ನಿತ್ಯ ವ್ಯಾಯಾಮದಿಂದ ಧೂಮಪಾನಿಗಳ ಶ್ವಾಸಕೋಶ ಆರೋಗ್ಯ ವೃದ್ಧಿ!

ಧೂಮಪಾನ ವ್ಯಸನಿಗಳು, ಶ್ವಾಸಕೋಶದ ಮತ್ತು ಉಸಿರಾಟದ ಸಮಸ್ಯೆಯಿರುವವರು ದಿನನಿತ್ಯ ವ್ಯಾಯಾಮ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಲಂಡನ್: ಧೂಮಪಾನ ವ್ಯಸನಿಗಳು, ಶ್ವಾಸಕೋಶದ ಮತ್ತು ಉಸಿರಾಟದ ಸಮಸ್ಯೆಯಿರುವವರು ದಿನನಿತ್ಯ ವ್ಯಾಯಾಮ, ಯೋಗ ಮಾಡುತ್ತಿದ್ದರೆ ಶ್ವಾಸಕೋಶದ ಆರೋಗ್ಯವನ್ನು ಕಾಪಾಡಬಹುದು ಎನ್ನುತ್ತದೆ ಅಧ್ಯಯನವೊಂದು.
ಸಂಶೋಧಕರ ಪ್ರಕಾರ, ಶಾರೀರಿಕ ಚಟುವಟಿಕೆಗಳು ಮತ್ತು ಶ್ವಾಸಕೋಶದ ಆರೋಗ್ಯ ಒಂದಕ್ಕೊಂದು ಸಂಬಂಧ ಹೊಂದಿದೆ.
ಬರ್ಸಿಲೊನಾ ಗ್ಲೋಬಲ್ ಹೆಲ್ತ್ ಸಂಸ್ಥೆಯ ಸಂಶೋಧಕ ಎಲೈನ್ ಫ್ಯೂರ್ಟ್ಸ್ ಪ್ರಕಾರ, ಶಾರೀರಿಕ ಚಟುವಟಿಕೆ ಹೆಚ್ಚಾದಂತೆ ಉಸಿರಾಟದ ಸ್ನಾಯುಗಳನ್ನು ಚುರುಕುಗೊಳಿಸುತ್ತದೆ ಮತ್ತು ಆರೋಗ್ಯವನ್ನು ಕಾಪಾಡುತ್ತದೆ ಎಂದು ಹೇಳುತ್ತಾರೆ.
ತೊರಕ್ಸ್ ಎಂಬ ಪತ್ರಿಕೆಯಲ್ಲಿ ಈ ಅಧ್ಯಯನ ಪ್ರಕಟವಾಗಿದ್ದು 11 ದೇಶಗಳ 25 ಯುರೋಪ್ ಸಂಶೋಧನಾ ಕೇಂದ್ರಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು.
10 ವರ್ಷಗಳಲ್ಲಿ 3,912 ವಯಸ್ಕರು 27ರಿಂದ 57 ವರ್ಷದೊಳಗಿನವರನ್ನು ಅಧ್ಯಯನಕ್ಕೊಳಪಡಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com