ಈ ಸರಳ ಅಭ್ಯಾಸಗಳಿಂದ ತಾರುಣ್ಯಭರಿತ ತ್ವಚೆಯನ್ನು ಕಾಪಾಡಿಕೊಳ್ಳಿ

ವಯಸ್ಸಾದಂತೆ ತ್ವಚೆಯೂ ತಾರುಣ್ಯ ಕಳೆದುಕೊಳ್ಳುವುದು ಸ್ವಾಭಾವಿಕ ಪ್ರಕ್ರಿಯೆ. ಅದನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲವಾದರೂ ಅದರಿಂದ ಉಂಟಾಗುವ ಪರಿಣಾಮಾಳನ್ನು ಕಡಿಮೆ ಮಾಡಬಹುದಾಗಿದೆ.
ಈ ಸರಳ ಅಭ್ಯಾಸಗಳಿಂದ ತಾರುಣ್ಯಭರಿತ ತ್ವಚೆಯನ್ನು ಕಾಪಾಡಿಕೊಳ್ಳಿ
ನವದೆಹಲಿ: ವಯಸ್ಸಾದಂತೆ ತ್ವಚೆಯೂ ತಾರುಣ್ಯ ಕಳೆದುಕೊಳ್ಳುವುದು ಸ್ವಾಭಾವಿಕ ಪ್ರಕ್ರಿಯೆ. ಅದನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲವಾದರೂ ಅದರಿಂದ ಉಂಟಾಗುವ ಪರಿಣಾಮಾಳನ್ನು ಕಡಿಮೆ ಮಾಡಬಹುದಾಗಿದೆ. 
ತ್ವಚೆಯ ತಾರುಣ್ಯ ಕಾಪಾಡಿಕೊಳ್ಳುವುದಕ್ಕೆ ಆರ್ ಎಎಸ್ ಲಕ್ಷುರಿ ಆಯಿಲ್ಸ್ ನ ಸ್ಥಾಪಕರಾದ ಶುಭಿಕಾ ಜೈನ್;  ಕೀಹಲ್ಸ್ ಇಂಡಿಯಾದ ಎಜುಕೇಶನ್ ಮ್ಯಾನೇಜರ್ ಶಾಮ್ ಕುಮಾರ್; ಸ್ಕಿನ್ ಅಲೈವ್ ಕ್ಲಿನಿಕ್ಸ್ ನ ನಿರ್ದೇಶಕ ಚಿರಂಜೀವ್ ಛಬ್ರ ಕೆಲವು ಸಲಹೆಗಳನ್ನು ನೀಡಿದ್ದಾರೆ. 
  • ತ್ವಚೆ ತಾರುಣ್ಯ ತಾರುಣ್ಯ ಕಳೆದುಕೊಳ್ಳುವುದಕ್ಕೆ ದೀರ್ಘಕಾಲದ ನಿರ್ಜಲೀಕರಣವೂ ಕಾರಣವಾಗಿದ್ದು, ತ್ವಚೆಯ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಪ್ರತಿ ದಿನ 8 ಲೋಟ ನೀರು ಕುಡಿಯಬೇಕು. 
  • ಒತ್ತಡಕ್ಕೆ ಕಾರಣವಾಗುವ ಹಾರ್ಮೋನ್ ಕಾರ್ಟಿಸೋಲ್ ನಿಂದಲೂ ತ್ವಚೆಯ ತಾರುಣ್ಯ ಕಡಿಮೆಯಾಗಲಿದ್ದು, ಒತ್ತಡ ನಿರ್ವಹಣೆಗೆ ಧ್ಯಾನ, ವ್ಯಾಯಾಮ ಅರೋಮಾಥೆರಪಿಗಳಿಂದ ತ್ವಚೆಯ ತಾರುಣ್ಯ ಕಾಪಾಡಿಕೊಳ್ಳಬಹುದಾಗಿದೆ. 
  • ಪ್ರತಿ ದಿನ ಸ್ಕಿನ್  ಕೇರ್ ನ್ನು ಪ್ರಾರಂಭಿಸಿ
  • ತ್ವಚೆಗೆ ಸರಿಹೊಂದುವ ಆಲ್ಕೊಹಾಲ್ ಫ್ರೀ ಟೋನರ್ ನ್ನು ಬಳಕೆ ಮಾಡಿ, ಇದರಿಂದ ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ. 
  • ಧೂಮಪಾನ ಅಭ್ಯಾಸ ತೊರೆಯುವುದರಿಂದಲೂ ತ್ವಚೆಯ ತಾರುಣ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. 
  • ಸಂಸ್ಕರಿಸಿದ ಆಹಾರ ಪದಾರ್ಥಗಳ ಸೇವನೆ ಕಡಿಮೆ ಮಾಡಿ 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com