ತಮ್ಮ ನಾಯಿ ಜೊತೆ ವಾಕಿಂಗ್ ಮಾಡೋ ಹಿರಿಯ ನಾಗರಿಕರು ಹೆಚ್ಚು ಫಿಟ್!

ಇಳಿ ವಯಸ್ಸಿನಲ್ಲಿ ಮನುಷ್ಯನ ದೇಹ ಮತ್ತು ಮನಸ್ಸು ಸದಾ ಉತ್ಸಾಹದಿಂದ ಇರಲು ವ್ಯಾಯಾಮ, ಯೋಗ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಂಡನ್: ಇಳಿ ವಯಸ್ಸಿನಲ್ಲಿ ಮನುಷ್ಯನ ದೇಹ ಮತ್ತು ಮನಸ್ಸು ಸದಾ ಉತ್ಸಾಹದಿಂದ ಇರಲು ವ್ಯಾಯಾಮ, ಯೋಗ, ದೈಹಿಕ ಕಸರತ್ತುಗಳು ಸ್ವಲ್ಪ ಮಟ್ಟಿಗೆ ಬೇಕಾಗುತ್ತದೆ.

ಉದ್ಯಾನವನದಲ್ಲಿ, ಮನೆಯ ಎದುರಿನ ತೋಟದಲ್ಲಿ ಸುತ್ತಾಡುವುದು, ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗುವುದು ಇತ್ಯಾದಿಗಳಿಂದ ವಯಸ್ಕರು ಸೇರಿದಂತೆ ಇಳಿವಯಸ್ಸಿನವರು ಹೆಚ್ಚು ಆರೋಗ್ಯಯುತವಾಗಿ ಬದುಕಲು ಸಹಕಾರಿಯಾಗುತ್ತದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ದೇಹಕ್ಕೆ ಸಿಗುವ ಎಲ್ಲಾ ರೀತಿಯ ಚಟುವಟಿಕೆಗಳು ಮಾನಸಿಕ ಆರೋಗ್ಯಕ್ಕೆ ಕೂಡ ಸಹಕಾರಿಯಾಗುತ್ತದೆ. ಇದರಿಂದ ಇಳಿವಯಸ್ಸಿನಲ್ಲಿ ಬೇಗನೆ ಮರಣ ಹೊಂದುವವರ ಅಪಾಯ ಮತ್ತು ಸಂಖ್ಯೆ ಕಡಿಮೆ ಎನ್ನುತ್ತಾರೆ ಲಂಡನ್ ನ ಯೂನಿವರ್ಸಿಟಿ ಕಾಲೇಜಿನ ಬರ್ಬರಾ ಜೆಫ್ಫರಿಸ್.

ವಾರಕ್ಕೆ 150 ನಿಮಿಷಗಳ ದೈಹಿಕ ಕಸರತ್ತು ದೇಹಕ್ಕೆ ಸಿಕ್ಕಿದರೆ ಉತ್ತಮ ಎಂದು ಬ್ರಿಟನ್ ವೃತ್ತಪತ್ರಿಕೆ ಸ್ಪೋರ್ಟ್ಸ್ ಮೆಡಿಸಿನ್ ಹೇಳುತ್ತದೆ.

ಅಧ್ಯಯನಕ್ಕೆ ಸಂಶೋಧಕರು ಸಾವಿರಕ್ಕೂ ಹೆಚ್ಚು ವೃದ್ಧ ಪುರುಷರನ್ನು ಒಳಪಡಿಸಿದ್ದರು.ಇವರ ವಯಸ್ಸು ಸುಮಾರು 78 ಆಗಿತ್ತು.

ವಾರದ ಏಳು ದಿನಗಳಲ್ಲಿ ಎಚ್ಚರದಲ್ಲಿರುವಾಗ ಇಳಿ ವಯಸ್ಸಿನವರು ಏನೇನು ಶಾರೀರಿಕ ಚಟುವಟಿಕೆ ಮಾಡುತ್ತಾರೆ, ಅದರ ಪ್ರಮಾಣ ಮತ್ತು ತೀವ್ರತೆಯನ್ನು ಸತತವಾಗಿ ಪತ್ತೆಹಚ್ಚಲು ಎಕ್ಸಲರೊಮೀಟರ್ ಎಂಬ ಗ್ಯಾಜೆಟ್ ನ್ನು ಬಳಸಲಾಗಿತ್ತು. ಅಧ್ಯಯನ ನಡೆದ 5 ವರ್ಷಗಳಲ್ಲಿ ತಪಾಸಣೆ ಸಂದರ್ಭದಲ್ಲಿ ಸುಮಾರು 194 ಮಂದಿ ಮೃತಪಟ್ಟರು.

ಪ್ರತಿದಿನ 30 ನಿಮಿಷಗಳ ಹೆಚ್ಚುವರಿ ಕಡಿಮೆ ತೀವ್ರತೆಯ ಚಟುವಟಿಕೆಯಿಂದ ಸಾವಿನ ಪ್ರಮಾಣದಲ್ಲಿ ಶೇಕಡಾ 17ರಷ್ಟು ಅಪಾಯಗಳು ಕಡಿಮೆ ಎಂದು ಅಧ್ಯಯನ ಹೇಳುತ್ತದೆ.ಸಾಧಾರಣದಿಂದ ಹೆಚ್ಚು ತೀವ್ರತೆಯ 30 ನಿಮಿಷಗಳ ಹೆಚ್ಚಿನ ಶಾರೀರಿಕ ಚಟುವಟಿಕೆಯಿಂದ ಶೇಕಡಾ 33ರಷ್ಟು ಸಾವಿನ ಪ್ರಮಾಣ ಕಡಿಮೆಯಾಗುವುದಲ್ಲದೆ ಜೀವಿತಾವಧಿ ಹೆಚ್ಚಾಗುತ್ತದೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com