ವಾಸ್ತವತಾವಾದದಿಂದ ವೈವಾಹಿಕ ಜೀವನ ಹೇಗೆ ಹಾಳಾಗುತ್ತದೆ ಗೊತ್ತೆ?

ಪತಿ ಮತ್ತು ಪತ್ನಿಯ ಜೊತೆ ಪ್ರೀತಿ,ಹೊಂದಾಣಿಕೆ ಇರಲು ಯಾವ ಅಂಶಗಳು ....
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಪತಿ ಮತ್ತು ಪತ್ನಿಯ ಜೊತೆ ಪ್ರೀತಿ,ಹೊಂದಾಣಿಕೆ ಇರಲು ಯಾವ ಅಂಶಗಳು ಜೀವನದುದ್ದಕ್ಕೂ ಕಾರಣವಾಗುತ್ತದೆ ಎಂಬ ವಿಷಯ ಕುರಿತು ಆಧುನಿಕ ಜೀವನಶೈಲಿಯಲ್ಲಿ ಬಹಳ ಚರ್ಚೆಯಾಗುತ್ತದೆ. ಹಿಂದಿನ ಕಾಲದಲ್ಲಿ ಗಂಡ-ಹೆಂಡತಿ ಸಂತೋಷವಾಗಿ ಹಲವು ವರ್ಷಗಳ ಕಾಲ ಜೀವನ ನಡೆಸುತ್ತಿದ್ದರು. ಇಂದು ಆಧುನಿಕ ಸಿರಿವಂತಿಕೆ ಜೀವನಶೈಲಿಯಲ್ಲಿ ಪತಿ-ಪತ್ನಿ ನಡುವೆ ಹೊಂದಾಣಿಕೆ, ಸಾಮರಸ್ಯಗಳು ಕಡಿಮೆಯಾಗುತ್ತಿವೆ ಎಂಬ ಮಾತುಗಳು ಕೇಳಿಬರುವುದನ್ನು ನೋಡಿದ್ದೇವೆ.

ಇದು ಹೌದು ಎನ್ನುತ್ತದೆ ಹೊಸ ಅಧ್ಯಯನವೊಂದು. ಆಸ್ತಿ-ಪಾಸ್ತಿ, ವಸ್ತುಗಳ ಮೇಲಿನ ಹಂಬಲ, ಹಪಾಹಪಿ ವೈವಾಹಿಕ ಜೀವನವನ್ನು ಸಂತೋಷದಿಂದ ಅಸಂತೋಷದೆಡೆಗೆ ಕೊಂಡೊಯ್ಯುತ್ತದೆ ಎನ್ನುತ್ತದೆ ಅಧ್ಯಯನ.

ಹಣ, ಆಸ್ತಿ, ಸಂಪತ್ತು ಗಳಿಸುವ ಆಸೆಯಲ್ಲಿ ದಂಪತಿಯ ಬಯಕೆ, ಬೇಡಿಕೆ, ಆಕಾಂಕ್ಷೆಗಳು ಹೆಚ್ಚಾುಗುತ್ತಾ ಹೋಗುತ್ತವೆ. ಇದರಿಂದ ಅವರಿಬ್ಬರ ನಡುವಿನ ಬಾಂಧವ್ಯ ಕುಗ್ಗುತ್ತಾ ಸಾಗುತ್ತದೆ. ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ.

ಜೀವನದಲ್ಲಿ ಭೌತಿಕ ವಸ್ತುಗಳ ಬಯಕೆ ಇತರ ಅಗತ್ಯಗಳನ್ನು ಹೆಚ್ಚಿಸುತ್ತಾ ಹೋಗಿ ನಮ್ಮ ಕುಟುಂಬದವರ ಜೊತೆ ಸಂವಹನ ಮಾತುಕತೆಗಳಿಗೆ ಸಮಯದ ಅಭಾಯವನ್ನು ಸೃಷ್ಟಿಸುತ್ತದೆ. ಇದರಿಂದ ಮದುವೆಯ ಬಗ್ಗೆ ಸಂತೃಪ್ತಿ ಮತ್ತು ಅಗತ್ಯವನ್ನು ಕಡಿಮೆ ಮಾಡುತ್ತದೆ.

ಯಾರು ಜೀವನದಲ್ಲಿ ಹಣ ಮತ್ತು ಭೌತಿಕ ವಸ್ತುಗಳನ್ನು ಹೆಚ್ಚು ಇಷ್ಟಪಡುತ್ತಾರೊ ಅವರು ವೈವಾಹಿಕ ಜೀವನದಲ್ಲಿ ಖುಷಿಯಾಗಿರುವುದಿಲ್ಲ ಎನ್ನುತ್ತಾರೆ ಒಹಿಯೊದ ಬ್ರಿಗಾಮ್ ಯಂಗ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಶ್ಲೆ ಲೆಬರನ್.

ಭೌತಿಕ ವಸ್ತುಗಳು ಸಂತೋಷದ ಸಂಬಂಧ-ಆಧಾರಿತ ವಿಧಾನಕ್ಕಿಂತ ಹೆಚ್ಚಾಗಿ ಹತೋಟಿ ಆಧಾರಿತ ಅಂಶಗಳನ್ನು ಹೊಂದಿರುತ್ತದೆ. ಹಣ, ಸಂಪತ್ತುಗಳಿಗೆ ಹೆಚ್ಚು ಬೆಲೆ ನೀಡುವ ಪತಿ ಅಥವಾ ಪತ್ನಿ ಭೌತಿಕ ವಸ್ತುಗಳಲ್ಲಿ ಖುಷಿ ಪಡುತ್ತಾರೆ, ಸಂಬಂಧಗಳಿಗೆ ಬೆಲೆ ನೀಡುವುದಿಲ್ಲ. ಇದರಿಂದ ಅವರಿಬ್ಬರ ನಡುವಿನ ಸಂಬಂಧ ಹಳಸುತ್ತಾ ಹೋಗುತ್ತದೆ.

ಆದರೆ ದಂಪತಿ ಈ ಮನೋಭಾವದಿಂದ ಹೊರಗೆ ಬರಬಹುದು. ಪರಸ್ಪರ ಮಾತುಕತೆಯಾಡಿ, ಚರ್ಚೆ ನಡೆಸುತ್ತಾ ತಮ್ಮ ಅಗತ್ಯ, ಪ್ರಾಮುಖ್ಯತೆಗಳಲ್ಲಿ ಬದಲಾವಣೆ ಮಾಡಿಕೊಂಡರೆ ದಂಪತಿ ಖುಷಿಯಾಗಿರಬಹುದು ಎನ್ನುತ್ತಾರೆ ಅವರು.

ಅಧ್ಯಯನಕ್ಕೆ ಸಂಶೋಧಕರು 1,310 ವೈವಾಹಿತರನ್ನು ಒಳಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com