ಶಾರೀರಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಸಂತೋಷ ವೃದ್ಧಿ

ಚುರುಕಾದ ನಡಿಗೆ, ತೋಟಗಾರಿಕೆ ಅಥವಾ ಭಾರ ಎತ್ತುವಿಕೆ ಇತ್ಯಾದಿ ಶಾರೀರಿಕ ಚಟುವಟಿಕೆಗಳಿಂದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚುರುಕಾದ ನಡಿಗೆ, ತೋಟಗಾರಿಕೆ ಅಥವಾ ಭಾರ ಎತ್ತುವಿಕೆ ಇತ್ಯಾದಿ ಶಾರೀರಿಕ ಚಟುವಟಿಕೆಗಳಿಂದ ತೂಕವನ್ನು ಕಳೆದುಕೊಳ್ಳಲು ಸಹಾಯವಾಗಬಹುದು. ಅದರ ಜೊತೆಗೆ ವ್ಯಾಯಾಮ, ಚಟುವಟಿಕೆಗಳು ಮನುಷ್ಯನನ್ನು ಸಂತೋಷವಾಗಿ ಕೂಡ ಇಡಬಹುದು ಎಂಬುದು ನಿಮಗೆ ಗೊತ್ತೇ?

ಅಧ್ಯಯನವೊಂದರ ಪ್ರಕಾರ, ಶಾರೀರಿಕ ಚಟುವಟಿಕೆಗಳು ನಿರಂತರವಾಗಿ ಸಿಕ್ಕಿದರೆ ನಿಮ್ಮ ಮನಸ್ಸು ಕೂಡ ಪ್ರಪುಲ್ಲವಾಗಿರುತ್ತದೆ.

ಸಂಶೋಧಕರ ತಂಡದ ವರದಿ ಪ್ರಕಾರ, ವಾರಕ್ಕೊಮ್ಮೆ ಶಾರೀರಿಕ ಚಟುವಟಿಕೆಗಳಲ್ಲಿ ತೊಡಗಿದ್ದರೆ 1.4 ಪಟ್ಟು ಹೆಚ್ಚು ಖುಷಿಯಾಗಿರುತ್ತಾರೆ. ಅತಿಯಾದ ತೂಕವಿರುವವರು ಶಾರೀರಿಕ ಚಟುವಟಿಕೆಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಂಡರೆ 1.5 ಪಟ್ಟು ದುಪ್ಪಟ್ಟು ಖುಷಿಯಾಗಿರುತ್ತಾರೆ.

ಶಾರೀರಿಕ ಚಟುವಟಿಕೆಗಳು ಮನುಷ್ಯನಲ್ಲಿ ಧನಾತ್ಮಕ ಚಿಂತನೆಗೆ ಕೂಡ ಕಾರಣವಾಗುತ್ತದೆ. ಖಿನ್ನತೆ, ಆತಂಕ ಮೊದಲಾದವುಗಳನ್ನು ದೂರ ಮಾಡುತ್ತದೆ. ಶಾರೀರಿಕ ಚಟುವಟಿಕೆಗಳನ್ನು ದಿನನಿತ್ಯ ಯಾವಾಗ ಮತ್ತು ಎಷ್ಟು ಪ್ರಮಾಣದಲ್ಲಿ ಮಾಡುತ್ತೇವೆ ಎನ್ನುವುದು ಕೂಡ ಮುಖ್ಯವಾಗುತ್ತದೆ ಎನ್ನುತ್ತಾರೆ ಮಿಚಿಗನ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ವೀಯನ್ ಚೆನ್. ಈ ಅಧ್ಯಯನ ಹೆಪ್ಪಿನೆಸ್ ಸ್ಟಡೀಸ್ ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಸೆರೆಬ್ರಲ್ ಪಾಲ್ಸಿ ಹೊಂದಿರುವ ಮಕ್ಕಳಲ್ಲಿ ಮತ್ತು ಹದಿಹರೆಯದವರಲ್ಲಿ, ದೈಹಿಕ ಚಟುವಟಿಕೆಯು ಸಂತೋಷದ ಮಟ್ಟವನ್ನು ಸೂಚಿಸುತ್ತದೆ ಮತ್ತು  ಇಳಿವಯಸ್ಸಿನಲ್ಲಿ ಕೂಡ ಶಾರೀರಿಕ ಚಟುವಟಿಕೆಗಳು ಮತ್ತು ಸಂತೋಷದ ಮಧ್ಯೆ ಸಂಬಂಧಗಳಿರುತ್ತವೆ. ಅಂಡಾಶಯದ ಕ್ಯಾನ್ಸರ್ ನಲ್ಲಿ ಬದುಕುಳಿದವರಲ್ಲಿ ಕೂಡ ಶಾರೀರಿಕ ಚಟುವಟಿಕೆಗಳು ಹೆಚ್ಚೆಚ್ಚು ಇದ್ದಷ್ಟು ಹೆಚ್ಚು ಸಂತೋಷಗಳು ಇರುತ್ತವೆ ಎಂದು ಸಂಶೋಧಕರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com