ಎಲ್ಇಡಿ ಹೊರಸೂಸುವ ನೀಲಿ ಬೆಳಕಿನಿಂದ ಸ್ತನ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ಬರುವ ಅಪಾಯ!

ಎಲ್ಇಡಿ ಪರದೆಗಳು ಹೊರಸೂಸುವ ನೀಲಿ ಬೆಳಕಿನಿಂದ ಸ್ತನ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ಗಳ ಅಪಾಯ ಹೆಚ್ಚು ಎಂದು ಅಂತಾರಾಷ್ಟ್ರೀಯ ಮಟ್ಟದ ಸಂಶೋಧಕರ ತಂಡ ಹೇಳಿದೆ.
ಎಲ್ಇಡಿ
ಎಲ್ಇಡಿ
ಲಂಡನ್: ಎಲ್ಇಡಿ ಪರದೆಗಳು ಹೊರಸೂಸುವ ನೀಲಿ ಬೆಳಕಿನಿಂದ ಸ್ತನ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ಗಳ ಅಪಾಯ ಹೆಚ್ಚು ಎಂದು ಅಂತಾರಾಷ್ಟ್ರೀಯ ಮಟ್ಟದ ಸಂಶೋಧಕರ ತಂಡ ಹೇಳಿದೆ. 
ಬ್ರಿಟನ್ ನ ಎಕ್ಸೆಟರ್ ವಿಶ್ವವಿದ್ಯಾಲಯ ಹಾಗೂ ಬಾರ್ಸಿಲೋನಾ ಇನ್ಶ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್  ಈ ಬಗ್ಗೆ ಸಂಶೋಧನೆ ನಡೆದಿದ್ದು, ಎಲ್ಇಡಿ ಪರದೆಯಿಂದ ಹೊರಸೂಸುವ ನೀಲಿ ಬೆಳಕಿಗೂ ಸ್ತನ ಹಾಗೂ ಪ್ರಾಸ್ಟೇಟ್ ಕ್ಯಾನ್ಸರ್ ನ ಅಪಾಯ ಹೆಚ್ಚುವುದಕ್ಕೂ ಒಂದಕ್ಕೊಂದು ಸಂಬಂಧವಿರುವುದು ದೃಢಪಟ್ಟಿದೆ. 
ಒಳಾಂಗಣದಲ್ಲಿ ಎಲ್ ಇಡಿಗಳು ಹೊರಸೂಸುವ ನೀಲಿ ಬೆಳಕು ಹಾಗೂ ಹೊರಾಂಗಣದಲ್ಲಿ ಎಲ್ಇಡಿಗಳು ಹೊರಸೂಸುವ ನೀಲಿ ಬೆಳಕಿಗೆ ತೆರೆದುಕೊಳ್ಳುವ ಸ್ಪೇನ್ ಹಾಗೂ ಬಾರ್ಸಿಲೋನಾದಲ್ಲಿನ 20-85 ವರ್ಷದ  ಸುಮಾರು 4,000 ಜನರನ್ನು ಅಧ್ಯಯನಕ್ಕೊಳಪಡಿಸಲಾಗಿದ್ದು, ಎಲ್ಇಡಿ ಹೊರಸೂಸುವ ನೀಲಿ ಬೆಳಕಿನಿಂದ ಸ್ತನ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ಗೆ ತುತ್ತಾಗುವ ಅಪಾಯ ಶೇ.1.5 ರಿಂದ 2 ಪಟ್ಟು ಹೆಚ್ಚಾಗಿರುವುದನ್ನು ಕಂಡುಕೊಳ್ಳಲಾಗಿದೆ. ಈ ಕುರಿತ ಅಧ್ಯಯನ ವರದಿ ಪರಿಸರ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಜರ್ನಲ್ ನಲ್ಲಿ ಪ್ರಕಟಗೊಂಡಿದೆ  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com