ಪ್ರತಿದಿನ 90 ನಿಮಿಷಕ್ಕಿಂತ ಹೆಚ್ಚಿನ ವ್ಯಾಯಾಮ, ಮಾನಸಿಕ ಆರೋಗ್ಯದ ಮೇಲೆ ಪರಿಣಾಮ: ಅಧ್ಯಯನ

ವಾರದಲ್ಲಿ ಮೂರರಿಂದ 5 ಬಾರಿ ವ್ಯಾಯಾಮ ಮಾಡುವವರಿಗೆ ಉತ್ತಮವಾದ ಮಾನಸಿಕ ಆರೋಗ್ಯ ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್: ಸೈಕ್ಲಿಂಗ್, ಏರೋಬಿಕ್ಸ್ ಮತ್ತು ಜಿಮ್ ನಂತಹ ವ್ಯಾಯಾಮಗಳನ್ನು ಪ್ರತಿದಿನ ಸುಮಾರು 3 ಗಂಟೆಗಳಿಗೂ ಹೆಚ್ಚು ಕಾಲ ಮಾಡುವುದರಿಂದ ಮಾನಸಿಕ ಆರೋಗ್ಯ ಹದಗೆಡುತ್ತದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.
ಲ್ಯಾನ್ಸೆಟ್ ಸೈಕಿಯಾಟ್ರಿ ಜರ್ನಲ್ ನಲ್ಲಿ ಈ ಸಂಬಂಧ ವರದಿ ಪ್ರಕಟವಾಗಿದ್ದು, ವಾರದಲ್ಲಿ ಮೂರರಿಂದ 5 ಬಾರಿ ವ್ಯಾಯಾಮ  ಮಾಡುವವರಿಗೆ ಉತ್ತಮವಾದ ಮಾನಸಿಕ ಆರೋಗ್ಯ ಇರುತ್ತದೆ ಎಂಬುದಾಗಿ ಹೇಳಲಾಗಿದೆ.
ಇದಕ್ಕೆ ವಿರುದ್ದವಾಗಿ ಅಂದರೆ, ಹೆಚ್ಚಿನ ಪ್ರಮಾಣದಲ್ಲಿ ವ್ಯಾಯಾಮ ಮಾಡುವವರಿಗೆ ಹಲವು ತೊಂದರೆಗಳು ಎದುರಾಗಲಿದ್ದು,  ಹೆಚ್ಚನ ಸಮಯ ವ್ಯಾಯಾಮ ಮಾಡುವುದು ಯಾವಾಗಲೂ ಒಳ್ಳೆಯದಲ್ಲ, ಇವರ ಮಾನಸಿಕವಾಗಿ ಅವರು ಅಷ್ಟು ಮಟ್ಟಿಗೆ ಆರೋಗ್ಯವಾಗಿರುವುದಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ. 
ವಾರದಲ್ಲಿ 5 ಬಾರಿ 45 ನಿಮಿಷ ವ್ಯಾಯಾಮ ಮಾಡುವುದರಿಂದ ಉತ್ತಮ ಪ್ರಯೋಜನಗಳಾಗುತ್ತವೆ. ಯಾರು 90 ನಿಮಿಷಗಳ ಕಸರತ್ತು ಮಾಡುತ್ತಾರೋ ಅವರ ಮಾನಸಿಕ ಆರೋಗ್ಯವನ್ನು 45 ನಿಮಿಷ ವ್ಯಾಯಾಮ ಮಾಡುವವರಿಗೆ ಹೋಲಿಸಿದರೇ ಕಡಿಮೆ ಇರುತ್ತದೆ ಸಂಶೋಧಕರು ಹೇಳಿದ್ದಾರ. 
ಅಧಿಕ ಪ್ರಮಾಣದಲ್ಲಿ ವ್ಯಾಯಾಮ ಮಾಡುವುದರಿಂದ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಈ ಹಿಂದೆ ಜನ ನಂಬಿದ್ದರು. ಆದರ ಅಧ್ಯಯನಗಳು ಅದನ್ನು ನಿರಾಕರಿಸಿಪೆ.ಹೆಚ್ಚಿನ ವ್ಯಾಯಾಮ ಮಾಡುವುದರಿಂದ ಮಾನಸಿಕ ಆರೋಗ್ಯ ಹದಗೆಡುತ್ತದೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ.
ತಿಂಗಳಲ್ಲಿ 23 ಕ್ಕಿಂತ ಹೆಚ್ಚು ಬಾರಿ ಅಥವಾ 90 ನಿಮಿಷಗಳ ಕಾಲಕ್ಕಿಂತ ಅಧಿಕವಾಗಿ ವ್ಯಾಯಾಮ ಮಾಡುವವರ ಮಾನಸಿಕ ಆರೋಗ್ಯ ಕೆಟ್ಟದಾಗಿರುತ್ತದೆ. ಇದರಿಂದ ಯಾವ ರೀತಿಯ ಪರಿಣಾಮ ಆಗುತ್ತದೆ ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. 
ಕೆಲವರಿಗೆ ಮಾನಸಿಕ ಆರೋಗ್ಯ ಸರಿ ಇಲ್ಲ ಎಂದಾದರೇ ಅವರು ವಾರದಲ್ಲಿ ಆರರಿಂದ 7 ಬಾರಿ ವ್ಯಾಯಾಮ ಮಾಡುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಹೆಚ್ಚಿನ ವ್ಯಾಯಾಮ ಮಾಡುವುದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಅರೋಗ್ಯ ಹದಗೆಡುತ್ತದೆ.
ದೈಹಿಕ ಚಟುವಟಿಕೆ ಮುಖ್ಯಆದರೆ ಅದು ಅತಿಯಾಗಬಾರದು, ಪ್ರತಿ ಎರಡನೇ ದಿನ 45 ರಿಂದ 60 ನಿಮಿಷ ವ್ಯಾಯಾಮ ಸೂಕ್ತವಾಗಿರುತ್ತದೆ, ಒಂದು ವಾರದಲ್ಲಿ 150 ನಿಮಿಷ ವ್ಯಾಯಾಮ ಮಾಡಿದರೇ ಸಾಕು, ವಾರದಲ್ಲಿ 5 ದಿನ 30 ನಿಮಿಷ ಕಸರತ್ತು ಆರೋಗ್ಯಕರ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com