ಹರ್ಬಲ್ ಟೀ ಕುಡಿಯುವುದರಿಂದ ಆರೋಗ್ಯ, ಅಂಗಾಂಗಗಳಿಗೆ ಆಗುವ ಪ್ರಯೋಜನಗಳು: ಇಲ್ಲಿದೆ ಮಾಹಿತಿ

ಬಹುತೇಕ ಮಂದಿಗೆ ಬೆಳಗಿನ ಜಾವ ಟೀ ಇಲ್ಲದೇ ದಿನ ಪ್ರಾರಂಭವಾಗುವುದೇ ಇಲ್ಲ. ಬೆಳಗಿನ ಟೀಗೆ ಅಷ್ಟು ಮಹತ್ವವಿದೆ. ಕೇವಲ ರೂಢಿಯ ದೃಷ್ಟಿಯಿಂದ ಮಾತ್ರವಷ್ಟೇ ಅಲ್ಲದೇ ಆರೋಗ್ಯದ ದೃಷ್ಟಿಯಿಂದಲೂ ಟೀ
ಹರ್ಬಲ್ ಟೀ
ಹರ್ಬಲ್ ಟೀ
ಬಹುತೇಕ ಮಂದಿಗೆ ಬೆಳಗಿನ ಜಾವ ಟೀ ಇಲ್ಲದೇ ದಿನ ಪ್ರಾರಂಭವಾಗುವುದೇ ಇಲ್ಲ. ಬೆಳಗಿನ ಟೀಗೆ ಅಷ್ಟು ಮಹತ್ವವಿದೆ. ಕೇವಲ ರೂಢಿಯ ದೃಷ್ಟಿಯಿಂದ ಮಾತ್ರವಷ್ಟೇ ಅಲ್ಲದೇ ಆರೋಗ್ಯದ ದೃಷ್ಟಿಯಿಂದಲೂ ಟೀ ಕುಡಿಯುವುದು ಮಹತ್ವ ಪಡೆದಿದೆ. 
ವಿವಿಧ ರೀತಿಗಳ ಟೀಗಳಿದ್ದು, ಸಾಮಾನ್ಯ ಟೀ ದಿನದ ಪ್ರಾರಂಭದಲ್ಲಿ ಕುಡಿಯುವುದಾಗಿದ್ದರೆ, ಆರೋಗ್ಯಕ್ಕಾಗಿಯೇ ನಿರ್ದಿಷ್ಟ ವಿಧದ ಟೀ ಕುಡಿಯುವುದು ಈಗಿನ ಟ್ರೆಂಡ್. ಈ ಪೈಕಿ ಹರ್ಬಲ್ ಟೀ ಗೆ ಅತಿ ಹೆಚ್ಚು ಮಹತ್ವವಿದ್ದು ವಿಶ್ರಾಂತಿ, ನೋವು ನಿವಾರಕ, ಜೀರ್ಣ ಶಕ್ತಿಯನ್ನು ಹೆಚ್ಚಿಸುವುದಕ್ಕಾಗಿ, ರೋಗ ನಿರೋಧಕ ಶಕ್ತಿ ಹೆಚ್ಚಿಸುವುದಕ್ಕಾಗಿ ಹರ್ಬಲ್ ಟೀ ನ್ನು ಸೇವನೆ ಮಾಡಲಾಗುತ್ತದೆ. 
ಆತಂಕ ಅಥವಾ ಒತ್ತಡದಿಂದ ಹೊರಬರುವುದಕ್ಕೆ ಹರ್ಬಲ್ ಟೀ ಅತಿ ಹೆಚ್ಚು ಸಹಕಾರಿಯಾಗಿದ್ದು ಶೀತದಿಂದ ಮುಕ್ತಿಪಡೆಯುವುದಕ್ಕೂ ಹರ್ಬಲ್ ಟೀ ಅತ್ಯುತ್ತಮ ಆಯ್ಕೆಯಾಗಿದ್ದು. ತ್ವರಿತವಾಗಿ ಶೀತ, ಕೆಮ್ಮಿನಿಂದ ಪಾರಾಗುವುದಕ್ಕೆ ಹರ್ಬಲ್ ಟೀ ಪ್ರಯೋಜನಕಾರಿಯಾಗಿದೆ. 
ಆಂಟಿ ಆಕ್ಸಿಡೆಂಟ್ಸ್ ಅಂಶವನ್ನು ಹೆಚ್ಚು ಹೊಂದಿರುವ ಹರ್ಬಲ್ ಟೀ ಸೇವನೆಯಿಂದ ಮೆದುಳು ಸಹ ಚುರುಕಾಗಿ ಕೆಲಸ ಮಾಡುವುದಕ್ಕೆ ಸಾಧ್ಯವಾಗುತ್ತದೆ, ಅಷ್ಟೇ ಅಲ್ಲದೇ ಕಿಡ್ನಿ ಕಾರ್ಯನಿರ್ವಹಣೆಯನ್ನು ಉತ್ತಮಗೊಳಿಸುವುದಕ್ಕೂ ಸಹ ಹರ್ಬಲ್ ಟೀ ಪ್ರಯೋಜನಕಾರಿಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com