ಸ್ಮಾರ್ಟ್ ಫೋನ್
ಜೀವನಶೈಲಿ
ಸ್ಮಾರ್ಟ್ ಫೋನ್ ಚಟ, ಮಾದಕ ವ್ಯಸನಕ್ಕೆ ಸಮ: ಅಧ್ಯಯನ ವರದಿ
ಅತಿ ಹೆಚ್ಚು ಸ್ಮಾರ್ಟ್ ಫೋನ್ ಬಳಕೆ ಮಾಡುವುದು ಮಾದಕ ವ್ಯವಸನಕ್ಕೆ ಸಮಾದದ್ದು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ವಾಷಿಂಗ್ ಟನ್: ಅತಿ ಹೆಚ್ಚು ಸ್ಮಾರ್ಟ್ ಫೋನ್ ಬಳಕೆ ಮಾಡುವುದು ಮಾದಕ ವ್ಯವಸನಕ್ಕೆ ಸಮಾದದ್ದು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಹೆಚ್ಚಿನ ಡಿಜಿಟಲ್ ವ್ಯಸನದಿಂದ ಮನುಷರಿಗೆ ಒಂಟಿತನ ಕಾಡುತ್ತದೆ, ಹೆಚ್ಚು ಖಿನ್ನತೆಗೆ ಒಳಗಾಗುತ್ತಾರೆ, ಆದ್ದರಿಂದ ಸ್ಮಾರ್ಟ್ ಫೋನ್ ಗಳನ್ನು ಅಗತ್ಯಕ್ಕೆ ತಕ್ಕಷ್ಟೇ ಬಳಸುವುದು ಸೂಕ್ತ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ನ್ಯೂರೋ ರೆಗ್ಯುಲೇಶನ್ ಗೆ ಸಂಬಂಧಿಸಿದ ಜರ್ನಲ್ ನಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದ್ದು, ಮಿತಿ ಮೀರಿದ ಸ್ಮಾರ್ಟ್ ಫೋನ್ ಬಳಕೆ ಮಾದಕ ವ್ಯಸನಕ್ಕೆ ಸಮನಾದದ್ದು, ಸ್ಮಾರ್ಟ್ ಫೋನ್ ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ ಮಿತಿಯಲ್ಲಿ ಬಳಕೆ ಮಾಡುವುದು ಉತ್ತಮ ಎಂದು ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.
ಸ್ಮಾಟ್ ಫೋನ್ ಗಳ ಮಿತಿ ಮೀರಿದ ಬಳಕೆ ಮೆದುಳಿನ ಮೇಲೆ ಮಾದಕ ವ್ಯವಸನ ಬೀರುವಷ್ಟೇ ಪರಿಣಾಮವನ್ನು ಬೀರುತ್ತದೆ ಎಂದು ಅಧ್ಯಯನದಲ್ಲಿ ತೊಡಗಿದ್ದ ಸ್ಯಾನ್ ಫ್ರಾನ್ಸಿಸ್ಕೋ ವಿವಿಯ ಎರಿಕ್ ಪೆಪರ್ ತಿಳಿಸಿದ್ದಾರೆ.
ಇದಿಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣಗಳೂ ಸಹ ಮನುಷ್ಯನ ಸಾಮಾಜಿಕ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದ್ದು, ಹೆಚ್ಚು ಸ್ಮಾರ್ಟ್ ಫೋನ್ ಹಾಗೂ ಹೆಚ್ಚು ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡುವ 135 ವಿದ್ಯಾರ್ಥಿಗಳಿಗೆ ಒಂಟಿತನ ಕಾಡಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ