ಒಂದು ಕಪ್ ಕಾಫಿ, ಜೊತೆಗೆ ಮಾತುಕತೆ: 'ನಾನು' ಎಂಬ ಅಹಂ ಹೋಗಿ 'ನಾವು' ಎಂಬ ಭಾವ

ಗುಂಪಾಗಿ ಕುಳಿತು ಕಾಫಿ ಸೇವನೆ ಮಾಡುತ್ತಾ ಸಂಭಾಷಣೆ ನಡೆಸಿದ್ದಾದರೆ ಅವರು ಹೆಚ್ಚು ಕ್ರಿಯಾಶೀಲರಾಗಿರುತ್ತಾರೆ ಎಂದು ಅಧ್ಯಯನವೊಂದರಿಂದ ತಿಳಿದು ಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ವಾಷಿಂಗ್ ಟನ್: ಗುಂಪಾಗಿ ಕುಳಿತು ಕಾಫಿ ಸೇವನೆ ಮಾಡುತ್ತಾ ಸಂಭಾಷಣೆ ನಡೆಸಿದ್ದಾದರೆ ಅವರು ಹೆಚ್ಚು ಕ್ರಿಯಾಶೀಲರಾಗಿರುತ್ತಾರೆ ಎಂದು ಅಧ್ಯಯನವೊಂದರಿಂದ ತಿಳಿದು ಬಂದಿದೆ.
ಅಮೆರಿಕಾದ ಓಹಿಯೋ ವಿಶ್ವವಿದ್ಯಾನಿಲಯ ನಡೆಸಿದ ಅಧ್ಯಯನದಲ್ಲಿ ಯಾರು ಕಾಫಿ ಸೇವನೆ ಮಾಡುತ್ತಾ ಗುಂಪು ಚರ್ಚೆ ನಡೆಸುವರೋ ಅವರು ತಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳುತ್ತಾರೆ ಎಂದು ತಿಳಿದುಬಂದಿದ್ದು ಕೆಫಿನ್ ಯುಕ್ತ ಕಾಫಿ ಸೇವನೆಯು ಅವರನ್ನು ಹೆಚ್ಚು ಜಾಗರೂಕರನ್ನಾಗಿಸಲಿದೆ ಎನ್ನಲಾಗಿದೆ.
ಕೆಫಿನ್ ಯುಕ್ತ ಕಾಫಿ ಸೇವಿಸಿದ ಜನರು ಹೆಚ್ಚಿನ ಜಾಗರೂಕತೆಯಿಂದಾಗಿ ತಂಡದಲ್ಲಿ ಧನಾತ್ಮಕ ಫಲಿತಾಂಶಗಳನ್ನು ಕಾಣಬಹುದು ಎಂದು ನಾವು ಕಂಡುಕೊಂಡಿದ್ದೇವೆ ಎನ್ನುವುದಾಗಿ ಲೇಖಕ ಅಮಿತ್ ಸಿಂಗ್ ಹೇಳಿದ್ದಾರೆ.
ಕೆಫಿನ್ ಮಾನವನನ್ನು ಹೇಗೆ ಜಾಗರೂಕನನ್ನಾಗಿಸುತ್ತದೆ ಎನ್ನುವುದನ್ನು ಇದುವರೆಗೆ ಅನೇಕ ಹಲವು ಅಧ್ಯಯನದಲ್ಲಿ ನೋಡಿದ್ದೇವೆ. ಆದರೆ ಇದು ತಂಡವೊಂದರ ಮೇಲೆ ಹೇಗೆ ಪ್ರಭಾವ ಬೀರಲಿದೆ ಎನ್ನುವುದನ್ನು ಬಹುರಂಗಪಡಿಸಿದ ಮೊದಲ ವರದಿ ಇದು ಎಂದು ಸಿಂಗ್ ಹೇಳಿದ್ದಾರೆ. ಸಿಂಗ್ ಜತೆಗೆ ವಾಸು ಉನ್ನಾವ ಹಾಗೂ ಎಚ್.ರಾವ್ ಉನ್ನಾವ ಎನ್ನುವವರು ಸೇರಿ ಈ ವರದಿಯನ್ನು ತಯಾರಿಸಿದ್ದಾರೆ.
ಮೊದಲನೆ ಅಧ್ಯಯನದಲ್ಲಿ ಕಾಫಿ ಸೇವಿಸುವ 72 ಪದವಿಪೂರ್ವ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಲಾಗಿತ್ತು. ಇವರಿಗೆ ಮೊದಲು ಕಾಫಿ ಕುಡಿಯಲು ಹೇಳಲಾಗಿತ್ತು. ಹೀಗೆ ಕಾಪಿ ಸೇವಿಸಿದ ಅರ್ಧದಷ್ಟು ಮಂದಿ ಇದರ ಪ್ರಭಾವದಿಂದಾಗಿ ಹೆಚ್ಚು ಜಾಗರೂಕರಾಗಿ ಚರ್ಚೆಯಲ್ಲಿ ಪಾಲ್ಗೊಂಡಿದ್ದರೆನ್ನುವುದು ತಿಳಿದಿದೆ. ಆ ಗುಂಪಿಗೆ ವಿವಾದಾಸ್ಪದ ವಿಚಾರಗಳನ್ನು ಚರ್ಚಿಸಲು ಹೇಳಲಾಗಿತ್ತು. ಸುಮಾರು  15 ನಿಮಿಷದ ಚರ್ಚೆಯ ನಂತರಸದಸ್ಯರು ತಮ್ಮನ್ನು ಮತ್ತು ಇತರ ಗುಂಪಿನ ಸದಸ್ಯರನ್ನು ಮೌಲ್ಯಮಾಪನ  ಮಾಡಿಕೊಳ್ಳುವಂತೆ ಸೂಚಿಸಲಾಗಿತ್ತು. ಅಂತಿಮವಾಗಿ ಕಾಫಿ ಸೇವನೆ ಮಾಡಿದ್ದವರು ತಮ್ಮನ್ನು ಹಾಗೂ ಇತರೆ ಗುಂಪಿನ ಸದಸ್ಯರನ್ನು ಹೆಚ್ಚು ಧನಾತ್ಮಕವಾಗಿ ಗುರುತಿಸಿದ್ದರು.
ಇದೇ ಸಂಬಂಧ ನಡೆದ ಇನ್ನೊಂದು ಅಧ್ಯಯನದಲ್ಲಿ  61 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅವರಲ್ಲಿ ಅರ್ಧದಷ್ಟು ಮಂದಿ ಮಾತ್ರ ಕೆಫಿನ್ ಯುಕ್ತ ಕಾಫಿ ಸೇವಿಸಿದ್ದರು, ಇನ್ನರ್ಧ ಮಂದಿ ಕೆಫಿನ್ ರಹಿತ ಕಾಫಿ ಸೇವಿಸಿದ್ದಾರೆ. ಬಳಿಕ ಮೊದಲಿನಂತೆಯೇ ಚರ್ಚಾ ಸಮಯವನ್ನು ನೀಡಲಾಗಿ ಕೆಫಿನ್ ಯುಕ್ತ ಕಾಫಿ ಸೇವನೆ ಮಾಡಿದವರು ತಮ್ಮನ್ನು, ಹಾಗೂ ಎದುರಿನ ಗುಂಪಿನವರನ್ನು ಹೆಚ್ಚು ಧನಾತ್ಮಕವಾಗಿ ಗುರುತಿಸಿದರೆ ಆದರೆ ಕೆಫಿನ್ ರಹಿತ ಕಾಫಿ ಸೇವನೆ ಮಾಡಿದವರು ಇಷ್ಟು ನಿರ್ಣಾಯಕವಾಗಿ ಯೋಚಿಸಿರಲಿಲ್ಲ.
"ಜನರು ಹೆಚ್ಚು ಜಾಗರೂಕರಾಗಿರುವಾಗ ಅವರು ತಮ್ಮನ್ನು ಮತ್ತು ಇತರ ಗುಂಪಿನ ಸದಸ್ಯರನ್ನು ಹೆಚ್ಚು ಒಳಗೊಂಡು ಇರುತ್ತಾರೆ.ಅದು ಅವರಿಗೆ ಹೆಚ್ಚು ಧನಾತ್ಮಕ ವರ್ತನೆಗಳನ್ನು ನೀಡುತ್ತದೆ" ಎಂದು ಸಿಂಗ್ ಹೇಳಿದರು.
ತಮ್ಮ ಎರಡನೇ ಗುಂಪು ಚರ್ಚೆಯ ವಿಶ್ಲೇಷಣೆ ಮಾಡಿದ ಸಂಶೋಧಕರು ಗುಂಪಿನ ಸದಸ್ಯರು ಯಾರು ಹೆಚ್ಚು ಮಾತನಾಡಿದ್ದಾರೆ,ವಿಷಯಕ್ಕೆ ಯಾರು ಹೆಚ್ಚು ಅಂಟಿಕೊಂಡಿದ್ದಾರೆ ಎನ್ನುವುದನ್ನು ಸಹ ಗಮನಿಸಿದ್ದಾರೆ. ಜನರು ಕೆಫಿನ್ ಯುಕ್ತ ಕಾಫಿ ಸೇವನೆ ಮಾಡಿದರೆ ಹೆಚ್ಚು ಮಾತನಾಡುವವರಾಗಿರುತ್ತಾರೆ, ಅವರು ತಮ್ಮ ವಿಚಾರಗಳಿಗೆ ಹೆಚ್ಚು ಅಂಟಿಕೊಳ್ಳುತ್ತಾರೆ ಎಂದು ತಿಳಿದುಕೊಂಡರು.
ಕೆಫಿನ್ ಯುಕ್ತ ಕಾಫಿ ಸೇವಿಸಿದವರು ತಮ್ಮ ಗುಂಪಿನೊಡನೆ ಕೆಲಸ ನಿರ್ವಹಿಸಲು ಹೆಚ್ಚು ಆಸಕ್ತರಿದ್ದಾರೆ ಎನ್ನುವುದನ್ನು ಅಧ್ಯಯನ ಹೇಳಿದೆ. "ಕಾಫಿಯು ಗುಂಪು ಚರ್ಚೆಯನ್ನು ಹೆಚ್ಚಾಗಿ ಅಸಹನೀಯವಾಗಿಸುವುದಿಲ್ಲ ಎನ್ನುವುದು ತಿಳಿದಂತಾಗಿದೆ " ಸಿಂಗ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com