ಯ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದ್ದರೂ ಕೂಡ ಅಮೆರಿಕಾದ ಅಧ್ಯಯನ ವಾಸ್ತವತೆಯನ್ನು ಹೇಳುತ್ತದೆ. ರಜಾ ದಿನಗಳಲ್ಲಿ ಮನೆಗಳಲ್ಲಿ ತಂದೆಯಂದಿರು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರೆ ತಾಯಂದಿರು ಮಕ್ಕಳನ್ನು ನೋಡಿಕೊಳ್ಳುವುದು, ಮನೆಕೆಲಸಗಳಲ್ಲಿ ತೊಡಗಿರುತ್ತಾರೆ. ಇದು ಕೆಲಸಕ್ಕೆ ಹೋಗುವ ದಂಪತಿಯಲ್ಲಿ, ವಿದ್ಯಾವಂತ ದಂಪತಿಗಳಲ್ಲಿ ಕೂಡ ಈ ಪರಿಸ್ಥಿತಿಯಲ್ಲಿ ಕಾಣಬಹುದು ಎನ್ನುತ್ತದೆ ಅಧ್ಯಯನ.
 ಮೊದಲ ಮಗು ಹುಟ್ಟಿದ ಮೂರು ತಿಂಗಳು ಕಳೆದ ನಂತರ ಕೆಲಸವಿಲ್ಲದ ರಜಾ ದಿನಗಳಲ್ಲಿ ಪುರುಷರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರೆ ಮಹಿಳೆಯರಿಗೆ ಮನೆಕೆಲಸ, ಮಗುವನ್ನು ನೋಡಿಕೊಳ್ಳುವುದಿರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಪುರುಷರು ಮಕ್ಕಳನ್ನು ನೋಡಿಕೊಳ್ಳುತ್ತಿದ್ದರೆ ಮತ್ತು ಮನೆಕೆಲಸ ಮಾಡುತ್ತಿದ್ದರೆ ಮಹಿಳೆಯರು ಕೂಡ ಅವರಿಗೆ ನೆರವಾಗುತ್ತಾರೆ. ಪುರುಷರಂತೆ ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ.
ರಜಾ ದಿನಗಳಲ್ಲಿ ಪುರುಷರು ಮಕ್ಕಳನ್ನು ನೋಡಿಕೊಳ್ಳುವುದು, ಮನೆ ಕೆಲಸ ಮಾಡುತ್ತಿದ್ದರೆ ಮಹಿಳೆಯರು 46ರಿಂದ 49 ನಿಮಿಷ ಮಕ್ಕಳನ್ನು ನೋಡಿಕೊಳ್ಳುತ್ತಾರೆ. ಅದೇ ಪುರುಷರು ಅದಕ್ಕಿಂತ ಎರಡು ಪಟ್ಟು ಅಂದರೆ ಸುಮಾರು 101 ನಿಮಿಷಗಳ ಕಾಲ ವಿಶ್ರಾಂತಿ ಪಡೆಯುತ್ತಾರೆ. 
ಇದೊಂತರಾ ಬೇಸರ ಹುಟ್ಟಿಸುವ ನಡವಳಿಕೆ, ಈ ಆಧುನಿಕ ಸಮಾಜದಲ್ಲಿ ಕೂಡ ಮನೆ ಕೆಲಸ ಮತ್ತು ಮಕ್ಕಳನ್ನು ನೋಡಿಕೊಳ್ಳುವ ವಿಚಾರದಲ್ಲಿ ಕೆಲಸವನ್ನು ಸಮಾನವಾಗಿ ಹಂಚಲಾಗುತ್ತಿಲ್ಲ. ಪೋಷಕರ ಕರ್ತವ್ಯ ಮತ್ತು ಮನೆ ಕೆಲಸ ವಿಚಾರಗಳಲ್ಲಿ ಸ್ತ್ರೀ, ಪುರುಷರ ಮಧ್ಯೆ ವ್ಯತ್ಯಾಸವಿದೆ ಎನ್ನುತ್ತಾರೆ ಅಮೆರಿಕಾದ ಒಹಿಯೊ ಸ್ಟೇಟ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಕ್ಲೈರ್ ಕಾಂಪ್ ಡುಶ್.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com